ಇಂದಿರಾ ಕ್ಯಾಂಟೀನ್ ಆಹಾರಕ್ಕೆ ಜಿರಳೆ ಹಾಕಿದವರ ಬಂಧನ

Subscribe to Oneindia Kannada

ಬೆಂಗಳೂರು, ಅಕ್ಟೋಬರ್ 23: ಇಂದಿರಾ ಕ್ಯಾಂಟೀನ್ ಉಪಾಹಾರದಲ್ಲಿ ಜಿರಳೆ ಸಿಕ್ಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಇಂದಿರಾ ಕ್ಯಾಂಟೀನ್‌ ಉಪಹಾರದಲ್ಲಿ ಜಿರಳೆ, ದೂರು ದಾಖಲು

ಉಪಹಾರದಲ್ಲಿ ಜಿರಳೆ ಸಿಕ್ಕಿದ್ದ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಪೊಲೀಸರು ಜಿರಳೆ ಹಾಕಿದ್ದ ಹೇಮಂತ್ ಮತ್ತು ದೇವರಾಜ್ ಎಂಬವರನ್ನು ಬಂಧಿಸಿದ್ದಾರೆ.

Two drivers arrested for putting cockroach in food at Indira Canteen

ಬಂಧಿತರು ಆಟೋ ಚಾಲಕರಾಗಿದ್ದು ಪ್ರಚಾರಕ್ಕೆ ಆಹಾರದಲ್ಲಿ ಜಿರಳೆ ಹಾಕಿದ್ದಾಗಿ ಬಾಯ್ಬಿಟ್ಟಿದ್ದಾರೆ ಎಂಂದು ಪೊಲೀಸರು ಹೇಳಿದ್ದಾರೆ.

Two drivers arrested for putting cockroach in food at Indira Canteen

ಅಕ್ಟೋಬರ್ 20ರಂದು ಬೆಳಗ್ಗೆ ಹೇಮಂತ್ ಮತ್ತು ದೇವರಾಜ್ ನಾಗರಬಾವಿ ಮಾಲಗಾಳದ ಇಂದಿರಾ ಕ್ಯಾಂಟಿನಿನಲ್ಲಿ ಉಪಹಾರಕ್ಕೆ ಜಿರಳೆ ಹಾಕಿ ಅದನ್ನು ವಿಡಿಯೋ ಮಾಡಿದ್ದರು. ವಿಡಿಯೋದಲ್ಲಿ ಅಲ್ಲಿನ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two autorickshaw drivers have been arrested for allegedly dropping a cockroach in the food served at the state government-run Indira Canteen.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ