ಬಿಎಂಟಿಸಿ ಹೊಸ ಎರಡು ಮಾರ್ಗದಲ್ಲಿ ಕಾರ್ಯಾಚರಣೆ ಆರಂಭಿಸಿದೆ

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ13 : ಬಿಎಂಟಿಸಿಯು ನಗರದ ಹೊಸ ಎರಡು ಮಾರ್ಗದಲ್ಲಿ ಬಸ್ ಗಳ ಸಂಚಾರವನ್ನು ಪ್ರಾರಂಭಿಸಿದೆ.

ಯಲಹಂಕ ಹಳೇ ಬಸ್ ನಿಲ್ದಾಣದಿಂದ ಒರಾಯನ್ ಮಾಲ್ ಮಾರ್ಗದಲ್ಲಿ( ಮಾರ್ಗ ಸಂಖ್ಯೆ-ಎಂಎಲ್1, ಎಂಎಲ್ 2 ) ಬಸ್ ಗಳು ಸಂಚರಿಸಲಿದೆ. ಯಲಹಂಕ, ಅಲ್ಲಾಳಸಂದ್ರ, ಬ್ಯಾಟರಾಯನಪುರ, ಡೈರಿ ಗೇಟ, ಹೆಬ್ಬಾಳ ವರ್ತುಲ ರಸ್ತೆ, ದೇವಿನಗರ, ದೇವಸಂದ್ರ, ಸದಾಶಿವನಗರ ಪೊಲೀಸ್ ಠಾಣೆ, ಯಶವಂತಪುರ ಹಾಗೂ ಒರಾಯನ್ ಮಾಲ್ ನಿಲ್ದಾಣಗಳನ್ನು ಒಳಗೊಂಡಿದೆ.

Two new route for BMTC buses started

ಸಾಮಾನ್ಯವಾಗಿ ಬೆಳಗ್ಗೆ 8 ರಿಂದ ರಾತ್ರಿ 7.45 ರವರೆಗೆ ಒಟ್ಟು 24 ಸುತ್ತುವಳಿಗಳಲ್ಲಿ ಕಾರ್ಯಾಚರಣೆ ಮಾಡಲಿದೆ. ಸಾರ್ವಜನಿಕರು ಬಸ್ ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BMTC started new two routes from Yalahanka to Orion mall. It will be ML 1 and ML2.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ