ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೂ ಬರಲಿದೆ ಟ್ರಿಣ್ ಟ್ರಿಣ್ ಬೈಸಿಕಲ್ ಯೋಜನೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 09 : ಮೈಸೂರಿನಲ್ಲಿ ಯಶಸ್ವಿಯಾಗಿರುವ ಟ್ರಿಣ್ ಟ್ರಿಣ್ ಸೈಕಲ್ ಯೋಜನೆ ಬೆಂಗಳೂರಿನಲ್ಲಿಯೂ ಜಾರಿಗೆ ಬರಲಿದೆ. ನಗರದ ಆರು ಪ್ರಮುಖ ಸ್ಥಳಗಳಲ್ಲಿ 6000 ಸೈಕಲ್‌ಗಳು ಬಾಡಿಗೆಗೆ ಸಿಗಲಿವೆ.

 ಸೈಕಲ್ ಏರಿ ಕಚೇರಿಗೆ ಬಂದ ಕೆಎಎಸ್ ಅಧಿಕಾರಿ ಕೆ.ಮಥಾಯ್! ಸೈಕಲ್ ಏರಿ ಕಚೇರಿಗೆ ಬಂದ ಕೆಎಎಸ್ ಅಧಿಕಾರಿ ಕೆ.ಮಥಾಯ್!

ಕಳೆದ ವಾರದ ನಡೆದ ಸಚಿವ ಸಂಪುಟ ಸಭೆಯಲ್ಲಿ ಟ್ರಿಣ್ ಟ್ರಿಣ್ ಯೋಜನೆ ಜಾರಿಗೆ ಒಪ್ಪಿಗೆ ಸಿಕ್ಕಿದೆ. ಎಂ.ಜಿ.ರಸ್ತೆ, ಇಂದಿರಾ ನಗರ ಸೇರಿದಂತೆ 6 ಪ್ರಮುಖ ಸ್ಥಳಗಳಲ್ಲಿ ಯೋಜನೆಯಡಿ ಸೈಕಲ್ ಸ್ಟಾಂಡ್ ನಿರ್ಮಿಸಿ, ಸೈಕಲ್‌ಗಳನ್ನು ಬಾಡಿಗೆಗೆ ಇಡಲಾಗುತ್ತದೆ.

Trin Trin bicycle sharing scheme in Bengaluru soon

ಯಾವ ಬಡಾವಣೆ? : ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಕೋರಮಂಗಲ, ಬಾಣಸವಾಡಿ, ಎಚ್ಆರ್‌ಬಿಆರ್ ಲೇಔಟ್, ಎಚ್‌ಎಸ್‌ಆರ್ ಲೇಔಟ್, ಎಂ.ಜಿ.ರಸ್ತೆ, ಇಂದಿರಾ ನಗರದಲ್ಲಿ ಟ್ರಿಣ್ ಟ್ರಿಣ್ ಯೋಜನೆ ಜಾರಿಗೆ ಬರಲಿದ್ದು, ಸೈಕಲ್ ಬಾಡಿಗೆಗೆ ಸಿಗಲಿವೆ.

ಮೈಸೂರಿನಲ್ಲಿ ಟ್ರಿಣ್-ಟ್ರಿಣ್ ಸೈಕಲ್ ಯೋಜನೆಗೆ ಸಿದ್ದರಾಮಯ್ಯ ಚಾಲನೆಮೈಸೂರಿನಲ್ಲಿ ಟ್ರಿಣ್-ಟ್ರಿಣ್ ಸೈಕಲ್ ಯೋಜನೆಗೆ ಸಿದ್ದರಾಮಯ್ಯ ಚಾಲನೆ

'ಟ್ರಿಣ್ ಟ್ರಿಣ್ ಯೋಜನೆ ಜಾರಿಗೆ ತರಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. 80.18 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತದೆ. 6 ಸಾವಿರ ಸೈಕಲ್‌ಗಳನ್ನು ಜನರಿಗೆ ಒದಗಿಸುವ ಗುರಿ ಇದೆ' ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ಯೋಜನೆ ಯಶಸ್ವಿ : ಮೊದಲು ಮೈಸೂರು ನಗರದಲ್ಲಿ ಪ್ರಾಯೋಗಿಕವಾಗಿ ಟ್ರಿಣ್ ಟ್ರಿಣ್ ಯೋಜನೆ ಜಾರಿಗೆ ತರಲಾಗಿತ್ತು. ಜೂನ್‌ನಲ್ಲಿ 450 ಸೈಕಲ್‌ಗಳ ಮೂಲಕ ನಗರದಲ್ಲಿ ಯೋಜನೆ ಆರಂಭವಾಗಿತ್ತು.

ಮೈಸೂರು ನಗರಕ್ಕೆ ಪ್ರವಾಸಿಗರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಯೋಜನೆ ಯಶಸ್ವಿಯಾಗಿದೆ. ಆದ್ದರಿಂದ, ಬೆಂಗಳೂರು ನಗರದಲ್ಲಿಯೂ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ.

ಬೆಂಗಳೂರು ನಗರದ ಸಂಚಾರ ದಟ್ಟಣೆಯಲ್ಲಿ ಸಿಲುಕುವ ಜನರು, ಸೈಕಲ್ ಮೂಲಕ ಸಂಚಾರ ನಡೆಸಬಹುದಾಗಿದೆ. ಈ ಯೋಜನೆ ಬೆಂಗಳೂರಿನಲ್ಲಿಯೂ ಯಶಸ್ವಿಯಾಗುತ್ತದೆಯೇ? ಕಾದು ನೋಡಬೇಕು.

English summary
Karnataka government will extend public bicycle sharing scheme called trin trin to Bengaluru city soon. 6000 cycles will be made available at eight different locations in the city. Trin Trin project first implemented at Mysuru city on June 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X