"ಯಡಿಯೂರಪ್ಪ ರಾಜಕೀಯ ಕಥೆಗೆ ಅಡ್ವಾಣಿಯೇ ವಿಲನ್"

Posted By:
Subscribe to Oneindia Kannada

ಬೆಂಗಳೂರು, ಜ.06: ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಿಎಸ್ ಯಡಿಯೂರಪ್ಪ ಅವರ ದಾಖಲಾಗಿದ್ದ 15 ಅಕ್ರಮ ಡಿನೋಟಿಫಿಕೇಷನ್ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿರುವುದನ್ನು ಅವರ ಅಭಿಮಾನಿಗಳು ಸ್ವಾಗತಿಸಿದ್ದಾರೆ.

ಸಾಮಾಜಿಕ ಜಾಲ ತಾಣಗಳಲ್ಲಿ ಬಿಎಸ್ ವೈ ಸದ್ಯಕ್ಕೆ ಟ್ರೆಂಡಿಂಗ್ ನಲ್ಲಿದ್ದಾರೆ. ಯಡಿಯೂರಪ್ಪ ಅವರ ರಾಜಕೀಯ ಕಥೆಯಲ್ಲಿ ಎಲ್ ಕೆ ಅಡ್ವಾಣಿಯವರೇ ವಿಲನ್ ಎಂದು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ಸ್ ಹರಿದಾಡುತ್ತಿವೆ.

ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ ಅವರು ಮಹಾ ಲೆಕ್ಕಪರಿಶೋಧಕರ (ಸಿಎಜಿ) ವರದಿಯ ಅನ್ವಯ ಯಡಿಯೂರಪ್ಪ ಅವಾರ್ ವಿರುದ್ಧ ದೂರು ದಾಖಲಿಸಿದ್ದರು. 15 ಪ್ರಕರಣಗಳಲ್ಲಿ ಎಫ್ ಐಆರ್ ಕೂಡಾ ಹಾಕಲಾಗಿತ್ತು. [ಬಿಎಸ್ ವೈ ವಿರುದ್ಧದ 15 ಎಫ್ ಐಆರ್ ರದ್ದುಗೊಳಿಸಿದ ಹೈಕೋರ್ಟ್]

ಅರ್ಜಿ ರದ್ದುಗೊಳಿಸುವಂತೆ ಯಡಿಯೂರಪ್ಪ ಅವರು ಮಾಡಿದ್ದ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಇನ್ನೆರಡು ಪ್ರಕರಣಗಳಲ್ಲಿ ಕ್ಲೀನ್ ಚಿಟ್ ಸಿಕ್ಕರೆ ಯಡಿಯೂರಪ್ಪ ಅವರು ತಮ್ಮ ಬಿಳಿ ಉಡುಪಿನಂತೆ 'ಸ್ವಚ್ಛ ರಾಜಕಾರಣಿ' ಎಂಬ ಟ್ಯಾಗ್ ಧರಿಸಿ ಧೈರ್ಯದಿಂದ ಎಲ್ಲೆಡೆ ಸಂಚರಿಸಬಹುದು.[ಬಿಎಸ್ ವೈ ವಿರುದ್ಧದ ಎಫ್ ಐಆರ್ ರದ್ದು : ಯಾರು, ಏನು ಹೇಳಿದರು?]

ಯಡಿಯೂರಪ್ಪ ಇಂದಿಗೂ ಕರ್ನಾಟಕದ ಅತ್ಯಂತ ಜನಪ್ರಿಯ ರಾಜಕಾರಣಿ, ಸಂಸದರಾದರೂ ಕರ್ನಾಟಕ ರಾಜಕೀಯದಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಾ ಅಲ್ಲಿಗೂ ಇಲ್ಲಿಗೂ ಎಲ್ಲಿಗೂ ಸಲ್ಲದಂಥ ಪರಿಸ್ಥಿತಿಯಲ್ಲಿರುವ ಬಿಎಸ್ ವೈ ಅವರಿಗೆ ಕೋರ್ಟ್ ಆದೇಶ ನೆಮ್ಮದಿ ತಂದಿದೆ. ಇದರಿಂದ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ತನ್ನ ಅಧಿಪತ್ಯ ಸ್ಥಾಪಿಸಲಿದೆ ಎಂಬ ನಂಬಿಕೆ ಬಂದಿದೆ. ಅಭಿಮಾನಿಗಳು, ವಿಶ್ಲೇಷಕರು, ಸಾರ್ವಜನಿಕರು ಬಿಎಸ್ ವೈ ಬಗ್ಗೆ ಏನು ಟ್ವೀಟ್ ಮಾಡಿದ್ದಾರೆ ನೋಡಿ....

ಅತ್ಯಂತ ಯಶಸ್ವಿ ಮುಖ್ಯಮಂತ್ರಿ

ಅತ್ಯಂತ ಯಶಸ್ವಿ ಮುಖ್ಯಮಂತ್ರಿ

ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಹೊರತುಪಡಿಸಿದರೆ ಯಡಿಯೂರಪ್ಪ ಅವರೇ ದೇಶದ ಅತ್ಯಂತ ಯಶಸ್ವಿ ಮುಖ್ಯಮಂತ್ರಿ ಎಂಬ ವರದಿಗಳಿವೆ. ಆದರೆ, ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಸಂಸದ ಅನಂತಕುಮಾರ್ ಅವರ ರಾಜಕೀಯ ತಂತ್ರಗಾರಿಕೆಗೆ ಯಡಿಯೂರಪ್ಪ ಅವರು ಬಲಿಪಶುವಾದರು ಎಂಬುವುದು ಬಿಎಸ್ ವೈ ಅಭಿಮಾನಿಗಳು ಹಾಗೂ ಟ್ವಿಟ್ಟರ್ ಲೋಕದ ಹಲವರ ಒಮ್ಮತದ ಅಭಿಪ್ರಾಯ.

ಇನ್ನೊಂದು ನ್ಯೂಸ್ ಹೀಗಿದೆ ಗಮನಿಸಿ

ಜಯಲಲಿತಾ, ಯಡಿಯೂರಪ್ಪ ಭ್ರಷ್ಟರಲ್ಲ, ಸಲ್ಮಾನ್ ಖಾನ್ ಕಾರು ಯಾರು ಓಡಿಸಿಲ್ಲ. ಯಾರಿಂದಲೂ ತಪ್ಪಾಗಿಲ್ಲ.

ಪ್ರಧಾನಿ ಮೋದಿಗೆ ಆತ್ಮೀಯ ಸಲಹೆ

ಪ್ರಧಾನಿ ಮೋದಿಗೆ ಆತ್ಮೀಯ ಸಲಹೆ ಹೀಗಿದೆ. ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಬೇಕಾದರೆ, ಅನಂತ್ ಕುಮಾರ್ ಅವರು ರಾಜ್ಯ ರಾಜಕೀಯದಲ್ಲಿ ತಲೆ ಹಾಕುವುದು, ಮೂಗು ತೂರಿಸುವುದನ್ನು ಬಿಡಲಿ.

ಯಡಿಯೂರಪ್ಪ ಜಯ ಸಿಕ್ಕಿದೆಯೆಂದರೆ

ಯಡಿಯೂರಪ್ಪ ಜಯ ಸಿಕ್ಕಿದೆಯೆಂದರೆ ಅದು ಎಲ್ ಕೆ ಅಡ್ವಾಣಿ, ಅನಂತ್ ಕುಮಾರ್ ಗೆ ಸೋಲು. ಇಬ್ಬರು ಮಾರ್ಗ ದರ್ಶಕ ಮಂಡಲಿಯಿಂದ ಕೆಳಗಿಳಿಯಲಿ.

ಯಡಿಯೂರಪ್ಪ ರಾಜಕೀಯ ಜೀವನದಲ್ಲಿ ಯಾರು ವಿಲನ್

ಯಡಿಯೂರಪ್ಪ ರಾಜಕೀಯ ಜೀವನದಲ್ಲಿ ಯಾರು ವಿಲನ್ ಎಂದರೆ ಅಡ್ವಾಣಿ ಎನ್ನಬಹುದು. ಅನಂತ್ ಕುಮಾರ್ ಕೂಡಾ ಸೇರಿಸಬಹುದು.

ಕೇಂದ್ರ ಸಂಪುಟಕ್ಕೆ ಯಡಿಯೂರಪ್ಪ ಸೇರಲಿ

ಕೇಂದ್ರ ಸಂಪುಟಕ್ಕೆ ಯಡಿಯೂರಪ್ಪ ಸೇರಲಿ, ಅವರಿಗೆ ಉನ್ನತ ಹುದ್ದೆ ನೀಡಿ. ಉತ್ತಮ ರಾಜಕೀಯ ಅನುಭವ ಹೊಂದಿದ್ದಾರೆ.

ರಾಜಕೀಯ ದ್ವೇಷಕ್ಕೆ ಬಲಿಪಶುವಾದ ಬಿಎಸ್ ವೈ

ಬಿಜೆಪಿ ಪಕ್ಷದವರ ರಾಜಕೀಯ ದ್ವೇಷಕ್ಕೆ ಬಲಿಪಶುವಾದ ಬಿಎಸ್ ವೈ ಅವರ ಮೇಲೆ ಕಾಂಗ್ರೆಸ್ ಕಿಡಿಕಾರಲು ಸಾಧ್ಯವಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BS Yeddyurappa: Victim of political vengeance. BSY did wonderful development in the State. Unlike the current Congress Government. If Modi has to win in Karnataka then he must stop Ananthkumar to enter Karnataka politics says Twitterati.
Please Wait while comments are loading...