ಶಶಿಕಲಾ ಬಗ್ಗೆ ಟ್ವಿಟರ್ ನಲ್ಲಿ ಹರಿದಾಡಿದ ಜೋಕುಗಳು

Posted By:
Subscribe to Oneindia Kannada
ತಮಿಳುನಾಡಿನ ರಾಜಕೀಯ ಪಕ್ಷವಾದ ಎಐಡಿಎಂಕೆ ನಾಯಕಿ ಶಶಿಕಲಾ ಅವರು ಪರಪ್ಪನ ಅಗ್ರಹಾರದ ಜೈಲಿನಲ್ಲಿ ಮೋಂಬತ್ತಿ ಮಾಡುತ್ತಾರೆಂಬ ಸುದ್ದಿ ಟ್ವಿಟರ್ ನಲ್ಲಿ ಸಾಕಷ್ಟು ಜೋಕುಗಳ ಸುರಿಮಳೆಗೆ ಕಾರಣವಾಗಿತ್ತು.

ಆನಂತರ, ಅವರು ಮೋಂಬತ್ತಿ ಮಾಡುವುದಿಲ್ಲ ಎಂಬ ಬಗ್ಗೆ ಜೈಲಿನ ಆಡಳಿತ ಸ್ಪಷ್ಟನೆ ನೀಡಿತದಾರೂ, ಮೋಂಬತ್ತಿ ಜೋಕುಗಳು ಮಾತ್ರ ಕರಗಲೇ ಇಲ್ಲ. ಅಂಥ ಕೆಲವಾರು ಜೋಕುಗಳ ಬಗ್ಗೆ ಮಾಹಿತಿ ಇಲ್ಲಿದೆ.

Twitter flourish joke on Sasikala

ಇದರಲ್ಲೊಂದು ಟ್ವೀಟ್, ''ಕೊನೆಗೂ ಶಶಿಕಲಾ ಸಿಎಂ ಆದರು. ಸಿಎಂ ಅಂದ್ರೆ ಕ್ಯಾಂಡಲ್ ಮೇಕರ್ '' ಗೇಲಿ ಮಾಡಿತು. ಮತ್ತೊಂದು ಟ್ವೀಟ್ ನಲ್ಲಿ ಶಶಿಕಲಾ ಅವರು ಕೊನೆಗೂ ಆಸನ ಗೆದ್ದರು. ಆದರದು ಮುಖ್ಯಮಂತ್ರಿ ಆಸನವಲ್ಲ, ಸೆಂಟ್ರಲ್ ಜೈಲ್ ಆಸನ'' ಎಂದು ಹೇಳಲಾಯಿತು.

ಇನ್ನೊಂದು ಟ್ವೀಟ್ ನಲ್ಲಿ ಯಾವುದೋ ಸಮಾರಂಭದಲ್ಲಿ ಜಯಲಲಿತಾ ಅವರು ಶಶಿಕಲಾ ಕೈಗೆ ಗುಲಾಬಿ ಹೂವನ್ನು ನೀಡುತ್ತಿರುವ ಫೋಟೋ ಹಾಕಿ, ''ಜಯಲಲಿತಾ ಅವರು, ತಮ್ಮ ಅಕ್ರಮ ಆಸ್ತಿಯನ್ನು ಶಶಿಕಲಾಗೆ ಹೀಗೆ ಸಾಂಕೇತಿಕವಾಗಿ ಕೊಟ್ಟು, ಶಿಕ್ಷೆಯನ್ನೂ ಕೊಟ್ಟು ಹೋಗಿದ್ದಾರೆ'' ಎಂದು ಹೇಳಿತು.

ಇವು ಕೇವಲ ಝಲಕ್ ಅಷ್ಟೇ. ಅನೇಕ ಮಾದರಿಯ ಜೋಕುಗಳು ಟ್ವಿಟರ್ ನಲ್ಲಿ ಹರಿದಾಡಿ, ತಮಾಷೆ ಮಾಡಿದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The news about AIADMK leader Sasikala as she prepare candles in Parappana agrahara jail in Bengaluru, Twitter took the opportunity to flourish the jokes on her.
Please Wait while comments are loading...