ನೈಜೀರಿಯಾ ಪ್ರಜೆಗಳು ಅರೆಸ್ಟ್: 20 ಲಕ್ಷ ಮೌಲ್ಯದ ಕೊಕೈನ್ ವಶಕ್ಕೆ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 3: ಇಲ್ಲಿನ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭೂಪಸಂದ್ರ ಬಸ್ ನಿಲ್ದಾಣ ಬಳಿಯ ರಸ್ತೆಯಲ್ಲಿ ಸಾರ್ವಜನಿಕವಾಗಿ ಕೊಕೈನ್ ಮಾರುತ್ತಿದ್ದ ನೈಜೀರಿಯಾದ ಬ್ರೈಟ್ ಇಗಲೋ, ಇಬೆ ಚಿನೆದು ಮೈಕ್ ಎಂಬಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಆರೋಪಿಗಳಿಂದ 300 ಗ್ರಾಮ್ ತೂಕದ ಕೊಕೈನ್, ಮೊಬೈಲ್ ಫೋನ್ ಗಳು, ಎರಡು ತೂಕದ ಯಂತ್ರಗಳು, ಆರು ಲಕ್ಷ ರುಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ ವಶಪಡಿಸಿಕೊಂಡ ಕೊಕೈನ್ ಮೌಲ್ಯ 20 ಲಕ್ಷ ರುಪಾಯಿ ಎಂದು ಅಂದಾಜಿಸಲಾಗಿದೆ. ಆರೋಪಿಗಳ ಜತೆಗೆ ನಂಟು ಹೊಂದಿರುವ ಉಚಿ ಎಂಬಾತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Two Nigerians arrested for selling cocaine

ಮುಂಬೈಯ ಉಚಿ ಮೂಲಕ ಕೊಕೈನ್ ಪಡೆದು, ಅದನ್ನು ಸಣ್ಣ ಸಣ್ಣ ಪೊಟ್ಟಣಗಳಲ್ಲಿ ಪ್ಯಾಕ್ ಮಾಡಿ, ಮಾರಾಟ ಮಾಡುತ್ತಿದ್ದರು. ಇಲ್ಲಿ ಗಮನಿಸಬೇಕಾದ ವಿಚಾರ ಏನೆಂದರೆ, ಇವರಿಬ್ಬರು ತಮ್ಮದೇ ಜಾಲವೊಂದನ್ನು ರೂಪಿಸಿದ್ದರು. ಆರೋಪಿಗಳು ಈ ದಂಧೆಯಲ್ಲಿ ಲಕ್ಷಾಂತರ ರುಪಾಯಿ ಸಂಪಾದಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Two Nigerians arrested for selling cocaine

ಇತ್ತೀಚೆಗೆ ವಿದೇಶಿ ಮೂಲದವರು ಶಿಕ್ಷಣಕ್ಖಾಗಿ ಭಾರತಕ್ಕೆ ಬಂದು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಹೆಚ್ಚಾಗಿದೆ. ಅಥವಾ ಶಿಕ್ಷಣದ ಸೋಗಿನಲ್ಲಿ ದೇಶಕ್ಕೆ ಬಂದು, ಅಪರಾಧ ಕೃತ್ಯಗಳ ಮೂಲಕ ಹಣ ಸಂಪಾದನೆಯ ದಾರಿ ಕಂಡುಕೊಳ್ಳುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two Nigerians arrested by Sanjaya nagara police in Bengaluru for selling cocaine. mobile phones, two weighing machine, 6 lakh rupees cash and 20 lakh worth of cocaine seized by police.
Please Wait while comments are loading...