ಬೆಂಗಳೂರಿನಲ್ಲಿ ಹೆಣವನ್ನು ಸಂಭೋಗಿಸಿದ ದುರುಳರ ಬಂಧನ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 03 : ಮಹಿಳೆಯನ್ನು ಕೊಲೆ ಮಾಡಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಉತ್ತರ ಪ್ರದೇಶ ಮೂಲದವರಾಗಿದ್ದು, ನಗರದಲ್ಲಿ ಪಾನಿ ಪೂರಿ ವ್ಯಾಪಾರಿ ಮಾಡಿಕೊಂಡಿದ್ದರು.

ಬಂಧಿತ ಆರೋಪಿಗಳನ್ನು ಆಜಾದ್ ಅಲಿ (20), ಶಾಮ್ (22) ಎಂದು ಗುರುತಿಸಲಾಗಿದೆ. ಆರೋಪಿಗಳು ಆಗಸ್ಟ್ 15ರಂದು ಚುಂಚಘಟ್ಟ ಮುಖ್ಯ ರಸ್ತೆ ಸರ್ಕಾರಿ ಶಾಲೆಯ ಹತ್ತಿರದ ನಿವಾಸಿ ಊರ್ಮಿಳಾ ದೇವಿ (28) ಅವರನ್ನು ಕೊಲೆ ಮಾಡಿದ್ದರು, ಬಳಿಕ ಅತ್ಯಾಚಾರ ನಡೆಸಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಪರಾರಿಯಾಗಿದ್ದರು.[ನಿವೃತ್ತ ಐಎಎಸ್ ಅಧಿಕಾರಿ ಪುತ್ರಿ ಮೇಲೆ ರೇಪ್, ಸಿಐಡಿ ಬಿ ರಿಪೋರ್ಟ್]

murder

ಹಣ ಕೊಡಲಿಲ್ಲ ಎಂದು ಹತ್ಯೆ : ಆಜಾದ್ ಅಲಿ ಉತ್ತರ ಪ್ರದೇಶದ ಅಲಹಾಬಾದ್‌ನ ನಿವಾಸಿ ಉರ್ಮಿಳಾ ದೇವಿ ಪತಿ ಸಂಜಯ್ ಪ್ರಸಾದ್ ಗುಪ್ತಾ ಬಳಿ 4 ವರ್ಷಗಳಿಂದ ಪಾನಿಪೂರಿ ವ್ಯಾಪಾರ ಮಾಡಿಕೊಂಡಿದ್ದರು. ಸಂಜಯ್ ಅಜಾದ್‌ಗೆ 7,500 ರೂ. ಸಂಬಳದ ಹಣವನ್ನು ನೀಡಬೇಕಿತ್ತು. ಆದರೆ, ಹಣ ಕೊಡದೆ ಅವರು ಸತಾಯಿಸುತ್ತಿದ್ದರು.[ದೆಹಲಿ ದೇಶದ ಕ್ರೈಂ ರಾಜಧಾನಿಯಲ್ಲ, ಅದು ದಕ್ಷಿಣದ ಕರಾವಳಿ ನಗರ!]

ಆಜಾದ್ ಅಲಿ ಈ ಬಗ್ಗೆ ಸಂಜಯ್ ಗುಪ್ತಾ ತಮ್ಮ ಸುಶೀಲ್ ಗುಪ್ತಾ ಅವರಿಗೆ ಮಾಹಿತಿ ನೀಡಿದ್ದರು. ಸಂಜಯ್ ಮತ್ತು ಸುಶೀಲ್ ಆಜಾದ್‌ಗೆ ಈ ಬಗ್ಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು. ಇದರಿಂದ ಸಂಜಯ್ ವಿರುದ್ಧ ಅಸಮಾಧಾನಗೊಂಡಿದ್ದ ಆಜಾದ್ ತನ್ನ ಸಹಚರ ಶಾಮ್ ಜೊತೆ ಸೇರಿ ಅವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದರು.['ಪತ್ನಿ ಜತೆಗಿನ ಲೈಂಗಿಕ ಸಂಬಂಧ ಅತ್ಯಾಚಾರವಲ್ಲ']

ಆಗಸ್ಟ್ 15ರಂದು ಸಂಜೆ 5 ಗಂಟೆ ಸುಮಾರಿಗೆ ಸಂಜಯ್ ಪ್ರಸಾದ್ ಗುಪ್ತಾ ಮನೆಗೆ ನುಗ್ಗಿದ ಆರೋಪಿಗಳು ಊರ್ಮಿಳಾ ದೇವಿ ಅವರ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು. ನಂತರ ಆಕೆಯ ಮೇಲೆ ಅತ್ಯಾಚಾರ ನಡೆಸಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಪರಾರಿಯಾಗಿದ್ದರು. ಮನೆಯಲ್ಲಿದ್ದ 24,000 ರೂ.ಗಳನ್ನು ದೋಚಿದ್ದರು.

ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮನೆಯಿಂದ ತೆಗೆದುಕೊಂಡು ಹೋದ ಹಣವ ಪೈಕಿ 8 ಸಾವಿರ ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಬಳಿಯಿದ್ದ ಮೂರು ಮೊಬೈಲ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಅವರನ್ನು ಪೊಲೀಸರ ವಶಕ್ಕೆ ಪಡೆಯಲಾಗಿದೆ. ಸುಬ್ರಮಣ್ಯಪುರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru Subramanyapura police arrested two men accused of murdering a woman and then raping her. The incident took place between around 5 pm on August 15, 2016. The accused identified as Azad and Shyam hail from Uttar Pradesh.
Please Wait while comments are loading...