ಕುಡಿದು ವಾಹನ ಓಡಿಸಿದರೆ ಪಾಠ ಹೇಳ್ತಾರೆ ಟ್ರಾಫಿಕ್ ಪೊಲೀಸರು!

Posted By: Nayana
Subscribe to Oneindia Kannada

ಬೆಂಗಳೂರು, ಮಾರ್ಚ್ 10: ಮದ್ಯಪಾನ ಮಾಡಿ ವಾಹನವನ್ನು ಚಲಾಯಿಸುವ ವಾಹನ ಚಾಲಕರಿಗೆ ದಂಡ ವಿಧಿಸುವುದು ಮಾತ್ರ ವಲ್ಲದೆ ಅಂತಹ ಚಾಲಕರಿಗಾಗಿ ಕಾರ್ಯಾಗಾರ ಆಯೋಜಿಸಿ ತಿಳಿವಳಿಕೆ ನೀಡುವ ಕೆಲಸವನ್ನೂ ಕೂಡ ಬೆಂಗಳೂರು ನಗರ ಸಂಚಾರ ಪೊಲೀಸರು ಮಾಡುತ್ತಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

2018 ಮೊದಲೆರೆಡು ತಿಂಗಳಲ್ಲಿ ಕುಡಿದು ವಾಹನ ಚಾಲನೆ ಮಾಡುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಈ ಹೊಸ ಪ್ರಯೋಗದ ಮೂಲಕ ಕುಡಿದು ಚಾಲನೆ ಮಾಡುವುದನ್ನು ನಿಯಂತ್ರಿಸಲು ಮುಂದಾಗಿದ್ದಾರೆ.

ಪೊಲೀಸರಿಂದ ಜಪ್ತಿಯಾದ ವಾಹನ ತೆರವಾಗದಿದ್ದರೆ ಪಾಲಿಕೆ ವಶ

ಕುಡಿದು ವಾಹನ ಚಾಲನೆ ಮಾಡುವವರ ಪ್ರಕರಣ ಹೆಚ್ಚಗುತ್ತಿರುವರಿಂದ ಪೊಲೀಸರು ಇತ್ತೀಚೆಗೆ ಮೊದಲನೇ ತಂಡದಲ್ಲಿ ಚಾಲಕರಿಗೆ ಕಾರ್ಯಾಗಾರ ಆಯೋಜಿಸುವ ಮೂಲಕ ಅವರಿಗೆ ತಿಳಿವಳಿಕೆ ಹೇಳುವ ಕೆಲಸವನ್ನು ಮಾಡಿತ್ತು.

Traffic police will educate drink and drive offenders

ಈ ಸೆಮಿನಾರ್ ನಲ್ಲಿ ಪೊಲೀಸ್ ಅಧಿಕಾರಿಗಳು, ವೈದ್ಯರು, ನರರೋಗ ತಜ್ಞರು ನ್ಯಾಯವಾದಿಗಳು ಪಾಲ್ಗೊಂಡು ಕುಡಿದು ವಾಹನ ಚಾಲನೆ ಮಾಡುವುದರಿಂದ ದೇಹದ ಮೇಲೆ ಆಗುವ ಹಾಗೂ ಕುಟುಂಬದ ಮೇಲೆ ಆಗುವ ಪರಿಣಾಮದ ಕುರಿತು ತಿಳಿವಳಿಕೆ ನೀಡಿದರು.

ಬಕಾಸುರನ ಹೊಟ್ಟೆಗೆ ಮಜ್ಜಿಗೆಯಂತಾದ ಟ್ರಾಫಿಕ್ ಮತ್ತು ಪೊಲೀಸರು!

ಈ ಕಾರ್ಯಾಗಾರದಲ್ಲಿ ಸಾರ್ವಜನಿಕರು ಸಾಮಾನ್ಯವಾಗಿ ಯೋಚಿಸುವ ಲಹರಿ ಬೇರೆಯಾಗಿರುತ್ತದೆ. ಪೊಲೀಸರು ಕೇವಲ ದಂಡ ವಿಧಿಸುತ್ತಾರೆ ಅಥವಾ ಕುಡಿದು ವಾಹನ ಚಾಲನೆ ಮಾಡುವಾಗ ನಿಲ್ಲಿಸಿ ಬೈಯುತ್ತಾರೆ ಎಂಬ ತಪ್ಪು ಮಾಹಿತಿ ಇರುತ್ತದೆ. ಆದರೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಬೆಂಗಳೂರು ಸಂಚಾರ ಪೊಲೀಸರು ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಟ್ಯಾಕ್ಸಿ ಚಾಲಕರು, ಆಟೋ ರಿಕ್ಷಾ ಚಾಲಕರು ಹಾಗೂ ದ್ವಿಚಕ್ರ ವಾಹನ ಸವಾರರು ಕುಡಿದು ವಾಹನ ಚಾಲನೆ ಮಾಡುತ್ತಾರೆ. ಇವರೆಲ್ಲರೂ ವರ್ಕ್ ಶಾಪ್ ನಲ್ಲಿ ಪಾಲ್ಗೊಂಡ ಬಳಿಕ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನುಮುಂದೆ ಕುಡಿದು ವಾಹನ ಚಾಲನೆ ಮಾಡುವುದನ್ನು ನಿಲ್ಲಿಸುತ್ತೇವೆ ಎನ್ನುವುದಾಗಿ ಪಣತೊಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru traffic police moved one more step ahead to stream lining traffic system with educating traffic normms violators rather only imposing fine.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ