ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್‌ ಮಾರ್ಗಕ್ಕೆ 2 ಟೆಂಡರ್, ಕಾಮಗಾರಿ ಮುಗಿಯೋದ್ಯಾವಾಗ?

|
Google Oneindia Kannada News

ಬೆಂಗಳೂರು, ಜನವರಿ 23: ನಮ್ಮ ಮೆಟ್ರೋ ಸುರಂಗ ಮಾರ್ಗ ನಿರ್ಮಾಣಕ್ಕೆ ಎರಡು ಟೆಂಡರ್ ಕರೆಯಲಾಗಿದ್ದು 2022ರ ವೇಳೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸುವ ಗೊಟ್ಟಿಗೆರೆ-ನಾಗವಾರ ಮೆಟ್ರೋ ಯೋಜನೆಯಲ್ಲಿ 4.59 ಕಿ.ಮೀ ಉದ್ದದ ಟ್ಯಾನರಿ ರಸ್ತೆ-ನಾಗವಾರ ಹಾಗೂ 3.65 ಕಿ.ಮೀ ಉದ್ದದ ವೆಲ್ಲಾರ ಜಂಕ್ಷನ್ -ಡೈರಿ ವೃತ್ತ ಮಾರ್ಗಕ್ಕೆ ಎರಡು ಟೆಂಡರ್ ಕರೆಯಲಾಗಿದೆ.

ನಮ್ಮ ಮೆಟ್ರೋ ಕಾಮಗಾರಿ ಮಾಹಿತಿ, 2018ರಲ್ಲಿ ಎಷ್ಟು ಮಂದಿ ಪ್ರಯಾಣಿಸಿದ್ರು? ನಮ್ಮ ಮೆಟ್ರೋ ಕಾಮಗಾರಿ ಮಾಹಿತಿ, 2018ರಲ್ಲಿ ಎಷ್ಟು ಮಂದಿ ಪ್ರಯಾಣಿಸಿದ್ರು?

ಒಂದು ವರ್ಷದಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. 4 ಕೋಟಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.2017ರಲ್ಲಿ 9.27 ಕೋಟಿ ಇದ್ದ ಪ್ರಯಾಣಿಕರ ಸಂಖ್ಯೆ ನೇರಳೆ ಮಾರ್ಗದಲ್ಲಿ ಆರು ಬೋಗಿಯ ಮೆಟ್ರೋ ಸಂಚಾರ ಆರಂಭವಾದ ಬಳಿಕ 13.17 ಕೋಟಿ ಅಂದರೆ ಒಟ್ಟು 4 ಕೋಟಿ ಪ್ರಯಾಣಿಕರ ಸಂಖ್ಯೆ ಒಂದು ವರ್ಷದಲ್ಲಿ ಹೆಚ್ಚಾಗಿದೆ. ಹಾಗಾಗಿ ಮೆಟ್ರೋ ಕಾಮಗಾರಿ ವೇಗವಾಗಿ ನಡೆಸುವ ಅನಿವಾರ್ಯತೆಯೂ ಕೂಡ ಇದೆ.

2022ಕ್ಕೆ ಕಾಮಗಾರಿ ಮುಗಿಸಲು ಸಾಧ್ಯವೇ?

2022ಕ್ಕೆ ಕಾಮಗಾರಿ ಮುಗಿಸಲು ಸಾಧ್ಯವೇ?

2022ಕ್ಕೆ ಇಡೀ ಗೊಟ್ಟಿಗೆರೆ-ನಾಗವಾರ ಮಾರ್ಗ ನಿರ್ಮಾಣ ಮಾಡಲು ಗುರಿ ಹಾಕಿಕೊಳ್ಳಲಾಗಿದೆ.ಟೆಂಡರ್ ರದ್ದಾಗಿದ್ದರಿಂದ ಬಹಳ ತಡವಾಗಿ ಟೆಂಡರ್ ಪ್ರಕ್ರಿಯೆ ನಡೆದಿದೆ. ಸುರಂಗ ಮಾರ್ಗ ನಿರ್ಮಿಸುವುದು ಅತಿ ವೆಚ್ಚದಾಯಕ ಹಾಗೂ ಸವಾಲಿನ ಕೆಲಸವಾಗಿದೆ.

ಗೊಟ್ಟಿಗೆರೆ-ನಾಗವಾರ ಮೆಟ್ರೋ: ಹಳೆ ವಿನ್ಯಾಸದಂತೆಯೇ ಮಾರ್ಗ ನಿರ್ಮಾಣ ಗೊಟ್ಟಿಗೆರೆ-ನಾಗವಾರ ಮೆಟ್ರೋ: ಹಳೆ ವಿನ್ಯಾಸದಂತೆಯೇ ಮಾರ್ಗ ನಿರ್ಮಾಣ

ಸುರಂಗ ಮಾರ್ಗ ಎಲ್ಲಿಂದ ಎಲ್ಲಿಯವರೆಗೆ?

ಸುರಂಗ ಮಾರ್ಗ ಎಲ್ಲಿಂದ ಎಲ್ಲಿಯವರೆಗೆ?

ಈ ಹಿಂದೆ ಸುರಂಗ ಮಾರ್ಗಕ್ಕೆ ಟೆಂಡರ್ ಆಹ್ವಾನಿಸಲಾಗಿತ್ತು. ಗುತ್ತಿಗೆ ಕಂಪನಿಗಳು ಅಂದಾಜು ಮೊತ್ತಕ್ಕಿಂತ ಕಡಿಮೆ ಮೊತ್ತವನ್ನು ಉಲ್ಲೇಖಿಸಿ ಟೆಂಡರ್ ಸಲ್ಲಿಸಿದ್ದರಿಂದ ಇಡೀ ಟೆಂಡರ್ ರದ್ದಾಗಿತ್ತು. ಈಗ 13.91 ಕಿ.ಮೀ ಉದ್ದದ ಸುರಂಗ ಮಾರ್ಗದ ಪೈಕಿ 4 ಕಿ.ಮೀ ಉದ್ದದ ಟ್ಯಾನರಿ ರಸ್ತೆ-ನಾಗವಾರ ಮಾರ್ಗಕ್ಕೆ ಎಂಡರ್ ಕರೆಯಲಾಗಿದೆ. ಟ್ಯಾನರಿ ರಸ್ತೆ, ವೆಂಕಟೇಶಪುರ, ಅರೇಬಿಕ್ ಕಾಲೇಜು ಹಾಗೂ ನಾಗವಾರದಲ್ಲಿ ನಿಲ್ದಾಣಗಳು ನಿರ್ಮಾಣವಾಗಲಿವೆ.

ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲು ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲು

ಎತ್ತರಿಸಿದ ಮಾರ್ಗದ ನಿಲ್ದಾಣಗಳು

ಎತ್ತರಿಸಿದ ಮಾರ್ಗದ ನಿಲ್ದಾಣಗಳು

ಗೊಟ್ಟಿಗೆರೆ, ಹುಳಿಮಾವು, ಐಐಎಂಬಿ, ಜೆಪಿನಗರ ನಾಲ್ಕನೃ ಹಂತ, ಜಯದೇವ ಆಸ್ಪತ್ರೆ, ಸ್ವಾಗತ್ ಕ್ರಾಸ್ ಬರಲಿವೆ.

ಸುರಂಗ ಮಾರ್ಗದ ನಿಲ್ದಾಣಗಳು

ಸುರಂಗ ಮಾರ್ಗದ ನಿಲ್ದಾಣಗಳು

ಡೈರಿ ಸರ್ಕಲ್, ಮೈಕೊ , ಲ್ಯಾಂಗ್‌ಫೋರ್ಡ್ ಟೌನ್, ವೆಲ್ಲಾರ ಜಂಕ್ಷನ್, ಎಂಜಿ ರಸ್ತೆ, ಶಿವಾಜಿನಗರ, ಕಂಟೋನ್ಮೆಂಟ್, ಪಾಟರಿ ಟೌನ್, ಟ್ಯಾನರಿ ಟೌನ್, ವೆಂಕಟೇಶಪುರ, ಅರೇಬಿಕ್ ಕಾಲೇಜು, ನಾಗವಾರ ತಲುಪಲಿದೆ.

ಹಸಿರು ಮಾರ್ಗಕ್ಕೆ ಆರು ಬೋಗಿ ರೈಲು

ಹಸಿರು ಮಾರ್ಗಕ್ಕೆ ಆರು ಬೋಗಿ ರೈಲು

ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲಿ ಆರು ಬೋಗಿಯ ಮೆಟ್ರೋ ಸಂಚಾರ ಆರಂಭವಾಗಲಿದೆ. ಇನ್ನು ಎರಡು ಆರು ಬೋಗಿಯ ಮೆಟ್ರೋ ಶೀಘ್ರವೇ ಈ ಮಾರ್ಗದಲ್ಲಿ ಸಂಚರಿಸಲಿದೆ. ಪೀಕ್ ಅವಧಿಯಲ್ಲಿ ಮಾತ್ರ ರೈಲು ಸಂಚರಿಸಲಿದೆ. ಸೆಪ್ಟೆಂಬರ್ ಒಳಗೆ ಎಲ್ಲಾ 50 ರೈಲುಗಳು ಆರು ಬೋಗಿಯ ರೈಲುಗಳಾಗಲಿವೆ.

English summary
BMRCL finally invited two tender for Kempegowda international airport underground metro project. Even for others lane also tender has been processed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X