ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳಯಾನಕ್ಕೆ ಅಭಿನಂದನೆಗಳ ಮಹಾಪೂರ

By Mahesh
|
Google Oneindia Kannada News

ನವದೆಹಲಿ, ನ.5: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಾಧನೆಗೆ ಇಡೀ ವಿಶ್ವವೇ ಅಚ್ಚರಿಯಿಂದ ಭಾರತದತ್ತ ನೋಡಿದೆ. ಅತ್ಯಂತ ಕಡಿಮೆ ವೆಚ್ಚದ ಮಹತ್ವಾಕಾಂಕ್ಷಿ ಯೋಜನೆ ಮೊದಲ ಹಂತ ಯಶಸ್ವಿಯಾಗುತ್ತಿದ್ದಂತೆ ವಿಶ್ವದೆಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.

ರಷ್ಯಾ, ಅಮೆರಿಕ, ಬ್ರಿಟನ್ ಸಾಲಿಗೆ ಸೇರ್ಪಡೆಯಾಗಿರುವ ಭಾರತ ಮಂಗಳಯಾನದ ಕನಸು 1969ರಿಂದ ಕಾಣುತ್ತಲೇ ಇತ್ತು. ಆದರೆ, 2013ರಲ್ಲಿ 450 ಕೋಟಿ ರು ವೆಚ್ಚದಲ್ಲಿ ಈ ಯೋಜನೆ ಸಫಲಗೊಂಡಿದೆ. 2014ರ ಸೆಪ್ಟೆಂಬರ್ ವೇಳೆಗೆ ಮಂಗಳನ ಅಂಗಳಕ್ಕೆ ಉಪಗ್ರಹ ಕಾಲಿಡುವ ನಿರೀಕ್ಷೆಯಿದೆ.

ಸುಮಾರು 1337ಕೆ.ಜಿ ತೂಗುವ ಮಂಗಳನ ಆರ್ಬಿಟರ್ ಉಪಗ್ರಹದಲ್ಲಿ 852 ಕೆಜಿ ತೂಕದ ಇಂಧನ, 15 ಕೆಜಿ ತೂಕದ ಉಪಕರಣಗಳಿವೆ. ಈ ಪೈಕಿ ಲೀಮ್ಯಾನ್ ಆಲ್ಫಾ ಫೋಟೋ ಮೀಟರ್(LAP), ಮೀಥೇನ್ ಸೆನ್ಸಾರ್ ಫಾರ್ ಮಾರ್ಸ್ (MSM), ಮಾರ್ಸ್ ಎನ್ಸೋಸ್ಪೆರಿಕ್ ನ್ಯಾಚುರಲ್ ಕಂಪೋಸಿಷನ್ ಅನಲೈಸರ್ (MENCA), ಮ್ಯಾಕ್ಸ್ ಕಲರ್ ಕೆಮರಾ (MCAM) ಮುಖ್ಯವಾದ ಉಪಕರಣಗಳಾಗಿವೆ. ಪಿಎಸ್ಎಲ್ ವಿ ಉಡಾವಣಾ ವಾಹಕಗಳ ಸರಣಿಯ ಪಿಎಸ್ ಎಲ್ ವಿಸಿ-25 ಯಾವುದೇ ತೊಂದರೆ ಇಲ್ಲದೆ ಉಪಗ್ರಹವನ್ನು ಸೂಕ್ತ ಪಥಕ್ಕೆ ಕೊಂಡೊಯ್ದಿದೆ. ಇಸ್ರೋ ತನ್ನ ಫೇಸ್ ಬುಕ್ ಪುಟದಲ್ಲಿ ಕಾಲ ಕಾಲಕ್ಕೆ ಅಪ್ಡೇಟ್ ನೀಡುತ್ತಿದೆ.

ಅತ್ತ ಶ್ರೀಹರಿಕೋಟದಲ್ಲಿ ರಾಕೆಟ್ ಉಡಾವಣೆಗೊಳ್ಳುತ್ತಿದ್ದಂತೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡಿ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು. ವಿವಿಧ ದೇಶಗಳ ಮುಖ್ಯಸ್ಥರು ಇದು ವಿಜ್ಞಾನ ಕ್ಷೇತ್ರದ ಮೈಲಿಗಲ್ಲು ಎಂದು ಬಣ್ಣಿಸಿ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹರಿದು ಬಂದ ಅಭಿನಂದನೆಗಳ ಸಂಗ್ರಹ ಇಲ್ಲಿದೆ ಓದಿ...

ಪ್ರಧಾನಿ ಸಚಿವಾಲಯದಿಂದ

ಮಂಗಳಯಾನ ಯಶಸ್ಸಿಗೆ ಇಸ್ರೋ ಅಧ್ಯಕ್ಷ ರಾಧಾಕೃಷ್ಣನ್ ಅವರಿಗೆ ಪ್ರಧಾನಿ ಕರೆ ಮಾಡಿ ಅಭಿನಂದಿಸಿದ್ದಾರೆ

ಮೋದಿ ಟ್ವೀಟ್

ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ

ಪೂನಂ ಪಾಂಡೆ ಟ್ವೀಟ್

ಬಾಲಿವುಡ್ ನಟಿ ಪೂನಂ ಪಾಂಡೆ ಟ್ವೀಟ್ ಮಾಡಿ ಇದು ದೀಪಾವಳಿ ಉಡುಗೊರೆ ಎಂದಿದ್ದಾರೆ

ನಂದನ್ ನಿಲೇಕಣಿ

ಆಧಾರ್ ಚೇರ್ಮನ್, ಇನ್ಫೋಸಿಸ್ ಮಾಜಿ ಉದ್ಯೋಗಿ ನಂದನ್ ನಿಲೇಕಣಿ ಅಭಿನಂದನೆಗಳು

ಹೀಗೊಂದು ಟ್ವೀಟ್

DRDO, HAL, ADA, CSIR, IICT ಗಮನಕ್ಕೆ

ಮಂಗಳಯಾನಕ್ಕೆ ಅಭಿನಂದನೆ

ಮಂಗಳಯಾನಕ್ಕೆ ಅಭಿನಂದನೆಗಳು ಆದರೆ....ಬಡವರಿಗೆ ಆಹಾರ ನೀಡಿ

ಕಡಿಮೆ ವೆಚ್ಚದ ಯೋಜನೆ

ಈ ಯೋಜನೆ ವೆಚ್ಚ ಆಟೋರಿಕ್ಷಾ ದರಕ್ಕಿಂತ ಕಡಿಮೆ!

ಯೋಜನೆ ಬಗ್ಗೆ ನಾಯರ್

ಮಂಗಳಯಾನ ಯೋಜನೆ ದಂಡ ಎಂದ ಇಸ್ರೋ ಮಾಜಿ ಅಧ್ಯಕ್ಷ ನಾಯರ್.. ವಿವರ ಇಲ್ಲಿ ಓದಿ

ಹೀಗೊಂದು ತಮಾಷೆ ಟ್ವೀಟ್

ಮಂಗಳ ಯಾನ ಸುಲಭ ಆದರೆ, ಬೆಂಗಳೂರಿನಲ್ಲಿ ಯಾನ ಕಷ್ಟವಂತೆ

ಕಿರಣ್ ಬೇಡಿ ಟ್ವೀಟ್

ಸಂತಸದಿಂದ ಕಣ್ತುಂಬಿ ಬಂದಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಕಿರಣ್ ಬೇಡಿ

ಅಮುಲ್ ಕಾರ್ಟೂನ್

ಮಂಗಳಯಾನಕ್ಕೆ ಅಮುಲ್ ಸಂಸ್ಥೆ ಹೊರ ತಂದ ಕಾರ್ಟೂನ್

ಪತ್ರಕರ್ತೆ ಸುಹಾಸಿನಿ ಟ್ವೀಟ್

ಪತ್ರಕರ್ತೆ ಸುಹಾಸಿನಿ ಹೈದರ್ ಮಂಗಳಯಾನದ ಪೇ ಲೋಡ್ ಬಗ್ಗೆ ಟ್ವೀಟ್ ಮಾಡಿದ್ದಾರೆ

English summary
Tweeples congratulate ISRO Mars Orbiter Mission Success: Best wishes to our scientists for the Mars Mission. It is a proud moment for the nation & we all pray for the Mission's success tweeted Gujarat CM Narendra Modi. Here is collection of wishes from across the globe
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X