ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈಷ್ಣೋದೇವಿ ದರ್ಶನಕ್ಕೆ ಹೋಗಲು ಬೆಂಗಳೂರಿನಿಂದ ರೈಲು

|
Google Oneindia Kannada News

ಬೆಂಗಳೂರು, ಜ. 27 : ವೈಷ್ಣೋದೇವಿ ದರ್ಶನ ಪಡೆಯಲು ತೆರಳುವ ಜನರಿಗೆ ಸಿಹಿ ಸುದ್ದಿ. ಬೆಂಗಳೂರಿನಿಂದ ವೈಷ್ಣೋದೇವಿ ದರ್ಶನ ಪಡೆಯಲು ಹೊಸ ರೈಲು ಸೇವೆ ಆರಂಭವಾಗಲಿದೆ. ಗುರುವಾರ ಈ ರೈಲಿಗೆ ಚಾಲನೆ ದೊರೆಯಲಿದ್ದು, ಫೆ.7ರಿಂದ ಸಂಚಾರ ನಡೆಸಲಿದೆ.

ಗುರುವಾರ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಯಶವಂತಪುರ-ಕಾಟ್ರಾ ರೈಲಿಗೆ ಚಾಲನೆ ನೀಡಲಿದ್ದಾರೆ. 2014-15ರ ಬಜೆಟ್‌ನಲ್ಲಿ ಘೋಷಿಸಿದ ಈ ರೈಲು ಫೆ.7ರಿಂದ ವಾರಕ್ಕೊಮ್ಮೆ ಸಂಚಾರ ನಡೆಸಲಿದೆ.

Railways

ಕಾಟ್ರಾ ರೈಲು ನಿಲ್ದಾಣ ವೈಷ್ಣೋದೇವಿ ಮಂದಿರದಿಂದ ಸುಮಾರು 13 ಕಿ.ಮೀ ದೂರದಲ್ಲಿದೆ. 19 ಬೋಗಿಗಳ ಈ ರೈಲು ಯಶವಂತಪುರದಿಂದ ಕಾಟ್ರಾಕ್ಕೆ ವಾರಕ್ಕೊಮ್ಮೆ ಸಂಚರಿಸಲಿದೆ. ಸುಮಾರು 56 ಗಂಟೆಗಳ ಅವಧಿಯ ಪ್ರಯಾಣದಲ್ಲಿ ರೈಲು 10 ಕಡೆ ನಿಲುಗಡೆಗೊಳ್ಳಲಿದೆ. [ಯಶವಂತಪುರ-ಮೀರಜ್ ರೈಲು ಸೇವೆ ವಿಸ್ತರಣೆ]

ಯಶವಂತಪುರಿಂದ ಹೊರಡುವ ರೈಲು ಸಿಕಂದ್ರಾಬಾದ್, ನಾಗ್ಪುರ, ಜಾನ್ಸಿ, ನವದೆಹಲಿ ಮಾರ್ಗವಾಗಿ ಕಾಟ್ರಾ ತಲುಪಲಿದೆ. ದಕ್ಷಿಣ ಭಾರತದಿಂದ ಕಾಟ್ರಾಕ್ಕೆ ತೆರಳುವ ಮೊದಲ ರೈಲು ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. [ರೈಲ್ವೆ ಇಲಾಖೆಯ 5 ಹೊಸ ಯೋಜನೆಗಳು ಯಾವವು?]

ವೇಳಾಪಟ್ಟಿ : ಯಶವಂತಪುರ-ಕಾಟ್ರಾ ರೈಲಿನ ಅಂತಿಮ ವೇಳಾಪಟ್ಟಿ ಇನ್ನೂ ನಿಗದಿಯಾಗಿಲ್ಲ. ಆದರೆ, ತಾತ್ಕಾಲಿಕ ವೇಳಾಪಟ್ಟಿ ಸಿದ್ಧವಾಗಿದ್ದು ಇದೇ ಅಂತಿಮಗೊಳ್ಳುವ ಸಾಧ್ಯತೆಯೂ ಇದೆ.

ಯಶವಂತಪುರದಿಂದ ಶನಿವಾರ ಬೆಳಗ್ಗೆ 11.30ಕ್ಕೆ ಹೊರಡುವ ರೈಲು ಸೋಮವಾರ ಸಂಜೆ 7.45ಕ್ಕೆ ಕಾಟ್ರಾಕ್ಕೆ ತಲುಪಲಿದೆ. ಕಾಟ್ರಾದಿಂದ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಹೊರಡಲಿರುವ ರೈಲು ಗುರುವಾರ ಮಧ್ಯಾಹ್ನ 3 ಗಂಟೆಗೆ ಯಶವಂತಪುರಕ್ಕೆ ತಲುಪಲಿದೆ.

English summary
The first train from Yeshwantpur (Bengaluru) to Katra railway station, which is situated at a distance of 13 km from the temple of Mata Vaishno Devi is all set to kick-start on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X