ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ದಿನಕ್ಕೆ ಎರಡರಂತೆ ಸೈಬರ್ ಅಪರಾಧ ದಾಖಲು

|
Google Oneindia Kannada News

ಬೆಂಗಳೂರು, ಡಿಸೆಂಬರ್ 1 : ದೇಶದ ಐಟಿ ರಾಜಧಾನಿ ಎಂಬ ಖ್ಯಾತಿ ಹೊಂದಿರುವ ಬೆಂಗಳೂರು ನಗರದಲ್ಲಿ ಕಳೆದ ವರ್ಷ ದಿನಕ್ಕೆ ಎರಡರಂತೆ ಸರಾಸರಿ ಒಟ್ಟು 762 ಸೈಬರ್ ಅಪರಾಧಗಳು ದಾಖಲಾಗಿವೆ.

ಅಂದರೆ ಮಾಹಿತಿ ತಂತ್ರಜ್ಞಾನ ಪರಿಣಿತರ ಪ್ರಕಾರ ನಗರದಲ್ಲೇ ಅತಿ ಹೆಚ್ಚು ಐಟಿ ಆಧಾರಿತ ಅಪರಾಧಗಳು ನಡೆಯುತ್ತಿರುವುದು ನಾಗರಿಕರ ಆತಂಕಕ್ಕೆ ಕಾರಣವಾಗಿದೆ. ಆದರೆ ನೆರೆಯ ಮಹಾರಾಷ್ಟ್ರ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಇಂತಹ ಅಪರಾಧಗಳ ಸಂಖ್ಯೆ ಕಡಿಮೆಯೇ. ಆದರೂ ಇಡೀ ದೇಶಕ್ಕೆ ಹೋಲಿಸಿದಾಗ ಉತ್ತರ ಪ್ರದೇಶ, ಮಹಾರಾಷ್ಟ್ರ ನಂತರ ಸ್ಥಾನದಲ್ಲಿ ಕರ್ನಾಟಕ ನಿಲ್ಲುತ್ತದೆ.

ಜನರ ಬ್ಯಾಂಕ್‌ ಖಾತೆಗೆ ಕನ್ನ ಹಾಕುತ್ತಿದ್ದ ಇಬ್ಬರು ವಿದೇಶಿಗರ ಬಂಧನಜನರ ಬ್ಯಾಂಕ್‌ ಖಾತೆಗೆ ಕನ್ನ ಹಾಕುತ್ತಿದ್ದ ಇಬ್ಬರು ವಿದೇಶಿಗರ ಬಂಧನ

ಕರ್ನಾಟಕದಲ್ಲಿ 1101 ಪ್ರಕರಣಗಳು, ಮುಂಬೈ 980 ಪ್ರಕರಣಗಳು, ಉತ್ತರ ಪ್ರದೇಶದಲ್ಲಿ 2639 ಪ್ರಕರಣಗಳು ಹಾಗೆಯೇ ಮಹಾರಾಷ್ಟ್ರದಲ್ಲಿ 2380 ಸೈಬರ್ ಪ್ರಕರಣಗಳು ದಾಖಲಾಗಿದೆ. ಬೆಂಗಳೂರು ಮುಂಬೈ ನಂತರದಲ್ಲಿದೆ. 2015 ರಲ್ಲಿ ಬೆಂಗಳೂರಿನಲ್ಲಿ 1042, 2016 ರಲ್ಲಿ 762 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದೆ.

Two Cybercrimes a day in Bengaluru

ಅದರಲ್ಲಿ ಕಳೆದ ವರ್ಷ ದಾಖಲಾದ 762 ಪ್ರಕರಣಗಳ ಪೈಕಿ 718 ಪ್ರಕರಣಗಳು ಕಂಪ್ಯೂಟರ್ ಗೆ ಸಂಬಂಧಿಸಿದ್ದಾಗಿದ್ದು ಮಾಹಿತಿತಂತ್ರಜ್ಞಾನ ಕಾಯ್ದೆ ಪ್ರಕಾರ ಸೆಕ್ಷನ್ 66 ಹಾಗೂ 66ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅದರಲ್ಲಿ 584 ಲಾಭಕ್ಕಾಗಿ, 37 ಬ್ಲ್ಯಾಕ್ ಮೇಲ್ ಮತ್ತು 37 ಸೇಡು, 31 ಲೈಂಗಿಕ ಕಿರುಕುಳ ಅಪರಾಧ ಪ್ರಕರಣಗಳಾಗಿವೆ.

ಒಟ್ಟು 1735 ಸೈಬರ್ ಪ್ರಕರಣಗಳು ದಾಖಲಾಗಿದೆ ಅದರಲ್ಲಿ 975 ಪ್ರಕರಣಗಳು ಇತ್ಯರ್ಥವಾಗದೆ ಬೆಂಗಳೂರು ಪೊಲೀಸರ ಬಳಿ ಇದೆ. ಇನ್ನು 624 ಪ್ರಕರಣಗಳು ಸತ್ಯವಾದದ್ದಾದರೂ ಸರಿಯಾದ ಸಾಕ್ಷಿ ದೊರೆತಿಲ್ಲ. ಹಾಗಾಗಿ ಕೇವಲ 88 ಪ್ರಕರಣದ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ.

ಬೆಂಗಳೂರಿನಲ್ಲಿ ಎಟಿಎಂ ಮೋಸದ ಜಾಲ ಪತ್ತೆ, ಲಕ್ಷಾಂತರ ಹಣ ಗುಳುಂಬೆಂಗಳೂರಿನಲ್ಲಿ ಎಟಿಎಂ ಮೋಸದ ಜಾಲ ಪತ್ತೆ, ಲಕ್ಷಾಂತರ ಹಣ ಗುಳುಂ

ಜನರಲ್ಲಿ ಸೈಬರ್ ಅಪರಾಧದ ಕುರಿತು ಜಾಗೃತಿ ಮೂಡಿಸಿದರೆ ಅಪರಾಧವನ್ನು ತಡೆಯಬಹುದು. ಸಾಕಷ್ಟು ಪ್ರಕರಣಗಳು ಸರಿಯಾದ ಸಾಕ್ಷಾಧಾರವಿಲ್ಲದೆ ಕೈತಪ್ಪಿಹೋಗುತ್ತದೆ ಮತ್ತು ಇನ್ನು ಇಂತಹ ಅಪರಾಧ ಪ್ರಕರಣಗಳಲ್ಲಿ ಅಪರಾಧಿಗಳನ್ನು ಪತ್ತೆಹಚ್ಚಲು ನೂತನ ತಂತ್ರಜ್ಞಾನದ ಕೊರತೆಯಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

English summary
The Bengaluru registered 762 Cybercrimes last year. Which translates into an average of two cases a day. The NCRM report revealed that Bengaluru accounts 18% of the total digital crimes recorded in Bengaluru after Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X