ತಾವರೆ ಹೂವಿನಂಥ ಮಕ್ಕಳ ಪ್ರಾಣ ತೆಗೆದ ತಾವರೆಯ ಕಥೆ!

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್,21: ಒಂದೇ ಕುಟುಂಬದ ತಾವರೆ ಹೂವಿನಂಥ ಮಕ್ಕಳು ಕೆರಯಲ್ಲಿರುವ ತಾವರೆ ಹೂ ಕೀಳಲು ಹೋಗಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಚಿಕ್ಕಹೊಸಹಳ್ಳಿಯ ಹುಚ್ಚಮ್ಮನ ಕೆರೆಯಲ್ಲಿ ಭಾನುವಾರ ನಡೆದಿದೆ.

ಆನೇಕಲ್ ತಾಲೂಕಿನ ಚಿಕ್ಕಹೊಸಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಕೀರ್ತನಾ (11) ಹಾಗೂ ಎರಡನೇ ತರಗತಿಯಲ್ಲಿ ಓದುತ್ತಿದ್ದ ಕಿರಣ್ (9) ಸಾವನ್ನಪ್ಪಿರುವ ಪುಟಾಣಿಗಳು. ಇವರು ಯಲ್ಲಪ್ಪ ಎಂಬುವವರ ಮಕ್ಕಳು.[ಬೆಂಗಳೂರಿನ ಕೆರೆಗಳು ನಕ್ಷೆಯಲ್ಲಿ ಮಾತ್ರ ಇವೆ]

Two children drown in lake near Anekal, Bengaluru

ಭಾನುವಾರ ಶಾಲೆಗೆ ರಜೆ ಇದ್ದುದರಿಂದ ತಮ್ಮ ತೋಟದ ಬಳಿ ಹೋಗಿದ್ದಾರೆ. ಬಳಿಕ ಆ ಗ್ರಾಮದಿಂದ ಹೊರಭಾಗದಲ್ಲಿರುವ ಕೆರೆಯ ಬಳಿ ಹೋದಾಗ ಅವರಿಗೆ ಕೆರೆಯಲ್ಲಿ ಸುಂದರವಾಗಿ ಅರಳಿ ನಿಂತ ತಾವರೆ ಹೂ ಕಂಡಿದೆ. ತಾವರೆ ಹೂವಿನ ಆಕರ್ಷಣೆಗೆ ಒಳಗಾದ ಮಕ್ಕಳು ಹೂ ಕೀಳಲು ಮುಂದಾಗಿದ್ದಾರೆ. ಇವರಲ್ಲಿ ಕಿರಣ್ ಕಾಲುಜಾರಿ ಕೆರೆಗೆ ಬಿದ್ದಿದ್ದಾನೆ.[ಮುಖ್ಯಮಂತ್ರಿಗಳ ಗಮನ ಸೆಳೆದ ಬೆಳ್ಳಂದೂರು ಕೆರೆ ನೊರೆ]

ಬಿದ್ದ ತಮ್ಮನನ್ನು ನೋಡಿದ ಅಕ್ಕ ಕೀರ್ತನಾ ಆತನನ್ನು ರಕ್ಷಣೆ ಮಾಡಲು ಕೆರೆಗೆ ಇಳಿದಿದ್ದಾಳೆ. ಆದರೆ ಆಕೆಗೂ ಮೇಲೆ ಬರಲು ಆಗದೆ ಇಬ್ಬರು ಒಂದೇ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಏಕಕಾಲದಲ್ಲಿ ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬದ ನೋವು, ಅವರ ಅಕ್ರಂದನ ಮುಗಿಲು ಮುಟ್ಟಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Two children Kirthana (11), Kiran (9) drown in Chikkahossahalli lake near Anekal, Bengaluru on Sunday, March 20.
Please Wait while comments are loading...