ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಾಫಿಕ್‌ ನಿಯಮ ಉಲ್ಲಂಘನೆ: ಬಿಎಂಟಿಸಿ ಚಾಲಕರ ಸುಧಾರಣೆ

By Nayana
|
Google Oneindia Kannada News

ಬೆಂಗಳೂರು, ಜೂನ್‌ 29: ಬಿಎಂಟಿಸಿ ಚಾಲಕರು ಸಂಚಾರ ನಿಯಮ ಉಲ್ಲಂಘನೆಯನ್ನು ಕಡಿಮೆ ಮಾಡಿದ್ದಾರೆ, ಇದರಿಂದ ಅಧಿಕಾರಿಗಳು ಕೊಂಚ ನಿರಾಳರಾಗಿದ್ದಾರೆ.

ಬಿಎಂಟಿಸಿಯು ಸಂಚಾರ ನಿಯಮ ಉಲ್ಲಂಘಿಸುವಲ್ಲಿ ಮುಂಚೂಣಿಯಲ್ಲಿತ್ತು, ಇದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಯಿ ಪರಿಣಮಿಸಿತ್ತು, ಸಂಚಾರ ನಿಯಮ ಕುರಿತು ಎಷ್ಟೇ ಹೇಳಿದರು ಚಾಲಕರು ನಿಯಮ ಉಲ್ಲಂಘಿಸುವುದನ್ನು ಮಾತ್ರ ಬಿಟ್ಟಿರಲಿಲ್ಲ.ಸಿಗ್ನಲ್‌ ಜಂಪಿಂಗ್‌, ನೋ ಪಾರ್ಕಿಂಗ್‌ ಪ್ರದೇಶದಲ್ಲಿ ನಿಲುಗಡೆ, ಅತಿ ವೇಗದ ಚಾಲನೆ ಹೀಗೆ ಅನೇಕ ನಿಯಮವನ್ನು ಉಲ್ಲಂಘಿಸುತ್ತಿದ್ದರು.

ಬಿಎಂಟಿಸಿ ಬಸ್‌ಗಳ ಕಿಟಕಿ ಮೇಲ್ಭಾಗದ ಜಾಹಿರಾತುಗಳಿಗೆ ಬ್ರೇಕ್‌ ಬಿಎಂಟಿಸಿ ಬಸ್‌ಗಳ ಕಿಟಕಿ ಮೇಲ್ಭಾಗದ ಜಾಹಿರಾತುಗಳಿಗೆ ಬ್ರೇಕ್‌

ಬಿಎಂಟಿಸಿ ಮತ್ತು ಟ್ರಾಫಿಕ್‌ ಪೊಲೀಸರು ಕೈಗೊಂಡ ಜಾಗೃತಿಯಿಂದಾಗಿ ಉಲ್ಲಂಘನೆ ಪ್ರಕರಣದಲ್ಲಿ ಇಳಿಕೆಯಾಗಿದೆ. 2017-18ರಲ್ಲಿ 4,939 ಪ್ರಕರಣಗಳು ದಾಖಲಾಗಿತ್ತು. 2011-12 ರಿಂದ 2017-18ರವರೆಗೆ ಬಿಎಂಟಿಸಿಯು ಸಂಚಾರ ಪೊಲೀಸ್‌ ಇಲಾಖೆಯಿಂದ 1,24,457 ಉಲ್ಲಂಘನೆ ಪ್ರಕರಣ ವರದಿಯಾಗಿತ್ತು.

Traffic violations: BMTC drivers become smarter

ಉದ್ದೇಶಪೂರ್ವಕವಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿಲ್ಲ, ನಮಗೆ ಕೊಟ್ಟಿರುವ ಟ್ರಿಪ್‌ ಅನ್ನು ಸರಿಯಾದ ಸಮಯದಲ್ಲಿ ಪೂರ್ಣಗೊಳಿಸುವ ಆತುರದಲ್ಲಿ ಹೀಗಾಗುತ್ತದೆ, ಇಲ್ಲದೇ ಹೋದಲ್ಲಿ ಮೇಲಧಿಕಾರಿಗಳಿಗೆ ನಾವು ವಿವರಣೆ ನೀಡಬೇಕಾಗುತ್ತದೆ ಹೀಗಾಗಿ ಕೆಲವೊಮ್ಮೆ ಸಂಚಾರ ನಿಯಮ ಉಲ್ಲಂಘಿಸುವುದು ಅನಿವಾರ್ಯವಾಗುತ್ತದೆ ಎಂದು ಚಾಲಕರೊಬ್ಬರು ತಿಳಿಸಿದ್ದಾರೆ.

ನಗರದಲ್ಲಿ ಪ್ರತಿ ಅರ್ಧ ಕಿ.ಮೀಗೆ ಒಂದರಂತೆ ಟ್ರಾಫಿಕ್‌ ಸಿಗ್ನಲ್‌ಗಳಿವೆ ಇದರಿಂದಾಗಿ ನಿಗದಿತ ಅವಧಿಯಲ್ಲಿ ಟ್ರಿಪ್‌ ಪೂರ್ಣಗೊಳಿಸುವುದು ಸಾಧ್ಯವಾಗುತ್ತಿಲ್ಲ, ಟ್ರಾಫಿಕ್‌ ಜಾಮ್‌ ಕೂಡ ಸಮಸ್ಯೆ ಉಂಟು ಮಾಡುತ್ತಿದೆ. ಕೆಲವೊಮ್ಮೆ ಗಂಟೆಗಟ್ಟಲೆ ಅಲ್ಲೇ ಬಸ್‌ ಬಾಕಿಯಾಗುತ್ತದೆ ಎಂದು ವಿವರಿಸಿದರು.

English summary
Traffic violation is common habit of drivers and riders in Bengaluru. Violations were increasing day by day. Interestingly BMTC drivers have set an example of improvement. Here is the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X