ದೇವನಹಳ್ಳಿ: ನೀರು ತರಲು ಹೋಗಿದ್ದ ಇಬ್ಬರು ಬಾಲಕಿಯರು ಸಾವು

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 23 : ನೀರು ತರಲು ತೆರಳಿದ್ದ ಇಬ್ಬರು ಬಾಲಕಿಯರು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಐಬಸಾಪುರ ಗ್ರಾಮದಲ್ಲಿ ನಡೆದಿದೆ.

ಐಬಸಾಪುರ ಗ್ರಾಮದ ನಿವಾಸಿಗಳಾದ ಮಾನಸಾ (12), ಲಕ್ಷ್ಮೀ (13) ಮೃತರು ಎಂದು ಗುರುತಿಸಲಾಗಿದೆ. ನೀರು ತರಲು ಕೆರೆಗೆ ತೆರಳಿದ್ದ ಮಾನಸಾ, ಲಕ್ಷ್ಮೀ ಮತ್ತು ಶಶಾಂಕ್ ನೀರು ಎತ್ತಿಕೊಂಡು ಹೋಗುತ್ತಿದ್ದಾಗ ಕಾಲು ಜಾರಿದ ಪರಿಣಾಮ ಮೂವರೂ ಕೆರೆಗೆ ಬಿದ್ದಿದ್ದಾರೆ.

Two girls drowned in lake at Devanahalli

ಸ್ಥಳದಲ್ಲಿದ್ದ ವಾಟರ್ ಮ್ಯಾನ್ ರಾಜಣ್ಣ ಎನ್ನುವವರು ಬಾಲಕ ಶಶಾಂಕ್ ನನ್ನು ರಕ್ಷಣೆ ಮಾಡಿದ್ದಾರೆ. ಆದರೆ ಇನ್ನುಳಿದ ಇಬ್ಬರು ಮಾನಸಾ ಮತ್ತು ಲಕ್ಷ್ಮೀ ನೀರಿನಲ್ಲಿ ಮುಳುಗಿದ್ದಾರೆ.

ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The two girls were drowned in lake, when they went to bring water in Ibasapura village, Devanahalli Bengaluru rural district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ