ರು 5 ಸಾವಿರ ತೆಗೆಯಿತು, ವಿದೇಶಿ ವಿದ್ಯಾರ್ಥಿನಿಯ ಪ್ರಾಣ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 2: ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿ ತಿಮ್ಮೇಗೌಡ ಲೇಔಟಿನಲ್ಲಿ ಉಗಾಂಡಾ ಮೂಲದ ವಿದ್ಯಾರ್ಥಿನಿಯನ್ನು ಹಿಮಾಚಲ ಪ್ರದೇಶ ಮೂಲದ ಯುವಕ ಬರ್ಬರವಾಗಿ ಇರಿದು ಹತ್ಯೆ ಮಾಡಿದ್ದಾನೆ.

ನಕಾಯಾಕಿ ಪ್ಲೋರೆನ್ಸ್ ಉಗಾಂಡ ಮೂಲದ ವಿದ್ಯಾರ್ಥಿನಿ, ಇನ್ನು ಇಶಾನ್ ಹತ್ಯೆ ಮಾಡಿದ ವಿದ್ಯಾರ್ಥಿ. ಇಶಾನ್ ಎಂ.ಟೆಕ್ ಪದವೀಧರ ಉದ್ಯೋಗ ಅರಸಿ ಬೆಂಗಳೂರು ಸೇರಿದ್ದ ಅವನಿಗೆ ಉಗಾಂಡ ವಿದ್ಯಾರ್ಥಿನಿ ನಕಾಯಾಕಿ ಪರಿಚಯವಾಗಿದ್ದು, ಪರಸ್ಪರ ಒಪ್ಪಿಗೆಯೊಂದಿಗೆ ಸೆಕ್ಸ್ ಗೆ ಮುಂದಾಗಿದ್ದರು. ಅವರಿಬ್ಬರ ನಡುವೆ 5 ಸಾವಿರ ರುಪಾಯಿಗೆ ಕರಾರಾಗಿತ್ತು. ಸಂಜೆ ರೂಮಿಗೆ ಬಂದ ಇಶಾನ್ ಗೆ 10 ಸಾವಿರ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾಳೆ. ಈ ವೇಳೆ ಜಗಳ ನಡೆದು ಇಶಾನ್ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮೂಲಗಳು ತಿಳಿಸಿವೆ.[ಕುಂದಾಪುರ ಹುಡುಗಿ ಮೇಲೆ ನಿರಂತರ 8 ತಿಂಗಳು ಅತ್ಯಾಚಾರ!]

Uganda based student killed by Himachal Pradesh techie

ಸ್ಥಳಕ್ಕೆ ಇನ್ಸ್ ಪೆಕ್ಟರ್ ಅಂಜನ್ ಕುಮಾರ್ ಎನ್ನುವವರು ಸ್ಥಳಕ್ಕೆ ಆಗಮಿಸಿದ್ದು ಆಗಲೇ ನೆರೆದಿದ್ದ ಉಗಾಂಡ ವಿದ್ಯಾರ್ಥಿಗಳು ಪೊಲೀಸ್ ಮೇಲೆ ದಾಳಿಗೆ ಮುಂದಾಗಿದ್ದ ಬಗ್ಗೆ ವರದಿಯಾಗಿದೆ. ಸ್ಥಳದಲ್ಲಿ ಭದ್ರತೆಗಾಗಿ ಕೆಎಸ್ಆರ್ ಪಿ ತುಕಡಿಯನ್ನು ನಿಯೋಜಿಸಲಾಗಿದೆ. ಅಲ್ಲದೆ ಇಶಾನ್ ಅನ್ನು ಬಂಧಿಸಲಾಗಿದೆ.

ಇನ್ನು ಈ ಘಟನೆ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ ಪ್ರತಿಕ್ರಯಿಸಿದ್ದು, ನಗರದಲ್ಲಿ ವಿದೇಶಿ ವಿದ್ಯಾರ್ಥಿಗಳ ಹಾವಳಿ, ಪುಂಡಾಟ ಹೆಚ್ಚಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು, ಹಾಗೆಯೇ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಹೆಚ್ಚು ವಿದೇಶಿ ವಿದ್ಯಾರ್ಥಿಗಳನ್ನು ಸೆಳೆಯಲು ಕೇಂದ್ರ ಅನುಕೂಲ ಮಾಡಿದೆ. ಆದರೆ ಇಲ್ಲಿಗೆ ಬಂದ ವಿದೇಶಿಗರು ತಮ್ಮ ಪುಂಡಾಟ ಆರಂಬಿಸಿದ್ದಾರೆ. ಇದರ ಬಗ್ಗೆ ಕೇಂದ್ರಕ್ಕೂ ತಿಳಿಸಲಾಗುವುದು ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Uganda based student killed by Himachal Pradesh techie for sexual misunderstanding(bussiness) in Bengaluru. Techie arrested.
Please Wait while comments are loading...