ಒಂದು ಕೇಸಿನ ಬೆನ್ನಟ್ಟಿದರೆ 11ರಲ್ಲಿ ತಗಲಾಕಿಕೊಂಡರು

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 18: ಬೆಂಗಳೂರಿನ ವೈಯಾಲಿ ಕಾವಲ್ ನಲ್ಲಿ ನಡೆದಿದ್ದ ಕಳವು ಪ್ರಕರಣದ ಬೆನ್ನಟ್ಟಿದ ಪೊಲೀಸರಿಗೆ 11 ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಕಳ್ಳರು ಸಿಕ್ಕಿಬಿದ್ದಿದ್ದು, ಬಂಧಿತರಿಂದ ಒಟ್ಟು 18 ಲಕ್ಷ ಮೌಲ್ಯದ ಆಭರಣ, ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.[ಬಾಡಿ ಟು ಬಾಡಿ, ಹ್ಯಾಪಿ ಎಂಡಿಂಗ್, ಸ್ಯಾಂಡ್ ವಿಚ್!]

ವೈಯಾಲಿಕಾವಲ್ ಪೊಲೀಸ್ ಠಾಣೆ ಸರಹದ್ದಿನಲ್ಲಿರುವ ಕೋದಂಡರಾಮಪುರದ ಮನೆಯೊಂದರಲ್ಲಿ 1.5 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಪ್ರಕರಣದ ತನಿಖೆಗೆ ಇಳಿದ ಪೊಲೀಸರಿಗೆ ಬೆಂಗಳೂರಿನ ಆರ್.ಟಿ.ನಗರದ ಸಮೀರ್ ಖಾನ್ ಹಾಗೂ ಕೆ.ಜಿ.ಹಳ್ಳಿಯ ಮಹ್ಮದ್ ಫೈರೋಜ್ ಸಿಕ್ಕಿಬಿದ್ದರು. ಇವರಿಬ್ಬರನ್ನೂ ವಿಚಾರಣೆ ಮಾಡಿದಾಗ ಒಟ್ಟು ಹನ್ನೊಂದು ಪ್ರಕರಣ ಬೆಳಕಿಗೆ ಬಂತು.

Two arrested; 18 lakh valueable seized

ಹಗಲು ವೇಳೆಯಲ್ಲಿ ಮೋಟಾರ್ ಬೈಕ್ ನಲ್ಲಿ ತಿರುಗಾಡುತ್ತಿದ್ದ ಆರೋಪಿಗಳು, ಮನೆಗಳನ್ನು ಗುರುತಿಸುತ್ತಿದ್ದರು. ಆ ನಂತರ ಬೀಗ ಒಡೆದು ಕಳವು ಮಾಡುತ್ತಿದ್ದರು. ವೈಯಾಲಿಕಾವಲ್ ಠಾಣೆಯಲ್ಲಿ 3, ಅಶೋಕ್ ನಗರ ವ್ಯಾಪ್ತಿಯಲ್ಲಿ 1, ಯಶವಂತಪುರ ಉತ್ತರ ವಿಭಾಗದ ಪೊಲೀಸ್ ಠಾಣೆಯಲ್ಲಿ 2, ಸಂಜಯನಗರ ಪೊಲೀಸ್ ಠಾಣೆಯಲ್ಲಿ 2, ರಾಜಗೋಪಾಲನಗರ, ಪೀಣ್ಯ, ಕೆ.ಆರ್.ಪುರಂ ಠಾಣೆಯ ತಲಾ 1 ಪ್ರಕರಣ ಸೇರಿ 11 ಪ್ರಕರಣಗಳಲ್ಲಿ ಈ ಇಬ್ಬರು ಆರೋಪಿಗಳು ಭಾಗಿಯಾಗಿದ್ದರು.[ಕಾಡುಗೋಡಿಯಲ್ಲಿ ಟೆಕ್ಕಿ ಶವ ಪತ್ತೆ, ರೂಂಮೇಟ್ಸ್ ಪರಾರಿ!]

ಇ‍ಷ್ಟೇ ಅಲ್ಲದೇ ಹೈದರಾಬಾದ್ ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಆರೋಪಿಗಳಿಂದ 560 ಗ್ರಾಂ ತೂಕದ ಚಿನ್ನಾಭರಣ, 1 ಕೆ.ಜಿ. 800 ಗ್ರಾಂ ಬೆಳ್ಳಿ ಆಭರಣ, ಟಿ.ವಿ, 32 ಸಾವಿರ ರು. ನಗದು, ಹೋಂಡಾ ಕರಿಜ್ಮಾ ಬೈಕ್, ಕಬ್ಬಿಣದ ರಾಡು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಮೌಲ್ಯ 18 ಲಕ್ಷ ರುಪಾಯಿ ಎಂದು ಅಂದಾಜಿಸಲಾಗಿದೆ.

ಮಸಾಜ್ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ: ಬೆಂಗಳೂರಿನ ರಾಜರಾಜೇಶ್ವರಿ ನಗರದ ಬೆಮಲ್ ಲೇಔಟ್ ನಲ್ಲಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 12 ಮಂದಿಯನ್ನು ಬಂಧಿಸಲಾಗಿದೆ.[ಬೆಂಗಳೂರಿನ ಮದರಸಾದಲ್ಲಿ ಮಕ್ಕಳಿಗೆ ಹಿಂಸೆ, ಇಬ್ಬರ ಬಂಧನ]

ಡಿ.ಎನ್.ಮೋಹನ್ ಕುಮಾರ್, ಎ.ಆರ್.ಚೇತನ್, ಎಚ್.ಪ್ರವೀಣ್ ಕುಮಾರ್, ಜೆ.ಕಾರ್ತಿಕ್, ಬಿ.ಆರ್.ಸುನೀಲ್, ಯೋಗೇಶ್, ಪ್ರವೀಣ್, ರಘು, ಆನಂದ್, ನಟೇಶ್, ಗಣೇಶ್, ಚೇತನ್ ಬಂಧಿತರು.

ಆರೋಪಿಗಳು ಬಾಡಿ ಟೂ ಬಾಡಿ ಮಸಾಜ್, ಹ್ಯಾಪಿ ಎಂಡಿಂಗ್, ಸ್ಯಾಂಡ್ ವಿಚ್ ಎಂಬ ಲೈಂಗಿಕ ಚಟುವಟಿಕೆ ನಡೆಸುತ್ತಿದ್ದರು. 13 ಮೊಬೈಲ್ ಫೋನ್, 20 ಸಾವಿರ ನಗದು, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಮೂವರು ಹುಡುಗಿಯರನ್ನು ರಕ್ಷಿಸಲಾಗಿದೆ. ರಾಜರಾಜೇಶ್ವರಿ ನಗರದಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru Vyalikaval police arrested two thiefs and seized valuables worth of 18 lakh. Rajarajeshwari nagar police arrested 12 people who are engaged in prostitution in the name of massage parlour
Please Wait while comments are loading...