ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಭಾರತದಲ್ಲಿಯೇ ಬೆಂಗಳೂರು ಕೃಷಿ ವಿವಿ ಅತ್ಯುತ್ತಮ

By Prasad
|
Google Oneindia Kannada News

ಬೆಂಗಳೂರು, ಜುಲೈ 20 : ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ದಕ್ಷಿಣ ಭಾರತ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪ್ರಥಮ ಸ್ಥಾನ ಮತ್ತು ರಾಷ್ಟ್ರಮಟ್ಟದ ಕೃಷಿ ವಿಶ್ವವಿದ್ಯಾಲಯಗಳಲ್ಲಿ 3ನೇ ಸ್ಥಾನ ಪಡೆದು ಬೆಂಗಳೂರಿಗೆ ಹೆಮ್ಮೆ ತಂದಿದೆ.

ಕೃಷಿ ಮತ್ತು ಅದಕ್ಕೆ ಸಂಬಂಧಪಟ್ಟಂತಹ 57 ಕೃಷಿ ವಿಶ್ವವಿದ್ಯಾಲಯಗಳು ಕಳೆದ 5 ವರ್ಷಗಳಲ್ಲಿ ಶಿಕ್ಷಣ, ಸಂಶೋಧನೆ, ವಿಸ್ತರಣೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಾಡಿದ ಸಾಧನೆ ಮತ್ತು ಸಲ್ಲಿಸಿದ ಸೇವೆಯನ್ನು ಮೌಲ್ಯಮಾಪನ ಮಾಡಿ ಕೃಷಿ ವಿಶ್ವವಿದ್ಯಾಲಯಗಳನ್ನು ನವದೆಹಲಿಯ ಕೃಷಿ ಅನುಸಂಧಾನ ಪರಿಷತ್ತು ಶ್ರೇಣೀಕರಿಸಿದೆ.

UAS Bengaluru, top agricultural university in South India

ಇದರ ಪ್ರಕಾರ ಬೆಂಗಳೂರಿನಲ್ಲಿರುವ ಕೃಷಿ ವಿಶ್ವವಿದ್ಯಾಲಯ, ಕರ್ನಾಟಕದಲ್ಲಿರುವ ಕೃಷಿ ವಿಶ್ವವಿದ್ಯಾಲಯಗಳು ಮಾತ್ರವಲ್ಲ, ದಕ್ಷಿಣ ಭಾರತದ ಕೃಷಿ ವಿಶ್ವವಿದ್ಯಾಲಯಗಳಲ್ಲಿಯೇ ಅತ್ಯುತ್ತಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಳೆದ 5 ವರ್ಷಗಳಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ 16 ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿದೆ. 177 ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಕಿರಿಯ ಸಂಶೋಧಕರ ಫೆಲೋಶಿಪ್, 62 ಶಿಕ್ಷಕರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಕೃಷಿಗೆ ಸಂಬಂಧಿಸಿದ 2 ತಂತ್ರಜ್ಞಾನಗಳನ್ನು ಪೇಟೆಂಟ್ ಮಾಡಲಾಗಿದೆ ಮತ್ತು 14 ತಂತ್ರಜ್ಞಾನಗಳನ್ನು ಪೇಟೆಂಟ್ ಗಾಗಿ ನೋಂದಾಯಿಸಲಾಗಿದೆ. ಕೃಷಿಯಲ್ಲಿ 5 ತಳಿಗಳು ಮತ್ತು 98 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ, ಅವುಗಳನ್ನು ರೈತರ ಜಮೀನಿಗೆ ವರ್ಗಾಯಿಸಲಾಗಿದೆ.

UAS Bengaluru, top agricultural university in South India

ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ 13ನೇ ಸ್ಥಾನದಲ್ಲಿದೆ. ಧಾರವಾಡದಲ್ಲಿರುವ ಕೃಷಿ ವಿಶ್ವವಿದ್ಯಾಲಯ 25ನೇ ಸ್ಥಾನದಲ್ಲಿದೆ.

ದೇಶದ ಮೊದಲ 10 ಅತ್ಯುತ್ತಮ ಕೃಷಿ ವಿಶ್ವವಿದ್ಯಾಲಯಗಳು ಕೆಳಗಿನಂತಿವೆ

1) ಐಸಿಎಆರ್ - ನ್ಯಾಷನಲ್ ಡೈರಿ ರಿಸರ್ಚ್ ಇನ್‌ಸ್ಟಿಟ್ಯೂಟ್, ಕರ್ನಲ್.
2) ಐಸಿಎಆರ್ - ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್‌ಸ್ಟಿಟ್ಯೂಟ್, ನವದೆಹಲಿ.
3) ಪಂಜಾಬ್ ಅಗ್ರಿಕಲ್ಚರಲ್ ಯುನಿವರ್ಸಿಟಿ, ಲುಧಿಯಾನಾ.
4) ಚೌಧರಿ ಚರಣ್ ಸಿಂಗ್ ಹರ್ಯಾಣ ಅಗ್ರಿಕಲ್ಚರಲ್ ಯುನಿವರ್ಸಿಟಿ, ಹಿಸಾರ್.
5) ಐಸಿಎಆರ್ - ಇಂಡಿಯನ್ ವೆಟರ್ನರಿ ರಿಸರ್ಚ್ ಇನ್‌ಸ್ಟಿಟ್ಯೂಟ್, ಬರೇಲಿ.
6) ಯುನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್, ಬೆಂಗಳೂರು.
7) ತಮಿಳುನಾಡು ಅಗ್ರಿಕಲ್ಚರಲ್ ಯುನಿವರ್ಸಿಟಿ, ಕೊಯಮತ್ತೂರು.
8) ಜಿಬಿ ಪಂತ್ ಯುನಿವರ್ಸಿಟಿ ಆಫ್ ಅಗ್ರಿಕಲ್ಚರ್ ಅಂಡ್ ಟೆಕ್ನಾಲಜಿ, ಪಂತನಗರ.
9) ಗುರು ಆನಂದ್ ದೇವ್ ವೆಟರ್ನರಿ ಅಂಡ್ ಅನಿಮಲ್ ಸೈನ್ಸಸ್ ಯುನಿವರ್ಸಿಟಿ, ಲುಧಿಯಾನಾ.
10) ತಮಿಳುನಾಡು ವೆಟರ್ನರಿ ಅಂಡ್ ಅನಿಮಲ್ ಸೈನ್ಸಸ್ ಯುನಿವರ್ಸಿಟಿ, ಚೆನ್ನೈ.

English summary
The University of Agricultural Sciences, Bengaluru ranked first among the agricultural universities in South India and stood first in Karnataka. It is also 3rd best among the agricultural universities in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X