ಬೆಂಗಳೂರಿನ ಮದರಸಾದಲ್ಲಿ ಮಕ್ಕಳಿಗೆ ಹಿಂಸೆ, ಇಬ್ಬರ ಬಂಧನ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 02: ಧಾರ್ಮಿಕ ಪಾಠ ಕಲಿಯಲು ಬಂದ ಚಿಕ್ಕ ಮಕ್ಕಳಿಗೆ ಹಿಂಸೆ ನೀಡಿ, ಕಾಲಿಗೆ ಕೊಂಡಿ ಹಾಕಿ ಬಂಧಿಸಿದ ಘಟನೆ ಮದರಸಾವೊಂದರಲ್ಲಿ ನಡೆದಿದೆ.

ಖಾಸಗಿ ಮಾಧ್ಯಮಗಳಲ್ಲಿ ಈ ಬಗ್ಗೆ ಮಂಗಳವಾರ ವಿಡಿಯೋ ಸಮೇತ ಪ್ರಸಾರವಾಗಿದ್ದನ್ನು ನೋಡಿರಬಹುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಕೂಡಲೇ ಕ್ರಮ ಜರುಗಿಸಿದ್ದಾರೆ.[ಬೆಂಗಳೂರು ಪೊಲೀಸರ ಲಂಚಾವತಾರ ಬಿಚ್ಚಿಟ್ಟ ಎನ್ ಜಿಒ]

Two held by HSR Layout police for chaining minors at madrasa

ವಿವಾದಿತ ಮದರಾಸದ ಶಿಕ್ಷಕ ಹಾಗೂ ಮಕ್ಕಳ ತಂದೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.[ಕರ್ನಾಟಕದ ಸಾವಿರ ಮದ್ರಸಾಗಳಲ್ಲಿ ಸಮೀಕ್ಷೆ ಆರಂಭ]

ಮೂವರು ವಿದ್ಯಾರ್ಥಿಗಳ ಕಾಲಿಗೆ ಚೈನ್ ಬಿಗಿದು ಶಿಕ್ಷೆ ನೀಡುವ ದೃಶ್ಯಗಳು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಕೂಡಲೇ ಕ್ರಮ ಜರುಗಿಸಿದ ಪೊಲೀಸರು ಮೂವರು ಮಕ್ಕಳನ್ನು ರಕ್ಷಿಸಿದ್ದಾರೆ.[ಮದ್ರಸಾದಲ್ಲಿ ಲೈಂಗಿಕ ಕಿರುಕುಳ ಅನುಭವ ಹಂಚಿಕೊಂಡ ನಿರ್ದೇಶಕ]

ಹೆಚ್ಚು ತುಂಟತನ ಮಾಡುತ್ತಿದ್ದ ಮಕ್ಕಳಿಗೆ ಬುದ್ಧಿ ಬರಬೇಕಾದರೆ ಇಂಥ ಶಿಕ್ಷೆ ನೀಡಿ ಎಂದು ಶಿಕ್ಷಕರಿಗೆ ಮಕ್ಕಳ ತಂದೆಯೇ ಉತ್ತೇಜನ ನೀಡಿದ್ದರು ಎಂದು ತಿಳಿದು ಬಂದಿದೆ.[ಮದ್ರಸಾ ಎಂದರೇನು?]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The HSR Layout police have detained a man and a teacher of a madrasa for allegedly chaining three minors at the madrasa for being naughty. The police have detained the children’s father and the teacher for enquiry.
Please Wait while comments are loading...