ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಕುರಿತು ರಮ್ಯಾ ಟ್ವೀಟ್ : ಸೆಲೆಬ್ರಿಟಿಗಳಿಂದ ಖಡಕ್ ಉತ್ತರ

|
Google Oneindia Kannada News

Recommended Video

ಮೋದಿ ಕುರಿತು ರಮ್ಯಾ ಟ್ವೀಟ್ : ಸೆಲೆಬ್ರಿಟಿಗಳಿಂದ ಖಡಕ್ ಉತ್ತರ | Oneindia Kananda

ಬೆಂಗಳೂರು, ಫೆಬ್ರವರಿ 05: ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಮಾಡಿರುವ ಟ್ವೀಟ್ ಇದೀಗ ಭಾರೀ ಸಂಚಲನ ಮೂಡಿಸಿದ್ದು, ಮೋದಿ ಅಭಿಮಾನಿಗಳು ರಮ್ಯಾ ಅವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ನಶೆಯಲ್ಲಿದ್ದಾರೆ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ ರಮ್ಯಾ ಅವರ ನಡೆಗೆ ಎಲ್ಲೆಡೆ ಟೀಕೆ ವ್ಯಕ್ತವಾಗಿದೆ. ದೇಶದ ಅತ್ಯನ್ನತ ಹುದ್ದೆಯಲ್ಲಿರುವ ಪ್ರಧಾನಿ ಕುರಿತು ಇಂಥ ಬಾಲಿಶ ಹೇಳಿಕೆ ನೀಡುವುದು ಸರಿಯೆ ಎಂಬ ಪ್ರಶ್ನೆ ಎದ್ದಿದೆ.

ಚಿತ್ರಗಳು : ಬೆಂಗಳೂರಿನಲ್ಲಿ ಮೋಡಿ ಮಾಡಿದ ಮೋದಿ

ರಮ್ಯಾ ಅವರ ಹೇಳಕೆಯನ್ನು ಹಲವರು ಖಂಡಿಸಿದ್ದಾರೆ. ಚಿತ್ರ ನಟ ಜಗ್ಗೇಶ್ ರಮ್ಯಾ ಅವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡು, ಈಕೆ ಯಾರು? ಸಾಧನೆ ಏನು? ನೆಟ್ಟಗೆ ಕನ್ನಶ ಮಾತಾಡಲು ಬರದ ಕಾಡುಪಾಪದಂತೆ ಈಕೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮೋದಿ : ಕಾಂಗ್ರೆಸ್ ಬಿಜೆಪಿ ನಡುವೆ ಟ್ವೀಟ್ ವಾರ್ಬೆಂಗಳೂರಿನಲ್ಲಿ ಮೋದಿ : ಕಾಂಗ್ರೆಸ್ ಬಿಜೆಪಿ ನಡುವೆ ಟ್ವೀಟ್ ವಾರ್

ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್, ರಮ್ಯಾ ಹೆಸರಿನಲ್ಲೇ ರಮ್ ಇದೆ! ಬಹುಶಃ ಅವರೇ ಯಾವಾಗಲೂ ರಮ್ ಕುಡಿದು ಟ್ವೀಟ್ ಮಾಡುತ್ತೆ ಅನ್ನಿಸುತ್ತೆ ಎಂದಿದ್ದಾರೆ.

ಜಗ್ಗೇಶ್ ತರಾಟೆ

"ದೊಡ್ಡವರ ಬಗ್ಗೆ ಮಾತಾಡ ಬೇಕಾದರೆ
ಮಾತಾಡುವ ಮಂದಿಗೆ ವಯಸ್ಸು ಅನುಭವ ಸಾಧನೆ ಮಾಡಿ ಪಕ್ವವಾದಾಗ ಅಪಭ್ರಂಷ ಇಲ್ಲದೆ ಚರ್ಚೆ ಮಾಡಿದರೆ ಅದನ್ನ ತರ್ಕ ಎಂದು ಒಪ್ಪಿ ವಿಮರ್ಷೆಮಾಡಿ ನಿರ್ಣಯಸುತ್ತಾರೆ ಜನ..
ವಿಶ್ವದ ಬಲಿಷ್ಟರಾಷ್ಟ್ರದ ನಾಯಕರೇ ಮೋದಿಯರವರ ಒಪ್ಪಿಮೆಚ್ಚಿದ್ದಾರೆ.
ಈಕೆ ಯಾರು?ಸಾಧನೆ ಏನು?ನೆಟ್ಟಗೆ ಕನ್ನಡ ಮಾತಾಡಲು ಬರದ ಕಾಡುಪಾಪದಂತೆ ಈಕೆ!" ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ ನವರಸ ನಾಯಕ ಜಗ್ಗೇಶ್.

ಶಿಲ್ಪಾ ಗಣೇಶ್ ಟಾಂಗ್

"ಸತತ ಸೋಲಿಗೆ ತಲೆಕೆಟ್ಟು ಆಗಾಗ ಗುಟ್ಟಾಗಿ ವಿದೇಶಕ್ಕೆ ಹೋದವರಿಗೆ ನಶೆಯ ವಿಚಾರ ಚೆನ್ನಾಗಿ ತಿಳಿದಿರುತ್ತದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ಟ್ವೀಟ್ ಮಾಡಿದ್ದಾರೆ.

ರಮ್ ಇರುವುದು ರಮ್ಯಾ ಹೆಸರಿನಲ್ಲಿ!

"ರಮ್ಯಾ ಅವರ ಹೆಸರಿನಲ್ಲಿಯೇ ರಮ್ ಇದೆ. ಬಹುಶಃ ಅವರೇ ಯಾವಾಗಲೂ ನಶೆಯಲ್ಲಿ ಟ್ವೀಟ್ ಮಾಡುತ್ತಾರೆ ಅನ್ನಿಸುತ್ತೆ" ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ ಶಿಲ್ಪಾ ಗಣೇಶ್.

ಮೋದಿ ಕುರಿತು ರಮ್ಯಾ ಟ್ವೀಟ್ ನಲ್ಲೇನಿತ್ತು?

ಬೆಂಗಳೂರಿನಲ್ಲಿ ಪರಿವರ್ತನಾ ಯಾತ್ರೆಯ ಸಮಾರೋಪ ಭಾಷಣ ಮಾಡಿದ ಮೋದಿಯವರನ್ನು ಆಡಿಕೊಂಡ ರಮ್ಯಾ, ಪ್ರಧಾನಿ ನರೇಂದ್ರ ಮೋದಿಯವರು ನಶೆಯಲ್ಲಿದ್ದಾಗ ಮಾತನಾಡಿದರೆ ಹೀಗಾಗುತ್ತದೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು.

English summary
After Prime minister Narendra Modi's visit to Karnataka's Bengaluru many celebrities started trolling Modi. And BJP leaders and supporters reacting for it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X