ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾರಿಗೆ ಮುಷ್ಕರಕ್ಕೆ ನೋ ರೆಸ್ಪಾನ್ಸ್‌: ಬಸ್‌, ಮೆಟ್ರೋ ಓಡ್ತಿವೆ ಬೆಂಗಳೂರಲ್ಲಿ

By Nayana
|
Google Oneindia Kannada News

Recommended Video

ಸಾರಿಗೆ ಮುಷ್ಕರಕ್ಕೆ ಬೆಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ | Oneindia kannada

ಬೆಂಗಳೂರು, ಆಗಸ್ಟ್ 7: ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆ ವಿರುದ್ಧ ರಾಷ್ಟ್ರವ್ಯಾಪಿ ಮುಷ್ಕರ ಮಂಗಳವಾರದಿಂದ ಆರಂಭವಾಗಿದೆ. ಆದರೆ ಈ ಬಂದ್‌ ಬಿಸಿ ಬೆಂಗಳೂರಿಗೆ ತಟ್ಟಿಲ್ಲ.

ನಗರದಲ್ಲಿ ಎಂದಿನಂತೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ನಮ್ಮ ಮೆಟ್ರೋ ರೈಲು ಸಂಚರಿಸುತ್ತಿದೆ. ಅಪ್ಲಿಕೇಷನ್‌ ಆಧಾರಿತ ಟ್ಯಾಕ್ಸಿ ಸೇವೆಯೂ ಲಭ್ಯವಿದೆ. ಸಾಕಷ್ಟು ಕಡೆಗಳಲ್ಲಿ ಆಟೋ ಮಾಲಿಕರು ಮುಷ್ಕರಕ್ಕೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಆಟೋ ಸಂಚಾರದಲ್ಲಿ ಕೊಂಚ ವ್ಯತ್ಯಯ ಉಂಟಾಗಲಿದೆ.

Transport strike; Normal situation in Bengaluru

ಕುತೂಹಲ ಕೆರಳಿಸಿದ ಸಾರಿಗೆ ಮುಷ್ಕರ: ಹಲವು ಸಂಘಟನೆಗಳ ಬೆಂಬಲವಿಲ್ಕುತೂಹಲ ಕೆರಳಿಸಿದ ಸಾರಿಗೆ ಮುಷ್ಕರ: ಹಲವು ಸಂಘಟನೆಗಳ ಬೆಂಬಲವಿಲ್

ಪ್ರಮುಖ ಸಾರಿಗೆ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿಲ್ಲ. ಬೆಳಗ್ಗೆ 10 ಗಂಟೆಗೆ ಟೌನ್‌ಹಾಲ್‌ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.ಸೋಮವಾರವೇ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನಿಗಮಗಳು ಬಂದ್‌ಗೆ ಬೆಂಬಲ ನೀಡದಂತೆ ತನ್ನ ನೌಕರರಿಗೆ ಮನವಿ ಮಾಡಿತ್ತು.

ಆದರೆ ಓಲಾ ಇನ್ನಿತರೆ ಟ್ಯಾಕ್ಸಿ ಸೇವೆಗಳು ಇರುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ಇದೀಗ ದೊರೆತ ಮಾಹಿತಿ ಪ್ರಕಾರ ಯಾವುದೇ ಕ್ಯಾಬ್‌ ಮಾಲೀಕರು ಬೆಂಬಲ ಸೂಚಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಲಾರಿ ಮಾಲೀಕರು ಕೂಡ ಇದಕ್ಕೆ ಬೆಂಬಲ ಸೂಚಿಸುತ್ತಿಲ್ಲ, ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಸಂಚಾರ ಆರಂಭಿಸಿವೆ.ಉತ್ತರ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಬರಬೇಕಾದ ಬಸ್‌ಗಳು ಕೂಡ ಬೆಂಗಳೂರಿಗೆ ಬಂದಿವೆ.

ರಾಜ್ಯ ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯವ್ಯ ವಿಭಾಗ ಸೇರಿದಂತೆ ಸಾರಿಗೆ ಸಂಘಟನೆಗಳು ಮುಷ್ಕರ ನಡೆಸಲು ಮುಂದಾಗಿತ್ತು ಆದರೆ ಇದೀಗ ದೊರೆತ ಮಾಹಿತಿ ಪ್ರಕಾರ ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ಕೆಎಸ್‌ಆರ್‌ಟಿಸಿ ನಿಗಮ ತನ್ನ ನೌಕರರಿಗೆ ತಿಳಿಸಿದೆ.

English summary
Despite strike called by all India transport employees federation opposing new motor vehicle act, there is poor response in Bangalore as KSRTC, BMTC buses and metro rail service not been hit on Tuesday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X