ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಮತ್ತೆ ಎರಡು ದಿನ ಮಳೆ ಬರುವ ಸಾಧ್ಯತೆ

|
Google Oneindia Kannada News

Recommended Video

ಬೆಂಗಳೂರಿನಲ್ಲಿ ಮತ್ತೆ 2 ದಿನ ಮಳೆಯಾಗುವ ಸಾಧ್ಯತೆ ಇದೆ | Oneindia Kannada

ಬೆಂಗಳೂರು, ಏಪ್ರಿಲ್ 12: ದಕ್ಷಿಣ ಒಳನಾಡಿನಲ್ಲಿ ಇನ್ನೂ ಇರುವ ಟ್ರಫ್ ನಿಂದಾಗಿ ಏ.12 ಹಾಗೂ 13 ರಂದು ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಏಪ್ರಿಲ್ ಆರಂಭದಲ್ಲೇ ಸೃಷ್ಟಿಯಾದ ಟ್ರಫ್ ನಿಂದಾಗಿ ಕೆಲ ದಿನಗಳವರೆಗೆ ಮಳೆ ಸುರಿದಿತ್ತು. ಟ್ರಫ್ ( ದಟ್ಟ ಮೋಡಗಳ ಸಾಲು) ಇನ್ನೂ ಮುಂದುವರೆದಿರುವುದರಿಂದ ಮತ್ತೆ ಎರಡು ದಿನ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಬೆಂಗಳೂರಲ್ಲಿ ಏಪ್ರಿಲ್ 10ರವರೆಗೆ ಮಳೆ ಮುಂದುವರೆಯಲಿದೆ ಬೆಂಗಳೂರಲ್ಲಿ ಏಪ್ರಿಲ್ 10ರವರೆಗೆ ಮಳೆ ಮುಂದುವರೆಯಲಿದೆ

ಮಳೆ ಬರುವ ಸಾಧ್ಯತೆಯಿಂದಾಗಿ ನಗರದ ತಾಪಮಾನದಲ್ಲಿ ಹೆಚ್ಚಳವಾಗಿತ್ತು. ಹಿಂದಿನ ವರ್ಷಗಳಲ್ಲಿ ಇದೇ ಅವಧಿಯಲ್ಲಿ ಗರಿಷ್ಠ ತಾಪಮಾನ 36ರಿಂದ 29 ಡಿಗ್ರಿ ಸೆಲ್ಸಿಯಸ್‌ ಇತ್ತು. ಈ ವರ್ಷ ಏಪ್ರಿಲ್ ಎರಡನೇ ವಾರದಲ್ಲೂ ಗರಿಷ್ಠ ತಾಪಮಾನ 33.ಡಿಗ್ರಿ ಸೆಲ್ಸಿಯಸ್ ದಾಟಿಲ್ಲ. ಗುರುವಾರ ನಗರದಲ್ಲಿ ಗರಿಷ್ಠ 33.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ 21.9 ಡಿಗ್ರಿ ಸೆಲ್ಸಿಯಸ್, ಕೆಐಎಎಲ್ ನಲ್ಲಿ ಗರಿಷ್ಠ 33ಡಿಗ್ರಿ ಸೆಲ್ಸಿಯಸ್, ಕನಿಷ್ಠ 21.4 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್ ನಲ್ಲಿ ಗರಿಷ್ಠ 32.8ಡಿಗ್ರಿ ಸೆಲ್ಸಿಯಸ್, ಕನಿಷ್ಠ 21.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

Two days rain in Bengaluru

ಇನ್ನೂ 48 ಗಂಟೆಗಳ ಕಾಲ ಮೋಡಕವಿದ ವಾತಾವರಣ ನಿರ್ಮಾಣವಾಗಲಿದ್ದು, 2 ದಿನ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

English summary
Continuous formation of trough in south interior Karnataka will result in likely rain in Bengaluru on April 12 and 13, Indian Meteorological department said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X