ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೈಋತ್ಯ ರೈಲ್ವೆ: 116 ರೈಲುಗಳ ಪರಿಷ್ಕೃತ ವೇಳಾಪಟ್ಟಿ ಸಿದ್ಧ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 17: ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ಒಟ್ಟು 116 ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಹೊಸ ವೇಳಾಪಟ್ಟಿ ಗುರುವಾರದಿಂದ ಜಾರಿಗೆ ಬಂದಿದೆ. ಒಟ್ಟು 66 ಎಕ್ಸ್‌ಪ್ರೆಸ್‌ ಹಾಗೂ 48 ಪ್ಯಾಸೆಂಜರ್‌ ರೈಲು ವೇಳಾಪಟ್ಟಿ ಬದಲಾಗಿದೆ.

2017ರ ನವೆಂಬರ್‌ನಲ್ಲಿ 12 ನೂತನ ರೈಲುಗಳ ಸಂಚಾರ ಆರಂಭಿಸಲಾಗಿತ್ತು. ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ರೈಲುಗಳ ವೇಗ ಹೆಚ್ಚಿಸಲಾಗಿತ್ತು. ಸೂಪರ್‌ ಫಾಸ್ಟ್‌ ಆಗಿ ಪರಿವರ್ತಿಸಲಾಗಿದೆ. ಒಟ್ಟಾರೆ ನೈಋತ್ಯ ರೈಲ್ವೆಯಲ್ಲಿ 17 ರೈಲುಗಳ ವೇಗ ಹೆಚ್ಚಿಸಲಾಗಿದೆ.

ಸಬರ್ಬನ್‌ ಯೋಜನೆ ಚುರುಕು: ಮತ್ತಷ್ಟು ರೈಲುಗಳು ಮೆಮುವಾಗಿ ಪರಿವರ್ತನೆಸಬರ್ಬನ್‌ ಯೋಜನೆ ಚುರುಕು: ಮತ್ತಷ್ಟು ರೈಲುಗಳು ಮೆಮುವಾಗಿ ಪರಿವರ್ತನೆ

ಕಳೆದ ವರ್ಷ 3411 ವಿಶೇಷ ರೈಲುಗಳನ್ನು ಕಾರ್ಯಾಚರಣೆಗೊಳಿಸಲಾಗಿದ್ದು, ಈ ವರ್ಷ ಇದುವರೆಗೆ 1663 ವಿಶೇಷ ರೈಲುಗಳು ಸಂಚರಿಸಿವೆ. ನೈಋತ್ಯ ವ್ಯಾಪ್ತಿಯಲ್ಲಿ ಕಳೆದ ವರ್ಷ 71ಕಿ.ಮೀ ಜೋಡಿ ಹಳಿ ಕಾಮಗಾರಿ ಪೂರ್ಣಗೊಂಡಿದೆ. ಈವರೆಗೆ 25 ಕಿ.ಮೀ ಜೋಡಿ ಹಳಿ ಕಾಮಗಾರಿ ಪೂರ್ಣಗೊಂಡಿದ್ದು, 265 ಕಿ.ಮೀ ಕಾಮಗಾರಿ ಅಂತಿಮಗೊಳಿಸುವ ಗುರಿ ಹೊಂದಲಾಗಿದೆ.

Train timings of South Western Railways revised

2018-19ರಲ್ಲಿ 41 ಕಿ.ಮೀ ಹೊಸ ಮಾರ್ಗ ಪೂರ್ಣಗೊಳಿಸುವ ಗುರಿ ಇದೆ. ಮೈಸೂರು, ಹುಬ್ಬಳ್ಳಿ ನಡುವೆ ಕಳೆದ ವರ್ಷವಷ್ಟೇ ಉದ್ಘಾಟನೆಗೊಂಡಿದ್ದ ವಿಶ್ವಮಾನವ ಎಕ್ಸ್‌ಪ್ರೆಸ್‌ನಲ್ಲಿ ಕಡಿಮೆ ದರದಲ್ಲಿ ಜನರು ಪ್ರಯಾಣಿಸಬಹುದಾಗಿದೆ.

ಪ್ರಯಾಣಿಕರಿಂದ ಸಬರ್ಬನ್ ರೈಲು ಮಾಹಿತಿಗೆ ನೂತನ ಆ್ಯಪ್‌!ಪ್ರಯಾಣಿಕರಿಂದ ಸಬರ್ಬನ್ ರೈಲು ಮಾಹಿತಿಗೆ ನೂತನ ಆ್ಯಪ್‌!

ಈ ರೈಲಿನಲ್ಲಿ ಶೀಘ್ರವೇ ಎಸಿ ಚೇರ್‌ಕಾರ್‌ ಬೋಗಿ ಅಳವಡಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎಕೆ ಗುಪ್ತಾ ತಿಳಿಸಿದ್ದಾರೆ. ಪರಿಷ್ಕೃತ ವೇಳಾಪಟ್ಟಿ ವೆಬ್ ಸೈಟ್ ನಲ್ಲಿ ವೀಕ್ಷಿಸಬಹುದಾಗಿದೆ.

English summary
To facilitate passengers and for smooth functioning, South west railway changes 116 rail timings. This include some rails increasing of speed also
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X