ಸೋಮೇಶ್ವರ ಜಾತ್ರೆ: ಹಲಸೂರಿನಲ್ಲಿ 2 ದಿನ ಮದ್ಯ ಮಾರಾಟ ನಿಷೇಧ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 13: ಹಲಸೂರಿನಲ್ಲಿ ಶ್ರೀ ಸೋಮೇಶ್ವರ , ಕಾಮಾಕ್ಷಮ್ಮ ಜಾತ್ರೆಯು ಏ.14 ಹಾಗೂ 15 ರಂದು ನಡೆಯಲಿದ್ದು, ಈ ಎರಡು ದಿನ ಆ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಬಾರ್ ಅಂಡ್ ರೆಸ್ಟೋರೆಂಟ್, ಮದ್ಯದಂಗಡಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಈ ಉತ್ಸವದಲ್ಲಿ 30ರಿಂದ 40 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ. ದೇವರುಗಳ ಉತ್ಸವ ಹಾಗೂ ಪಲ್ಲಕ್ಕಿ ಉತ್ಸವಗಳು ನಡೆಯುವ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮದ್ಯದಂಗಡಿ, ಬಾರ್ ಹಾಗೂ ರೆಸ್ಟೋರೆಂಟ್ ಗಳನ್ನು ಮದ್ಯ ಮಾರಾಟ ನಿಷೇಧಿಸಲಾಗಿದೆ.

Two days liquor sale restricted in Halsoor limit

ಮದ್ಯಪ್ರಿಯರಿಗೆ ಶಾಕ್: ಏ.1ರಿಂದ ಮದ್ಯ ಮತ್ತಷ್ಟು ದುಬಾರಿ

ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೂರ್ವ ವಿಭಾಗದ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಾರ್ ಮತ್ತು ರೆಸ್ಟೋರೆಂಟ್ ಗಳು, ವೈನ್ ಶಾಪ್ ಗಳು, ಸಿಎಲ್ 4 ಕ್ಲಬ್, (ಸಿಎಲ್ 6ಎ ಸ್ಟಾರ್ ಹೋಟೆಲ್ ಗಳು ಮತ್ತು ಸಿಎಲ್ 8 ಮಿಲಿಟರಿ ಕ್ಯಾಂಟೀನ್ ಗಳನ್ನು ಹೊರತುಪಡಿಸಿ ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಲು ಮತ್ತು ಮಾರಾಟ ಮಾಡದಿರಲು ನಿಷೇಧಾಜ್ಞೆ ವಿಧಿಸಲಾಗಿದೆ.

ಏ.14ರಂದು ಬೆಳಗ್ಗೆ 8ಗಂಟೆಯಿಂದ ಏ.15ರಂದು ಸಂಜೆ 5 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Following Someshwar and Kamakshamma jatra mahotsav and Pallakki utsav of Halsoor, Bengaluru police commissioner has imposed restriction on liquor sale from April 14, 8AM to 5 PM on April 15. During this period all bar and restaurant, wine shop should be closed.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ