ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ರಾಜಿನಾಮೆಗೆ ಟ್ವಿಟ್ಟರಿಗರ ಆಗ್ರಹ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 6: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಬೇಕೆಂದು ಟ್ವಿಟ್ಟರಿಗರು ಆಗ್ರಹಿಸಿದ್ದು, ಅದು ಬುಧವಾರ ಸಂಜೆ ವೇಳೆಗೆ ಟ್ರೆಂಡ್ ಆಗಿ ಬೆಳೆದಿತ್ತು.

ಗೌರಿ ಲಂಕೇಶ್ ಹತ್ಯೆ, ಮಂಗಳವಾರ ನಿಜಕ್ಕೂ ನಡೆದದ್ದೇನು?ಗೌರಿ ಲಂಕೇಶ್ ಹತ್ಯೆ, ಮಂಗಳವಾರ ನಿಜಕ್ಕೂ ನಡೆದದ್ದೇನು?

ರಾಜ್ಯ ಸರ್ಕಾರದ ಹಲವಾರು ಭ್ರಷ್ಟಾಚಾರಗಳನ್ನು ಬಲ್ಲವರಾಗಿದ್ದ ಗೌರಿ ಲಂಕೇಶ್ ಅವರು ಶೀಘ್ರದಲ್ಲೆ ಅದೆಲ್ಲವನ್ನೂ ಬಹಿರಂಗಗೊಳಿಸಲು ನಿರ್ಧರಿಸಿದ್ದರು. ಹಾಗಾಗಿಯೇ, ಗೌರಿಯವರನ್ನು ಹತ್ಯೆ ಮಾಡಲಾಗಿದೆ ಎಂಬ ಸುದ್ದಿಯೊಂದನ್ನು ವೆಬ್ ಸೈಟ್ ಒಂದು ವರದಿ ಮಾಡಿದೆ. ಇದೂ ಸೇರಿದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಕಾರಣಕ್ಕಾಗಿಯೂ ಸಿಡಿದೆದ್ದಿರುವ ಟ್ವಿಟ್ಟಿಗರು ಸಿದ್ದರಾಮಯ್ಯ ಅವರ ರಾಜಿನಾಮೆಗೆ ಆಗ್ರಹಿಸಿದ್ದಾರೆ.

ಗೌರಿ ಹತ್ಯೆಯಲ್ಲಿ ಮೋದಿಯನ್ನು ಎಳೆತಂದ ರಾಹುಲ್ಗೆ ಗಡ್ಕರಿ ತಿರುಗೇಟುಗೌರಿ ಹತ್ಯೆಯಲ್ಲಿ ಮೋದಿಯನ್ನು ಎಳೆತಂದ ರಾಹುಲ್ಗೆ ಗಡ್ಕರಿ ತಿರುಗೇಟು

Twitterati demand the resignation of Siddaramaiah as Karnataka CM

ಟ್ವಿಟ್ಟರ್ ನಲ್ಲಿ ಒಂದೊಮ್ಮೆ ಅವರು ''ಭಾರತದ ಐಕ್ಯತೆಗೆ ಧಕ್ಕೆ ತರುವಂಥ ಶಕ್ತಿಗಳ ಬಗ್ಗೆ ನೆನೆದಾಗಲೆಲ್ಲಾ ತುಂಬಾ ಚಿಂತಾಕ್ರಾಂತಳಾಗುತ್ತೇನೆ'' ಎಂದಿದ್ದನ್ನೂ ಜಾಲತಾಣವೊಂದು ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದಿರುವ ಕೆಲವಾರು ಟ್ವಿಟ್ಟಿಗರು ಸಿದ್ದರಾಮಯ್ಯ ಅವರ ರಾಜಿನಾಮೆಗೆ ಆಗ್ರಹಿಸಿದ್ದಾರೆ.

ಗೌರಿ ಹತ್ಯೆಯ ಬಳಿಕ, ಎಡಪಂಥೀಯರನ್ನು ಕಾಯಲು ಮುಂದಾದ ಸಿಎಂಗೌರಿ ಹತ್ಯೆಯ ಬಳಿಕ, ಎಡಪಂಥೀಯರನ್ನು ಕಾಯಲು ಮುಂದಾದ ಸಿಎಂ

English summary
Twitterati urges Karnataka Chief Minister Siddaramaiah to resign in the wake of veteran journalist Gauri Lankesh's murder on Septermber 6, 2017. Many of Twitter users have alleged that there is no law and order situation in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X