ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಡಿಜಿಪಿ ರವೀಂದ್ರನಾಥ್ ಮೊಬೈಲ್‌ನಲ್ಲಿ ಫೋಟೋ ಪತ್ತೆ

|
Google Oneindia Kannada News

ಬೆಂಗಳೂರು, ಜೂನ್ 3 : ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಕಾಫಿ ಶಾಪ್ ನಲ್ಲಿ ಯುವತಿ ಫೋಟೋ ತೆಗೆದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಎಡಿಜಿಪಿ ಪಿ.ರವೀಂದ್ರನಾಥ್ ಅವರ ಮೊಬೈಲ್ ಪೋನ್ ನಲ್ಲಿ ಯುವತಿಯ ಎರಡು ಚಿತ್ರಗಳು ಪತ್ತೆಯಾಗಿವೆ.

ಯುವತಿಯ ಫೋಟೋ ತಗೆದೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರಿಗೆ ಮಂಗಳವಾರ ರವೀಂದ್ರನಾಥ್ ಅವರ ಮೊಬೈಲ್ ನಲ್ಲಿ ಯುವತಿಯ 2 ಫೋಟೋಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಮೊಬೈಲ್ ಅನ್ನು ಅಹಮದಾಬಾದ್ ಫೊರೆನ್ಸಿಕ್ ಲ್ಯಾಬ್ ಗೆ ಕಳುಹಿಸಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. [ರವೀಂದ್ರನಾಥ್ ಪರ ನಿಂತ ಮೀಸಲು ಪೊಲೀಸ್ ಪಡೆ]

ADGP Ravindranath

ಪ್ರಾಥಮಿಕವಾಗಿ ತಿಳಿದುಬಂದಿರುವ ಮಾಹಿತಿಯಂತೆ ರವೀಂದ್ರನಾಥ್ ಅವರ ಮೊಬೈಲ್ ಅಲ್ಲಿ ಎರಡು ಚಿತ್ರಗಳು ಪತ್ತೆಯಾಗಿದ್ದು, ಅವುಗಳನ್ನು ಬೆಳಗ್ಗೆ 10.47 ಮತ್ತು 10.48ಕ್ಕೆ ತೆಗೆಯಲಾಗಿದೆ. ಸಿಐಡಿ ಪೊಲೀಸರು ಮೊಬೈಲ್ ಅನ್ನು ಅಹಮದಾಬಾದ್ ಗೆ ರವಾನಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಎದುರು ನೋಡುತ್ತಿದ್ದಾರೆ. [ಎಡಿಜಿಪಿ ಪ್ರಕರಣ : ಜಾರ್ಜ್ ರಾಜೀನಾಮೆಗೆ ಒತ್ತಾಯ]

ಧಾರವಾಡಕ್ಕೆ ರವೀಂದ್ರನಾಥ್ : ತಮ್ಮ ಕೆಲಸಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪಟ್ಟು ಹಿಡಿದು ಕುಳಿತಿದ್ದ ಎಡಿಜಿಪಿ ರವೀಂದ್ರನಾಥ್ ಅವರ ಮನಮೊಲಿಕೆ ಮಾಡುವಲ್ಲಿ ಸಚಿವರಾದ ಎಚ್‌.ಸಿ.ಮಹದೇವಪ್ಪ, ಎಚ್‌. ಆಂಜನೇಯ ಅವರು ಯಶಸ್ವಿಯಾಗಿದ್ದು, ರವೀಂದ್ರನಾಥ್ ರಾಜೀನಾಮೆ ಹಿಂಪಡೆಯಲು ಒಪ್ಪಿಗೆ ನೀಡಿದ್ದಾರೆ.

ಕೆಎಸ್ಆರ್ ಪಿ ಯಿಂದ ವರ್ಗಾವಣೆ ಮಾಡಿದ್ದ ಡಾ.ಪಿ.ರವೀಂದ್ರನಾಥ್‌ ಅವರನ್ನು ಸರ್ಕಾರ ಧಾರವಾಡದ ಪೊಲೀಸ್‌ ಸಂಶೋಧನಾ ಮತ್ತು ಪುನಾರಚನೆ ಸಂಸ್ಥೆಗೆ ನಿಯೋಜನೆ ಮಾಡಿದೆ. ಬೆಂಗಳೂರಿನಲ್ಲೇ ಹುದ್ದೇ ನೀಡಿ ಎಂದು ರವೀಂದ್ರನಾಥ್ ಮಾಡಿದ ಮನವಿಗೆ ಸರ್ಕಾರ ಸ್ಪಂದಿಸಿಲ್ಲ.

English summary
Crime Investigation Department (CID) found two photos in ADGP Ravindranath mobile phone. Ravindranath has been accused of taking indecent photo of a woman in a coffee shop. CID has sent mobile to Forensic Science Laboratory Ahmedabad for more details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X