ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೇಸ್ಬುಕ್ ನಲ್ಲಿ ಟ್ರಾವೆಲ್ ಸ್ಟೇಟಸ್ ಹಾಕುವ ಮುನ್ನ ಹುಷಾರಾಗಿರಿ!

|
Google Oneindia Kannada News

ಬೆಂಗಳೂರು, ಜೂನ್ 12: ಈಗಂತೂ ತಿಂದಿದ್ದು, ಉಂಡಿದ್ದು, ಮಲಗಿದ್ದು ಎಲ್ಲವನ್ನೂ ಫೇಸ್ಬುಕ್ ನಲ್ಲಿ ಸ್ಟೇಟಸ್ ಹಾಕುವುದು ಒಂದು ಫ್ಯಾಶನ್. ಆದರೆ ಈ ಫ್ಯಾಶನ್ ಕಂಟಕ ತಂದಿಡಬಹುದಾದ ಸಾಧ್ಯತೆಯನ್ನು ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಸಾಬೀತುಪಡಿಸಿದೆ.

ಬೆಂಗಳೂರಿನ ಆರ್ ಟಿ ನಗರದಲ್ಲಿ ವಾಸವಿರುವ ಪ್ರೇಮಲತಾ ಎಂಬ ಮಹಿಳೆಯೊಬ್ಬರು ತಾವು ತಮಿಳುನಾಡಿಗೆ ಪ್ರವಾಸ ಹೋಗುವುದಾಗಿ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ್ದರು. ಇದರೊಂದಿಗೆ ಎಷ್ಟು ದಿನ, ಎಲ್ಲೆಲ್ಲಿ ಎಂಬಿತ್ಯಾದಿ ಸಂಪೂರ್ಣ ಮಾಹಿತಿಯನ್ನು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಮೂಲಕ ಆಕೆ ಮನೆಯಲ್ಲಿಲ್ಲ ಎಂಬುದನ್ನು ಅರಿತ ಕಳ್ಳರು ಆಕೆಯ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ.

Travel status in Facebook leads to robbery of house in Bengaluru

ಸಾಲುಮರದ ತಿಮ್ಮಕ್ಕ ನಿಧನ ಸುದ್ದಿ ಹಬ್ಬಿಸಿದ್ದು ನಾನಲ್ಲ: ಪ್ರದೀಪ್ ಗೌಡಸಾಲುಮರದ ತಿಮ್ಮಕ್ಕ ನಿಧನ ಸುದ್ದಿ ಹಬ್ಬಿಸಿದ್ದು ನಾನಲ್ಲ: ಪ್ರದೀಪ್ ಗೌಡ

ಮನೆಯಲ್ಲಿದ್ದ ಒಟ್ಟು 5ಲಕ್ಷ ರೂ. ಮೌಲ್ಯದ ಚಿನ್ನಾಭರಣ, 57 ಸಾವಿರ ರೂ.ನಗರದು ಹಣವನ್ನು ಕಳ್ಳತನ ಮಾಡಲಾಗಿದೆ. ಈ ಕುರಿತು ನಿನ್ನೆ(ಜೂನ್ 11) ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರೇಮಲತಾ ದೂರು ನೀಡಿದ್ದಾರೆ. 'ನೀವು ಮನೆಯಲ್ಲಿ ಇರುವುದಿಲ್ಲ ಎಂಬ ಮಾಹಿತಿಯನ್ನು ಯಾರ್ಯಾರಿಗೆ ನೀಡಿದ್ದಿರಿ' ಎಂದು ಪೊಲೀಸರು ವಿಚಾರಿಸಿದಾಗ ಫೇಸ್ ಬುಕ್ ನಲ್ಲಿ ಸ್ಟೇಟಸ್ ಅಪ್ಲೋಡ್ ಮಾಡಿದ್ದನ್ನು ಪ್ರೇಮಲತಾ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿಗಳನ್ನು ಶೇರ್ ಮಾಡುವ ಮೊದಲು ಕೊಂಚ ಎಚ್ಚರಿಕೆ ವಹಿಸಬೇಕಾದ ಅಗತ್ಯವನ್ನು ಈ ಘಟನೆ ಸಾರಿಹೇಳಿದೆ!

English summary
In a cinematic incident a woman's house was robbed by some thieves after seeing her travel status in Facebook. This incident warns facebook users to not to post unnecessary and personal information on FB. The incident took place in RT Nagar in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X