500ರ ಹೊಸ ನೋಟಿನಲ್ಲಿ ಮುದ್ರಣ ದೋಷ!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 25: ನೋಟು ಬಿಡುಗಡೆ ಮಾಡಬೇಕಾದ ಆತುರಕ್ಕೆ ಸಿಲುಕಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಮುದ್ರಣ ದೋಷ ಇರುವ ಐನೂರು ರುಪಾಯಿ ನೋಟುಗಳು ಬಿಡುಗಡೆಯಾಗಿವೆ. ಈ ಬಗ್ಗೆ ಟೈಮ್ಸ್ ಅಫ್ ಇಂಡಿಯಾದಲ್ಲಿ ವರದಿ ಪ್ರಕಟವಾಗಿದೆ. ಇದರಿಂದ ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಜತೆಗೆ ನಕಲಿ ನೋಟುಗಳನ್ನು ನಿಯಂತ್ರಿಸಬೇಕು ಎಂಬ ಸರಕರದ ಪ್ರಯತ್ನವೇ ವಿಫಲವಾದಂತೆ ಆಗುತ್ತದೆ ಎಂಬ ಅತಂಕ ವ್ಯಕ್ತವಾಗಿದೆ.

ದೇಶದ ವಿವಿಧ ಪ್ರಕರಣಗಳಲ್ಲಿ ಒಂದು ನೋಟಿಗಿಂತ ಮತ್ತೊಂದು ಭಿನ್ನವಾಗಿ ಕಂಡುಬಂದಿದೆ. ಗಾಂಧಿ ಚಿತ್ರದ ನೆರಳು, ರಾಷ್ಟ್ರೀಯ ಲಾಂಛನದ ಗುರುತು ಹಾಗೂ ನೋಟಿನ ಮೇಲೆ ಮುದ್ರಣವಾಗಿರುವ ಸಂಖ್ಯೆಯಲ್ಲೂ ಸಮಸ್ಯೆಯಾಗಿದೆ. ನೋಟಿನ ತುದಿಯ ಗಾತ್ರದಲ್ಲೂ ವ್ಯತ್ಯಾಸವಾಗಿರುವುದಾಗಿ ಸಾರ್ವಜನಿಕರೇ ಮಾಹಿತಿ ನೀಡಿದ್ದಾರೆ.[ಎರಡು ಸಾವಿರ ರುಪಾಯಿ ನೋಟಿನಲ್ಲಿ ಕಾಗುಣಿತ ತಪ್ಪು?]

Two variants of new Rs 500 note surface, RBI says printing defect

ವ್ಯಕ್ತಿಯೊಬ್ಬರು ತಮ್ಮ ಎರಶು ಸಾವಿರ ರುಪಾಯಿ ನೋಟನ್ನು ಐನೂರರ ನೋಟಿನ ಜತೆಗೆ ಬದಲಿಸಿಕೊಂಡಾಗ ಬಣ್ಣದಲ್ಲಿ ವ್ಯತ್ಯಾಸ ಗೋಚರಿಸಿದೆ. ಸದ್ಯಕ್ಕೆ ಇರುವ ಸನ್ನಿವೇಶವನ್ನು ನಿಭಾಯಿಸಬೇಕಾದ ಆತುರದಿಂದ ಹೀಗಾಗಿರಬಹುದು ಎಂದು ಆರ್ ಬಿಐ ವಕ್ತಾರರಾದ ಅಲ್ಪನಾ ಕಿಲ್ಲವಾಲಾ ಹೇಳಿದ್ದಾರೆ. ಅಂಥ ನೋಟುಗಳನ್ನು ಸ್ವೀಕರಿಸಬಹುದು. ಅಥವಾ ರಿಸರ್ವ್ ಬ್ಯಾಂಕ್ ಗೆ ಹಿಂತಿರುಗಿಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

ರಿಸರ್ವ್ ಬ್ಯಾಂಕ್ ಇಂಡಿಯಾ ಈ ರೀತಿ ಮೂರು ವಿವಿಧ ಬಣ್ಣದ ನೋಟು ಬಿಡುಗಡೆ ಮಾಡಿದೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಜನರು ಗೊಂದಲದಲ್ಲಿ ಸಿಲುಕಿ ನಕಲಿ ನೋಟುಗಳನ್ನು ಅಸಲಿ ಎಂದು ಭಾವಿಸುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಜತೆಗೆ ಹೊಸ ನೋಟು ಆದ್ದರಿಂದ ಅದನ್ನು ಪೂರ್ಣವಾಗಿ ಪರಿಶೀಲಿಸುವುದಕ್ಕೂ ಸಾರ್ವಜನಿಕರಿಗೆ ಕಷ್ಟವಾಗುತ್ತದೆ.[2 ಸಾವಿರ ರುಪಾಯಿ ನೋಟಿನಲ್ಲಿ ದೇವನಾಗರಿ ಯಾಕೆ?]

'ನಕಲಿ ನೊಟುಗಳನ್ನು ತಡೆಯುವುದು ಕಷ್ಟದ ಕೆಲಸ. ನಾವು ಎಷ್ಟು ಆಧುನಿಕ ತಂತ್ರಜ್ಞಾನ ಬಳಸಿ ನೋಟು ಮುದ್ರಿಸುತ್ತೇವೋ ಅದೇ ರೀತಿ ಪಾಕಿಸ್ತಾನದಲ್ಲೂ ಇದೆ. ನೋಟು ರದ್ದು ಮಾಡುವುದರಿಮ್ದ ತಾತ್ಕಾಲಿಕವಾಗಿ ನಕಲಿ ನೋಟು ತಡೆಯಬಹುದು. ಐನೂರು ರುಪಾಯಿ ನೋಟಿನ ಬಗ್ಗೆ ಈಗಲೇ ಏನೂ ಹೇಳಲಾರೆ.

'ನಾನಿನ್ನೂ ಅದನ್ನು ನೋಡಬೇಕು. ಎರಡು ಸಾವಿರದ ನೋಟು ಅತ್ಯಾಧುನಿಕವಾಗಿದೆ. ಆರ್ ಬಿಐ ಹೇಳಿರುವಂತೆ ಐನೂರು ರುಪಾಯಿಯ ಒಂದೇ ಬಗೆ ನೋಟು ಮುದ್ರಿಸುತ್ತಿದೆ ಎಂದರೆ ಅದೇ ಒಂದೇ ಇರಬೇಕು' ಎಂದು ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಹೇಳಿದ್ದಾರೆ.[ನೋಟು ಬದಲಿಸಲು ಶೇ 30 ಕಮಿಷನ್: ಬ್ಯಾಂಕ್ ನೌಕರ ಅಮಾನತು]

ಸ್ಥಳೀಯವಾಗಿ ನಕಲಿ ನೋಟುಗಳನ್ನು ಮುದ್ರಿಸುವುದು ನಿಂತುಹೋಗಿದೆ. ನೇಪಾಳ, ಬಾಂಗ್ಲಾದೇಶ ಇತರೆಡೆಗಳಿಂದ ಬರುತ್ತವೆ. ವಿವಿಧ ಬಗೆಯ ನೋಟುಗಳು ಮುದ್ರಿಸಿದರೆ ನಕಲಿ ನೋಟುಗಳು ಹೆಚ್ಚಲು ಕಾರಣವಾಗುತ್ತದೆ. ರಿಸರ್ವ್ ಬ್ಯಾಂಕ್ ಉದ್ದೇಶ ಪೂರ್ವಕವಾಗಿ ಹೀಗೆ ಮಾಡದಿದ್ದಲ್ಲಿ ತಕ್ಷಣ ಇಂಥ ನೋಟು ಮುದ್ರಣವನ್ನು ತಡೆಯಬೇಕು ಎಂದು ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್.ಟಿ.ರಮೇಶ್ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Just two weeks into circulation, there are already different variants of the new Rs 500 notes, which experts fear could not only create confusion to citizens but also aid counterfeiting.
Please Wait while comments are loading...