ಬೆಂಗಳೂರಲ್ಲಿ ಜ.20, 21ರಂದು ಕಾರ್ಟೂನು ಹಬ್ಬ

Posted By: Gururaj
Subscribe to Oneindia Kannada

ಬೆಂಗಳೂರು, ಜನವರಿ 14 : ನಮ್ಮೂರ ಹಬ್ಬ 2018ರ ಅಂಗವಾಗಿ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಕಾರ್ಟೂನು ಹಬ್ಬ ಆಯೋಜಿಸಲಾಗಿದೆ.

ಬೆಂಗಳೂರಿನ ಜಯನಗರದ ಶಾಲಿನಿ ಗ್ರೌಂಡ್‌ನಲ್ಲಿ ಜನವರಿ 20, 21ರಂದು ಕರಾವಳಿಯ ವಿಶಿಷ್ಠ ಸಂಸ್ಕೃತಿಯ ಸಂಭ್ರಮದ ನಮ್ಮೂರ ಹಬ್ಬ ನಡೆಯಲಿದೆ.

Two day Cartoonu Habba in Bengaluru on January 20, 21

ನಮ್ಮೂರ ಹಬ್ಬದ ಅಂಗವಾಗಿ ಕಾರ್ಟೂನು ಹಬ್ಬವನ್ನು ಆಯೋಜನೆ ಮಾಡಲಾಗಿದೆ. ಹಬ್ಬಕ್ಕೆ ಆಗಮಿಸುವ ಜನರು ಸಂಭ್ರಮದೊಂದಿಗೆ ಕಾರ್ಟೂನುಗಳ ರಸದೂಟವನ್ನು ಸವಿಯಬಹುದಾಗಿದೆ.

ಕನ್ನಡದ ಹೆಮ್ಮೆಯ ವ್ಯಂಗ್ಯಚಿತ್ರಕಾರರ ಮನಸೆಳೆವ ಕಾರ್ಟೂನ್

ಕಾರ್ಟೂನು ಹಬ್ಬದಲ್ಲೇನಿದೆ?

* ಕಚಗುಳಿಯಿಡುವ ಕಾರ್ಟೂನುಗಳು
* ಸ್ಥಳದಲ್ಲೇ ನಿಮ್ಮ ಕ್ಯಾರಿಕೇಚರ್ ರಚನೆ (ನಿಮ್ಮ ದೇಣಿಗೆ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮುಡಿಪು)
* ನಿಮಗಾಗಿ ಕ್ಯಾರಿಕೇಚರ್, ಡೈಲಾಗ್ ಸ್ಪರ್ಧೆಗಳು
* ಮಿನಿ ಕಾರ್ಟೂನು ಕಾರ್ಯಾಗಾರಗಳು

ಜ.20ರಂದು ಉದ್ಘಾಟನೆ : ಜನವರಿ 20ರಂದು ನಮ್ಮೂರ ಹಬ್ಬವನ್ನು ಖ್ಯಾತ ಯಕ್ಷಗಾನ ಭಾಗವತರಾದ ಸುಬ್ರಮಣ್ಯ ಧಾರೇಶ್ವರ ಅವರು ಉದ್ಘಾಟಿಸಲಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ ಸುಕ್ರಿ ಬೊಮ್ಮೆಗೌಡ ಈ ಸಂದರ್ಭದಲ್ಲಿ ಉಪಸ್ಥಿತರಿರುವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೃಹ ಸಚಿವ ರಾಮಲಿಂಗಾ ರೆಡ್ಡಿ ವಹಿಸಲಿದ್ದಾರೆ. ಜಯನಗರ ಕ್ಷೇತ್ರದ ಶಾಸಕ ಬಿ.ಎನ್.ವಿಜಯ ಕುಮಾರ್ ಸೇರಿದಂತೆ ವಿವಿಧ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The two-day Cartoonu Habba organized on January 20, 21 in Shalini Grounds, Jayanagar, Bengaluru as a part of Nammura Habba 2018. Nammura Habba a coastal food, sports and culture festival in Bengaluru city.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ