ಪ್ರಿಯಾಂಕ್ ಖರ್ಗೆ vs ಪ್ರತಾಪ್ ಸಿಂಹ: ಟ್ವಿಟ್ಟರ್ ವಾರ್!

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಸಂಸದ ಪ್ರತಾಪ್ ಸಿಂಹ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರ ನಡುವಿನ ಟ್ವಿಟ್ಟರ್ ವಾರ್ ಇಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ತಾವು ಯಾವುದೇ ಸಭೆಯಲ್ಲಿ, ಯಾವುದೇ ಚರ್ಚೆಯಲ್ಲಿ ಭಾಗವಹಿಸಿ ಪ್ರಿಯಾಂಕ್ ಖರ್ಗೆ ಅವರನ್ನು ಮಾತಿನ ಸಮರದಲ್ಲಿ ಎದುರಿಸಲು ಸಿದ್ಧ ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

ಮೊದಲೇ ವಿವಾದಕ್ಕೂ ಸಂಸದ ಪ್ರತಾಪ್ ಸಿಂಹ ಅವರಿಗೂ ಅವಿನಾಭಾವ ನಂಟು ಎಂಬಂಥ ಹಲವು ಸನ್ನಿವೇಶಗಳು ಇತ್ತೀಚೆಗೆ ಸೃಷ್ಟಿಯಾಗಿವೆ. ಈ ಬಾರಿ ಪ್ರತಾಪ್ ಅವರನ್ನು ವಿವಾದಕ್ಕೆಳೆದು ತಂದಿರುವುದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ![ಸೋತರೂ ಯಡಿಯೂರಪ್ಪ ಮೇಲೆ ಪ್ರತಾಪ್ ಸಿಂಹ ವಿಶ್ವಾಸ]

ನಂಜನಗೂಡು ಮತ್ತು ಗುಂಡ್ಲೆಪೇಟೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅನ್ನು ಅಭಿನಂದಿಸಲೆಂದು ಪ್ರಿಯಾಂಕ್ ಖರ್ಗೆ ಹಾಕಿದ ಟ್ವಿಟ್ಟರ್ ಹೇಳಿಕೆ ಇದೀಗ ಸಂಸದ ಪ್ರತಾಪ್ ಸಿಂಹ ಮತ್ತು ಪ್ರಿಯಾಂಕ್ ಖರ್ಗೆ ಅವರ ನಡುವಿನ ಕೆಸರೆರಚಾಟಕ್ಕೆ ವೇದಿಕೆ ಕಲ್ಪಿಸಿದೆ.[ಮೈಸೂರಿನಲ್ಲಿ ವಿಮಾನಯಾನ ಆರಂಭಿಸಲು ಪ್ರತಾಪ್ ಸಿಂಹ ಮನವಿ]

ಇಬ್ಬರ ನಡುವೆ ಟ್ವೀಟ್ ಕದನದ ಸಾರಾಂಶ ನಿಮಗಾಗಿ ಇಲ್ಲಿದೆ.

ಪೇಪರ್ ಸಿಂಹ ಎಂದ ಪ್ರಿಯಾಂಕ್

"ಉಪಚುನಾವಣೆಯ ಫಲಿತಾಂಶ, ನಡೆಗಿಂತ ನುಡಿಯೇ ಮುಖ್ಯ ಎಂದುಕೊಂಡಿದ್ದ ಕೆಲವು 'ಪೇಪರ್ ಸಿಂಹ'ರಿಗೆ ನಮ್ರತೆಯ ಪಾಠ ಹೇಳಿದೆ" ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದರು.

ಪ್ರತಾಪ್ ಪ್ರತ್ಯುತ್ತರ

ಇದಕ್ಕೆ ಪ್ರತಿಯಾಗಿ, "ನಿಮ್ಮ ತಂದೆ ಬಿಟ್ಟುಕೊಟ್ಟ ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ಚುನಾವಣೆಗೆ ನಿಂತು ಸೋತಿದ್ದನ್ನು ನೀವೊಮ್ಮೆ ನೆನಪಿಸಿಕೊಳ್ಳಿ" ಎಂದು ಪ್ರತಾಪ್ ಸಿಂಹ ಪ್ರಿಯಅಂಕ್ ಖರ್ಗೆ ಅವರಿಗೆ ಟ್ವೀಟ್ ಮಾಡಿದ್ದಾರೆ.

ನಮ್ರತೆ ಕಲಿತಿದ್ದೇನೆ

ಪ್ರತಾಪ್ ಸಿಂಹ್ ಟ್ವೀಟ್ ಗೆ "ಸೋಲು ಮತ್ತು ರಾಜಕೀಯ ನನಗೆ ಹಲವನ್ನು ಕಲಿಸಿದೆ, ಅದರಲ್ಲಿ ನಮ್ರತೆಯೂ ಒಂದು" ಎಂದು ಪ್ರಿಯಾಂಕ್ ಖರ್ಗೆ ಉತ್ತರಿಸಿದ್ದಾರೆ.

ಉಪಚುನಾವಣೆಯ ಸೋಲೊಪ್ಪಿಕೊಂಡಿದ್ದೇವೆ

"ನಾನು ಉಪಚುನಾವಣೆಯಲ್ಲಿನ ನಮ್ಮ ಸೋಲನ್ನು ಸಂಫೂರ್ಣವಾಗಿ ಒಪ್ಪಿಕೊಂಡು, ಮುಖ್ಯಮಂತ್ರಿಯವನ್ನು ಅಭಿನಂದಿಸಿದ್ದೇನೆ. ಅದಕ್ಕಾಗಿ ಖುಷಿಪಡುವುದನ್ನು ಬಿಟ್ಟು ನೀವು ಮಾತನಾಡುತ್ತಿರುವುದೇನು?" ಎಂದು ಸಿಂಹ ಪ್ರಶ್ನಿಸಿದ್ದಾರೆ.

ಚರ್ಚೆಯಲ್ಲಿ ಅಭಿಮಾನಿಗಳೂ ಭಾಗಿ

ಇಷ್ಟು ಚರ್ಚೆಯ ನಂತರ ಇಬ್ಬರು ಮುಖಂಡರೂ ಸುಮ್ಮನಾಗಿದ್ದಾರೆ. ಆದರೆ ಇವರು ನಾಂದಿ ಹಾಡಿದ ಟ್ವಿಟ್ಟರ್ ವಾರ್ ಅನ್ನು ಅವರ ಅಭಿಮಾನಿಗಳೀಗ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ! "ಮುಂದಿನ ಬಾರಿ ಬೆಂಗಳೂರಿನಲ್ಲಿ ಚುನಾವಣೆಗೆ ನಿಂತು ಗೆದ್ದು ತೋರಿಸಿ" ಎಂದು ಪ್ರಿಯಾಂಕ್ ಖರ್ಗೆ ಅವರಿಗೊಬ್ಬರು ಸವಾಲು ಹಾಕಿದ್ದಾರೆ.

ಪ್ರತಾಪ್ ಗೂ ಛಾಟಿ

ನಿವ್ಯಾಕೆ ಸುಖಾಸುಮ್ಮನೆ ವಿವಾದ ಸೃಷ್ಟಿ ಮಾಡುತ್ತೀರಿ? ಗೀತಾ ಮಹದೇವಪ್ರಸಾದ್ ಅವರ ಬಗ್ಗೆ ನೀವು ನೀಡಿದ ಗೂಟದ ಕಾರು ಹೇಳಿಕೆಯಿಂದಾಗಿ ಬಿಜೆಪಿಗೆ ಭಳ ಇರಿಸುಮುರಿಸಾಗಿದೆ ಎಂಬುದನ್ನು ಮರೆಯಬೇಡಿ ಎಂದು ಗಿರೀಶ್ ಎನ್ನುವವರು ಪ್ರತಾಪ್ ಸಿಂಹ ಅವರಿಗೆ ಟಾಂಗ್ ನೀಡಿದ್ದಾರೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Twitter war between member of parliament Pratap Simha and state IT BT minister Priyank Kharge has started a interesting discussion in social media.
Please Wait while comments are loading...