ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪಶ್ಚಿಮದಲ್ಲಿ ಹೆಚ್ಚಿದ ಟ್ರಾಫಿಕ್ ನಿಯಮ ಉಲ್ಲಂಘನೆ!

|
Google Oneindia Kannada News

ಬೆಂಗಳೂರು, ಜನವರಿ 05: ಬೆಂಗಳೂರು ನಗರದ ಸಂಚಾರ ವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು ವಾಹನಗಳ ಸಂಖ್ಯೆ ವಿಪರೀತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಕೂಡ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಕಟರಣಗಳನ್ನು ದಾಖಲಿಸುವ ಪ್ರಮಾಣವೂ ಕೂಡ ಹೆಚ್ಚುತ್ತಿದೆ.

ಕಳೆದ 2016 ಹಾಗೂ 2017 ಕ್ಕೆ ಹೋಲಿಸಿದರೆ ಬೆಂಗಳೂರು ಪಶ್ಚಿಮ ಟ್ರಾಫಿಕ್ ವಿಭಾಗದ ವ್ಯಾಪ್ತಿಯಲ್ಲಿ ನೋ ಎಂಟ್ರಿ ಹಾಗೂ ಕರ್ಕಶ ಹಾರ್ನ್ ಗಳ ವಿರುದ್ಧ ಪೊಲೀಸರು ದಾಖಲಿಸಿದ ಪ್ರಕರಣಗಳ ಪ್ರಮಾಣ ವಿಪರೀತ ಸಂಖ್ಯೆಯಲ್ಲಿ ಹೆಚ್ಚಿದೆ.

ಬೆಂಗಳೂರು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಟಿ.ಪಿ. ಶಿವಕುಮಾರ್ ಟ್ವಿಟ್ಟರ್ ನಲ್ಲಿ 2016 ಮತ್ತು 17ನೇ ಸಾಲಿ ಪ್ರಕರಣಗಳ ವಿವರಗಳನ್ನು ಟ್ವೀಟ್ ಮಾಡಿದ್ದು, ಕರ್ಕಶ ಹಾರ್ನ್ ಮಾಡುವ ವಾಹನಗಳು 2016 ರಲ್ಲಿ 9,344 ದಾಖಲಾಗಿದ್ದು, ಅದೇ 2017ರಲ್ಲಿ 13,938 ಪ್ರಕರಣಗಳು ದಾಖಲಾಗಿವೆ.

Traffic rule violation increase in Bengaluru West

ಅಂದರೆ ವರ್ಷದಿಂದ ವರ್ಷಕ್ಕೆ ಸಂಚಾರಿ ಪೊಲೀಸರು ಎಷ್ಟು ಜಾಗೃತೆ ಮೂಡಿಸಿದರೂ ವಾಹನ ಸವಾರರು ಕರ್ಕಶ ಹಾರ್ನ್ ಮಾಡುವುದನ್ನು ನಗರದಲ್ಲಿ ನಿಲ್ಲಿಸುತ್ತಿಲ್ಲ ಇದರಿಂದ ಬೆಂಗಳೂರು ನಗರದಲ್ಲಿ ಸಾರ್ವಜನಿಕರ ಬದುಕೇ ದುಸ್ಥರವಾಗುತ್ತಿದೆ.

ಇನ್ನು ಬೆಂಗಳೂರು ಪಶ್ಚಿಮ ವಿಭಾಗದ ವ್ಯಾಪ್ತಿಯಲ್ಲಿ ವಾಹನ ಸವಾರರು ನೋ ಎಂಟ್ರಿಗಳಲ್ಲಿ ನುಗ್ಗುವುದು ಕೂಡ ವಿಪರೀತ ಪ್ರಮಾಣದಲ್ಲಿ ಹೆಚ್ಚು ಮಾಡಿದ್ದಾರೆ. 2016 ರಲ್ಲಿ 91 ಸಾವಿರ ನೋ ಎಂಟ್ರಿ ಪ್ರಕರಣಗಳು ದಾಖಲಾಗಿದ್ದರೆ 2017 ರಲ್ಲಿ 1 ಲಕ್ಷ 23 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದು ಕೇವಲ ನಿದರ್ಶನ ಮಾತ್ರ ಹೀಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಬೆಂಗಳೂರಿನಲ್ಲಿ ಸರ್ವೇ ಸಾಮಾನ್ಯವಾಗಿದೆ.

ಕೇವಲ ಬೆಂಗಳೂರು ಪಶ್ಚಿಮ ವಿಭಾಗದ ಮಾತ್ರ ಲಕ್ಷಗಟ್ಟಲೆ ಪ್ರಕಣಗಳು ದಾಖಲಾಗಿದ್ದರೆ ಇನ್ನು ಬೆಂಗಳೂರು ನಗರದಲ್ಲಿ 40 ಲಕ್ಷದಷ್ಟು ಪ್ರಕರಣಗಳು ದಾಖಲಾಗುತ್ತಿದೆ. ಪ್ರಜ್ಞಾವಂತ ನಾಗರಿಕರಿಗೆ ಸಂಚಾರಿ ನಿಯಮಗಳು ಗೊತ್ತಿದ್ದೂ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ.

ಪೊಲೀಸ್ ಕಾನ್ ಸ್ಟೆಬಲ್ ಸಿದ್ದರಾಜು ಅವರಿಗೆ ಪೊಲೀಸ್ ರತ್ನ: ಆಡುಗೋಡಿ ಪೊಲೀಸ್ ಠಾಣೆಯ ಟ್ರಾಫಿಕ್ ಕಾನ್ ಸ್ಟೆಬಲ್ ಆಗಿರುವ ಸಿದ್ದರಾಜು ಇತ್ತೀಚೆಗೆ ಸಾರ್ವಜನಿಕ ಸ್ನೇಹಿ ಸೇವೆಯಿಂದ ಗಮನ ಸೆಳೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದ್ದರು. ಇದೀಗ ಮತ್ತಿಕೆರೆಯ ಜನ್ಮ ಭೂಮಿ ಸಾಂಸ್ಕೃತಿಕ ನಾಗರಿಕರ ವೇದಿಕೆಯು ಸಿದ್ದರಾಜು ಅವರಿಗೆ ಪೊಲೀಸ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಆಡುಗೋಡಿ ಪೊಲೀಸರು ಸಿದ್ದರಾಜು ಅವರ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

English summary
Traffic rules like No entry and Shrill horn violitions drastically increased in Bengaluru West and DCP traffic west, Mr TP Shivakumar expressed concern in Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X