ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರ ನಿಯಮ ಉಲ್ಲಂಘನೆ: ದಂಡ ಕ್ರಮ ರಾಜ್ಯಾದ್ಯಂತ ಏಕೀಕೃತ

|
Google Oneindia Kannada News

ಬೆಂಗಳೂರು, ಫೆಬ್ರವರಿ 3 : ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ವಸೂಲಿ ಮಾಡಲು ರಾಜ್ಯಾದ್ಯಂತ ಏಕೀಕೃತ ವ್ಯವಸ್ಥೆ ಜಾರಿಗೆ ತರಲು ಪೊಲೀಸ್ ಇಲಾಖೆ ನಿರ್ಧರಿಸಿದೆ.

ಪೊಲೀಸರು ಇನ್ನುಮುಂದೆ ವ್ಯಾಪ್ತಿಯ ಮಿತಿ ಇಲ್ಲದೆ ದಂಡ ಸಂಘ್ರಹಿಸುವ ಅಧಿಕಾರ ಪಡೆಯಲಿದ್ದಾರೆ. ವಾಹನ ಸವಾರರು ಯಾವುದೇ ಜಿಲ್ಲೆ ಹಾಗೂ ಮಹಾನಗರದಗಳಲ್ಲಿ ನಿಯಮ ಉಲ್ಲಂಘಿಸಿದರೂ ಯಾವುದೇ ಸಂಚಾರ ಠಾಣೆಯ ಪೊಲೀಸರು ದಂಡ ವಸೂಲಿ ಮಾಡಬಹುದು.

ಈ ಮೊದಲ ರಾಜ್ಯದ ಯಾವುದೇ ಜಿಲ್ಲೆ ಹಾಗೂ ಮಾಹನಗರಗಳಲ್ಲಿ ವಾಹನ ಸವಾರರು ನಿಯಮ ಉಲ್ಲಂಘಿಸಿದರೆ, ಆಯಾ ಜಿಲ್ಲೆ ಹಾಗೂ ಮಹಾನಗರಗಳ ವ್ಯಾಪ್ತಿಯ ಪೊಲೀಸರಷ್ಟೇ ದಂಡ ಸಂಗ್ರಹಿಸುವ ವ್ಯವಸ್ಥೆ ಇದುವರೆಗೆ ಜಾರಿಯಲ್ಲಿತ್ತು.

Traffic violations will be centralised in the state

ರಾಜ್ಯದಲ್ಲಿ ಒಟ್ಟು114 ಸಂಚಾರ ಪೊಲೀಸ್ ಠಾಣೆಗಳಿವೆ, ನಿಯಮ ಉಲ್ಲಂಘನೆ ಪ್ರಕರಣಗಳು ಕಂಡುಬಂದಾಗ, ಅದರ ದತ್ತಾಂಶವನ್ನು ಆಯಾ ಜಿಲ್ಲೆ ಅಥವಾ ಮಹಾನಗರಗಳ ಸರ್ವರ್ ನಲ್ಲಷ್ಟೇ ಸಂಗ್ರಹಿಸಿಡಲಾಗುತ್ತಿದೆ. ಅಂತಹ ಸರ್ವರ್ ನಲ್ಲಿರುವ ದತ್ತಾಂಶವನ್ನು ಬೇರೆ ಜಿಲ್ಲೆ ಅಥವಾ ಮಹಾನಗರಗಳ ಪೊಲೀಓಸರಿಗೆ ನೋಡಲು ಸಭ್ಯವಾಗುತ್ತಿಲ್ಲ. ಹೀಗಾಗಿ ಪ್ರತಿಯೊಂದು ಠಾಣೆಯ ದತ್ತಾಂಶವನ್ನು ಒಂದೇ ಸರ್ವರ್ ನಲ್ಲಿ ಸಂಗ್ರಹಿಸಿಟ್ಟು, ಅದನ್ನು ಆಧರಿಸಿ ದಂಡ ವಸೂಲಿ ಮಾಡುವುದಕ್ಕಾಗಿ ಈ ವ್ಯವಸ್ಥೆ ರೂಪಿಸಲಾಗಿದೆ.

ಬೆಂಗಳೂರಿನ 44 ಹಾಗೂ ಮೈಸೂರಿನ5 ಸಂಚಾರ ಠಾಣೆ ಹೊರತುಪಡಿಸಿ ಉಳಿಸ ಠಾಣೆಗಳಲ್ಲಿ ಕಾಗದದಲ್ಲೇ ದಂಡ ಬರೆದುಕೊಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ತಂತ್ರಜ್ಞಾನ ಬಳಸಿ ದಂಡ ವಿಧಿಸುವ ಪ್ರಕ್ರಿಯೆ ತರಲಾಗುತ್ತಿಎ. ಏಕೀಕೃತ ವ್ಯವಸ್ಥೆಗೆ ತಕ್ಕುದಾದ300 ಉಪಕರಣಗಳನ್ನು ಸಂಚಾರ ಪೊಲೀಸರಿಗೆ ನೀಡಲಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

English summary
Penalties under traffic violations in the state soon will be centralised as RTO and traffic police data's will be synchronized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X