ವಿಧಾನಸೌಧದ ಸುತ್ತಮುತ್ತ ಇನ್ನೆರಡು ದಿನ ವಾಹನ ಸಂಚಾರ ನಿಷೇಧ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 23: ಇಲ್ಲಿನ ವಿಧಾನಸೌಧ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿ ಪೊಲೀಸ್ ತಿಮ್ಮಯ್ಯ ಸರ್ಕಲ್ ನಿಂದ ಕೆ.ಆರ್.ಸರ್ಕಲ್ ವರೆಗೆ ಬ್ರ್ಯಾಂಡ್ ಬೆಂಗಳೂರು ಅನಾವರಣ ಮತ್ತು ಓಪನ್ ಸ್ಟ್ರೀಟ್ ಕಾರ್ಯಕ್ರಮವನ್ನು ಭಾನುವಾರ (ಡಿಸೆಂಬರ್ 24) ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಒಂದೂವರೆ ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

'ನಮ್ಮ ಬೆಂಗಳೂರು ಹಬ್ಬಕ್ಕೆ' ವಿಧಾನಸೌಧ ಅಂಗಳ ಸಜ್ಜು

ಇಂಥ ದೊಡ್ಡ ಪ್ರಮಾಣದ ಕಾರ್ಯಕ್ರಮ ಸುಗಮವಾಗಿ ನಡೆಸುವ ಉದ್ದೇಶದಿಂದ ಹಾಗೂ ಕಾರ್ಯಕ್ರಮದ ಸಿದ್ಧತೆ- ತೆರವಿಗೆ ಕಾಲಾವಕಾಶ ಬೇಕಾದ್ದರಿಂದ ಡಿಸೆಂಬರ್ 23ರ (ಶನಿವಾರ) ರಾತ್ರಿ 10 ಗಂಟೆಯಿಂದ ಡಿಸೆಂಬರ್ 25ರ (ಸೋಮವಾರ) ಬೆಳಗ್ಗೆ 6 ಗಂಟೆ ತನಕ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿ, ಪೊಲೀಸ್ ತಿಮ್ಮಯ್ಯ ಸರ್ಕಲ್ ನಿಂದ ಕೆ.ಆರ್.ಸರ್ಕಲ್ ವರೆಗೆ ರಸ್ತೆಯ ಎರಡೂ ದಿಕ್ಕಿನಲ್ಲಿ ಎಲ್ಲ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

Vidhana Soudha

ಇದಕ್ಕೆ ಪರ್ಯಾಯ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಇನ್ನು ಕಾರ್ಯಕ್ರಮ ನಡೆಯುವ ಸ್ಥಳವಾದ ವಿಧಾನಸೌಧ ಸುತ್ತಮುತ್ತ ವಾಹನಗಳ ನಿಲುಗಡೆಗೆ ಅವಕಾಶ ಇರುವುದಿಲ್ಲ. ಮೆಟ್ರೋ, ಬಿಎಂಟಿಸಿ ಮತ್ತು ನಿಲುಗಡೆ ಸ್ಥಳದಿಂದ ವ್ಯವಸ್ಥೆ ಮಾಡಿರುವ ಷಟಲ್ ಬಸ್ ಸೇವೆಗಳನ್ನು ಬಳಸಲು ಮನವಿ ಮಾಡಲಾಗಿದೆ.

ಕಬ್ಬನ್ ಪಾರ್ಕ್ ನ ದ್ವಾರಗಳನ್ನು ಸಹ ಇದೇ 23ರ ರಾತ್ರಿ ಹತ್ತು ಗಂಟೆಯಿಂದ ಮುಚ್ಚಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Due to brand Bengaluru inauguration and Open street festival on December 24th Sunday, There is a change in traffic route around Vidhanasoudha from December 23rd Saturday night 10 PM to 25th Monday 6 AM.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ