ಬೆಂಗಳೂರು : ಇಬ್ಬರು ಪಾದಚಾರಿಗಳನ್ನು ಬಲಿ ಪಡೆದ ಲಾರಿ

Posted By: Gururaj
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 23 : ಬೆಂಗಳೂರು ನಗರದಲ್ಲಿ ಮುಂಜಾನೆಯೇ ಭೀಕರ ಅಪಘಾತ ನಡೆದಿದ್ದು, ಇಬ್ಬರು ಪಾದಚಾರಿಗಳು ಮೃತಪಟ್ಟಿದ್ದಾರೆ. ಬಾಣಸವಾಡಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಬಾಬುಸಾಬ್ ಪಾಳ್ಯದಲ್ಲಿ ಲಾರಿ ಡಿಕ್ಕಿ ಹೊಡೆದು ತಾಯಿ, ಮಗಳು ಮೃತಪಟ್ಟಿದ್ದಾರೆ. ಸೋಮವಾರ ಮುಂಜಾನೆ 6.30ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತಪಟ್ಟವರನ್ನು ವೆಲ್ಲಾಚಿ (75), ವಂಸತಾ (42) ಎಂದು ಗುರುತಿಸಲಾಗಿದೆ.

Truck kills two pedestrians in Babusahib Palya

ಹಬ್ಬಕ್ಕೆ ಊರಿಗೆ ಹೋಗಿದ್ದ ಇಬ್ಬರು ಇಂದು ಮುಂಜಾನೆ ಬೆಂಗಳೂರಿಗೆ ಬಂದಿದ್ದರು. ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ.

ಲಾರಿ ಮಹಾರಾಷ್ಟ್ರ ಮೂಲದ್ದು ಎಂದು ತಿಳಿದುಬಂದಿದೆ. ಬಾಣಸವಾಡಿ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಅಂಬೇಡ್ಕರ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two pedestrians have been killed as a truck ran them over at Babusahib Palya, Bengaluru on October 23, 2017 early morning. Banasawadi police visited the spot.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ