ಕೆಲಸ ಕೊಡಿಸುವುದಾಗಿ ವೇಶ್ಯಾವಾಟಿಕೆಗೆ ದೂಡಲು ಯತ್ನ, ಬಂಧನ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 7: ಬೆಂಗಳೂರಿನ ಆರ್.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಹೊರರಾಜ್ಯದ ಹುಡುಗಿಯರಿಗೆ ಲೈವ್ ಬ್ಯಾಂಡಿನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವೇಶ್ಯಾವಾಟಿಕೆಗೆ ಒತ್ತಾಯಪಡಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರ್.ಟಿ. ನಗರದ ಶೇಕ್ ರಿಯಾಜುದ್ದೀನ್ ಅಲಿಯಾಸ್ ಯುಸೂಫ್(49), ಮಹಾರಾಷ್ಟ್ರದ ದೇವಿದಾಸ್ ಅಲಿಯಾಸ್ ಸದಾಶಿವ(42) ಬಂಧಿತರು.

ಆರ್.ಟಿ.ನಗರದ 15ನೇ ಕ್ರಾಸಿನ ಮನೆಯೊಂದರಲ್ಲಿ ಹೊರರಾಜ್ಯ ಪಂಜಾಬಿನ 4 ಹುಡುಗಿಯರನ್ನು ನಿಮಗೆ ಲೈವ್ ಬ್ಯಾಂಡಿನಲ್ಲಿ ಕೆಲಸ ಕೊಡಿಸುವುದಾಗಿ ಬಂಧನದಲ್ಲಿಟ್ಟಿದ್ದರು.[ಮಹಿಳೆಯರ ಮಾರಾಟ ಮಾಡುತ್ತಿದ್ದ ಮೈಸೂರಿನ ಅಲ್ಮಾಸ್ ಕಂಬಿ ಹಿಂದೆ]

Two accused promise to give work. but forced brothel

ಕೆಲವು ದಿನಗಳಲ್ಲಿ ಅವರು ಕೆಲಸ ಕೊಡಿಸುವುದಿಲ್ಲ ಎಂದು ತಿಳಿದು ಮನೆಗೆ ಹೋಗಲು ಮುಂದಾದರು ಆದರೆ ಅವರನ್ನು ರಿಯಾಜುದ್ದೀನ್ ಮತ್ತು ದೇವಿದಾಸ್ ಅವರನ್ನು ಕೆಲಸ ಕೊಡಿಸುತ್ತೇವೆ ಎಂದು ಸುಮ್ಮನಿರಿಸಿದ್ದರು.
ಆದರೆ ಒಮ್ಮೆಲೆ ಅವರನ್ನು ವೇಶ್ಯಾವಾಟಿಕೆಗೆ ಸಹಕರಿಸುವಂತೆ ದುಂಬಾಲು ಬಿದ್ದಿದ್ದಾರೆ. ಯುವತಿಯರು ಅವರ ಮಾತಿಗೆ ಅತಂಕಗೊಂಡಿದ್ದಾರೆ. ಮತ್ತು ಮುಂದೇನು ಮಾಡಬೇಕೆಂದು ತಿಳಿಯದಾಗಿದೆ. ಇದೇ ವೇಳೆ ಪೊಲೀಸ್ ಬಾತ್ಮೀದಾರನಿಂದ ಈ ವಿಷಯ ತಿಳಿದಿದ್ದು, ಖಚಿತ ಮಾಹಿತಿಯ ಆಧಾರದ ಮೇಲೆ ಆರ್ ಟಿ. ನಗರದ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಪಂಜಾಬಿನ ನಾಲ್ಕು ಮಹಿಳೆಯರನ್ನು ರಕ್ಷಿಸಿದರು.
ದಾಳಿಯಲ್ಲಿ ಆರೋಪಿಗೆ ಸಂಬಂಧಿಸಿದ ಮೂರು ಮೊಬೈಲ್ ಫೋನ್ ಗಳು ಮತ್ತು ರು 1.850 ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಸದರಿಮನೆಯಲ್ಲಿ ಅಕ್ರಮವಾಗಿ ಕೂಡಿಹಾಕಿ ಕೆಲಸವನ್ನು ಕೊಡಿಸದೇ ಮೋಸಮಾಡಿರುವುದು ದಾಳಿಯ ಸಮಯದಲ್ಲಿ ಕಂಡುಬಂದಿದ್ದು, ಐಪಿಸಿ ಸೆಕ್ಷನ್ 342, 370, 420 ಅನ್ವಯ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two Accuse to promise to give work in live band 4 panjabi lady stay in R.T. Nagar in bengaluru, but accuse force to Brothel this lady. Police collect the information and arrest the accuse shake Riasudden and devidas.
Please Wait while comments are loading...