• search

ಬಿಜೆಪಿ ಪಾದಯಾತ್ರೆ ಆರಂಭ, ಟ್ರಾಫಿಕ್ ಜಾಮ್ ಎದುರಿಸಿ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಮಾರ್ಚ್ 02: ಬೆಂಗಳೂರು ಕ್ರೈಂ ನಗರವಾಗುತ್ತಿದೆ, 'ಬೆಂಗಳೂರನ್ನು ರಕ್ಷಿಸಿ' ಎಂದು ಭಾರತೀಯ ಜನತಾ ಪಕ್ಷ(ಬಿಜೆಪಿ)ವು ಶುಕ್ರವಾರ ಬೆಳಗ್ಗೆ ಪಾದಯಾತ್ರೆ ಆರಂಭಿಸಿದೆ. ಈ ಬಗ್ಗೆ ಗೊತ್ತಿಲ್ಲದ ಬೆಂಗಳೂರಿಗರು ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ.

  ಬೆಂಗಳೂರಿನ ನರಸಿಂಹರಾಜ ಕಾಲೋನಿಯಿಂದ ಬಸವನಗುಡಿಯ ದೊಡ್ಡ ಗಣಪತಿ ದೇಗುಲದ ತನಕ ಸಾಗುವ ಪಾದಯಾತ್ರೆಯ ಮೊದಲ ಚರಣ ಕೊನೆಗೊಳ್ಳಲಿದೆ. ನಂತರ ಸಂಜೆ ವೇಳೆಗೆ ಶಾಸಕ ಎನ್.ಎ ಹ್ಯಾರೀಸ್ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಯಲಿದೆ.

  ಬಿಜೆಪಿಯ 'ಬೆಂಗಳೂರು ರಕ್ಷಿಸಿ' ಪಾದಯಾತ್ರೆಗೆ ಚಾಲನೆ

  ಯುಬಿ ಸಿಟಿಯಿಂದ ಶಾಂತಿನಗರ ಬಸ್ ನಿಲ್ದಾಣದ ತನಕ ನಡೆಯಲಿದೆ. ಹೀಗಾಗಿ, ಸಂಜೆ ವೇಳೆ ಈ ಭಾಗದ ಮಹಾ ಜನತೆ ಪರ್ಯಾಯ ಮಾರ್ಗವನ್ನು ಗೂಗಲ್ ಮ್ಯಾಪ್ ಹಾಕಿಕೊಂಡು ನೋಡಿಕೊಳ್ಳುವುದು ಒಳ್ಳೆಯದು. ಇದಕ್ಕೆ ಯಾವ ಪಕ್ಷದ ನಾಯಕರು ನಿಮಗೆ ಸಹಾಯ ಮಾಡುವುದಿಲ್ಲ.

  ಪಾದಯಾತ್ರೆಗೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಮುಂದಿನ ಹಂತದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಬೆಂಗಳೂರಿನ ಉಳಿದ ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಸುವ ಉಸ್ತುವಾರಿಯನ್ನು ಮಾಜಿ ಗೃಹ ಸಚಿವ ಆರ್ ಅಶೋಕ ಅವರಿಗೆ ವಹಿಸಲಾಗಿದೆ.

  ಯಾರ ವಿರುದ್ಧ ಈ ಪಾದಯಾತ್ರೆ?: ಬೆಳಗ್ಗೆ ಆರಂಭವಾಗಿ ಬೆಳಗ್ಗೆಯೆ ಅಂತ್ಯಗೊಳ್ಳುವ ಹಾಗೂ ಸಂಜೆ ತಂಪಾದ ವಾತಾವರಣದಲ್ಲಿ ಪಾದಯಾತ್ರೆ ಮಾಡುವ ಬಿಜೆಪಿಯ ಉದ್ದೇಶವನ್ನು ಪ್ರಶ್ನಿಸಲಾಗಿದೆ.

  ಪಾದಯಾತ್ರೆಗೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಕಾಶ್

  ಪಾದಯಾತ್ರೆಗೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಕಾಶ್

  ಪಾದಯಾತ್ರೆಗೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಮುಂದಿನ ಹಂತದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಬೆಂಗಳೂರಿನ ಉಳಿದ ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಸುವ ಉಸ್ತುವಾರಿಯನ್ನು ಮಾಜಿ ಗೃಹ ಸಚಿವ ಆರ್ ಅಶೋಕ ಅವರಿಗೆ ವಹಿಸಲಾಗಿದೆ. ಮೊದಲ ದಿನ ಪಾದಯಾತ್ರೆಯಲ್ಲಿ ಸಂಸದ ಅನಂತ್ ಕುಮಾರ್, ನಟಿ ತಾರಾ, ಸ್ಥಳೀಯರಾದ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

  ಬೆಂಗಳೂರಿನ ನಾಗರಿಕರ ಕಳಕಳಿಯ ಮನವಿ

  ಬೆಂಗಳೂರಿನ ನಾಗರಿಕರ ಕಳಕಳಿಯ ಮನವಿ

  ಬೆಂಗಳೂರನ್ನು ಯಾರಿಂದ ರಕ್ಷಿಸಬೇಕು ಎಂಬುದನ್ನು ಪಾದಯಾತ್ರೆಯಲ್ಲಿ ಸರಿಯಾಗಿ ಹೇಳಿ, ಕಾಂಗ್ರೆಸ್ಸಿನಿಂದ ರಕ್ಷಿಸಬೇಕಾದರೆ, ಕಾಂಗ್ರೆಸ್ ಕಚೇರಿ ಮುಂದೆ, ಸಚಿವರು, ಶಾಸಕರ ಮನೆ, ಕಚೇರಿ ಮುಂದೆ ಪ್ರತಿಭಟನೆ, ಮೆರವಣಿಗೆ, ಉರುಳು ಸೇವೆ, ಉಪವಾಸ ಸತ್ಯಾಗ್ರಹ, ಪಾದಯಾತ್ರೆ ಏನಾದ್ರೂ ಮಾಡಿಕೊಳ್ಳಿ ಎಂದು ಬೆಂಗಳೂರಿನ ನಾಗರಿಕರ ಕಳಕಳಿಯ ಮನವಿ

  ರಸ್ತೆಗಿಳಿಯುವ ಬದಲು ಪಾರ್ಕ್ ಗಳಿವೆ ಹೋಗಿ

  ರಸ್ತೆಗಿಳಿದು ಮೆರವಣಿಗೆ ಮಾಡುವ ಮೂಲಕ ಜನರಿಗೆ ಸಮಸ್ಯೆ ಏಕೆ ತಂದೊಡ್ಡುತ್ತಿದ್ದೀರಿ ಎಂದು ಬಸವನಗುಡಿಯ ಮಾರ್ಗದಲ್ಲಿ ನಿತ್ಯ ಸಂಚರಿಸುವವರು ಪ್ರಶ್ನಿಸಿದ್ದಾರೆ. ಟ್ರಾಫಿಕ್ ಜಾಮ್ ನಿಂದ ಬೆಂಗಳೂರು ಬಳಲುತ್ತಿದೆ ಎಂದು ಹೇಳುವ ನೀವೆ ರಸ್ತೆಗಿಳಿದು ಜಾಮ್ ಮಾಡುವುದೇಕೆ? ಇದರ ಬದಲು ಪಾರ್ಕ್ ಗಳಿಗೆ ಹೋಗಿ ನಿಮ್ಮ ಅಳಲು ತೋಡಿಕೊಳ್ಳಿ.

  ಕ್ರೈಂ ಸಿಟಿಯಾಗುತ್ತಿದೆ ಬೆಂಗಳೂರು

  ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಮೊಹಮ್ಮದ್ ನಲಪಾಡ್ ಅವರು ವಿದ್ವತ್ ಮೇಲೆ ಹಲ್ಲೆ ಮಾಡಿದ ಪ್ರಕರಣವನ್ನು ಮುಂದಿಟ್ಟುಕೊಂಡು, ನಾಗರಿಕರಿಗೆ ರಕ್ಷಣೆ ಬೇಕಿದೆ ಎಂದು ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳನ್ನು ಗುರಿಯನ್ನಾಗಿಸಿಕೊಂಡು ಬಿಜೆಪಿ ಈ ಪಾದಯಾತ್ರೆ ನಡೆಸಲು ಉದ್ದೇಶಿಸಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Bengaluru Rakshisi Yatre to revive and rebuild #NammaBengaluru from Congress's criminal neglect is kicked off in Basavanagudi after offering prayers at historic Gavi Gangadhareshwara Temple. But, Traffic Jam, protest from Congress welcomed the Padayatre

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more