ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್‌ ಮೇಲೆ ಬೈಕ್ ಸಂಚಾರ ನಿಷೇಧ?

Posted By: Gururaj
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 26 : ಎಲೆಕ್ಟ್ರಾನಿಕ್ ಸಿಟಿಯ ಎಕ್ಸ್‌ಪ್ರೆಸ್‌ ವೇ ಫ್ಲೈ ಓವರ್‌ ಮೇಲೆ ಬೈಕ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಕಳೆದ ವಾರವಷ್ಟೇ ಇಬ್ಬರು ಬೈಕ್ ಸವಾರರು ಫ್ಲೈ ಓವರ್ ಮೇಲಿನಿಂದ ಬಿದ್ದು ಮೃತಪಟ್ಟಿದ್ದರು.

ಹೆಬ್ಬಾಳ ಫ್ಲೈ ಓವರ್ ವಿಸ್ತರಣೆ ಕಾರ್ಯ ಆರಂಭಿಸಿದ ಬಿಡಿಎ

ಬೆಂಗಳೂರು ಸಂಚಾರಿ ಪೊಲೀಸರು ಹೊಸೂರು ರಸ್ತೆ-ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಬೈಕ್ ಸಂಚಾರ ನಿರ್ಬಂಧಿಸುವ ಕುರಿತು ಗಂಭೀರ ಚಿಂತನೆ ನಡೆಸಿದ್ದಾರೆ. ಫ್ಲೈ ಓವರ್ ರಚನೆ ಬಗ್ಗೆ ಪೊಲೀಸರು ಅಧ್ಯಯನ ನಡೆಸಲಿದ್ದು ನಂತರ ನಿರ್ಧಾರ ಕೈಗೊಳ್ಳಲಿದ್ದಾರೆ.

Traffic police may ban two-wheeler on Electronics City flyover

ಫ್ಲೈ ಓವರ್ ಮೇಲೆ ಸರಣಿ ಬೈಕ್ ಅಪಘಾತಗಳು ನಡೆಯುತ್ತಿವೆ. ಇದು ಬೈಕ್ ಸವಾರರಿಗೆ ಸುರಕ್ಷಿತವಲ್ಲ ಎಂದು ಪೊಲೀಸರು ನಿರ್ಧರಿಸಿದ್ದಾರೆ. ಆದ್ದರಿಂದ, ಫ್ಲೈ ಓವರ್ ಮೇಲೆ ಬೈಕ್ ಸಂಚಾರ ನಿರ್ಬಂಧಿಸಲು ಚಿಂತನೆ ನಡೆಸಲಾಗುತ್ತಿದೆ.

ಶಿವಾನಂದ ಸರ್ಕಲ್ ಉಕ್ಕಿನ ಸೇತುವೆ ಯೋಜನೆಗೆ ತಡೆ ಇಲ್ಲ

ಅಕ್ಟೋಬರ್ 14ರಂದು ಫ್ಲೈ ಓವರ್ ಮೇಲಿನ ಗಾರ್ವೆಬಾವಿಪಾಳ್ಯ ಬಳಿ ಊಬರ್ ಟ್ಯಾಕ್ಸಿ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಬೈಕ್‌ನಲ್ಲಿದ್ದ ಇಬ್ಬರು ಫ್ಲೈ ಓವರ್‌ನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು. ಈ ವರ್ಷದಲ್ಲೇ ಫ್ಲೈ ಓವರ್ ಮೇಲೆ ಮೂರು ಬೈಕ್ ಅಪಘಾತಗಳು ನಡೆದಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru city traffic police may ban two-wheeler on Electronics City Expressway after technical study of flyover design.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ