ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗ್ಳೂರಲ್ಲಿ ಇಂಡೋ-ಆಸೀಸ್ ಪಂದ್ಯ, ಎಲ್ಲೆಲ್ಲಿ ಸಂಚಾರ, ಎಲ್ಲಿ ನಿರ್ಬಂಧ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಣದಲ್ಲಿ ನಡೆಯುತ್ತಿರುವುದರಿಂದ ವಾಹನಗಳ ಪಾರ್ಕಿಂಗ್ ಹಾಗೂ ಪ್ರೇಕ್ಷಕರು ಮೈದಾನ ಪ್ರವೇಶಿಸುವ ಗೇಟ್ ಸೇರಿದಂತೆ ಇತರೆ ಮಾಹಿತಿ ಇಲ್ಲಿದೆ.

By Ramesh
|
Google Oneindia Kannada News

ಬೆಂಗಳೂರು, ಮಾರ್ಚ್. 02 : ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 04 ರಿಂದ ಆರಂಭವಾಗಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯ ಆರಂಭಗೊಳ್ಳುತ್ತಿರುವುದರಿಂದ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ.

ಪಂದ್ಯವನ್ನು ವೀಕ್ಷಿಸಲು ಹೆಚ್ಚಿ ಜನರು ಬರುವುದರಿಂದ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ನಗರ ಪೊಲೀಸ್ ಕೆಎಸ್ ಸಿಎ ಸ್ಟೇಡಿಯಂ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ದಿನಾಂಕ ಮಾರ್ಚ್ 04ರಿಂದ 8ರ ವರೆಗೆ ನಿರ್ಬಂಧ ಹೇರಿದೆ. [ಚಿತ್ರಗಳಲ್ಲಿ : ಬೆಂಗಳೂರಿಗೆ ಬಂದಿಳಿದ ಕೊಹ್ಲಿ ಹಾಗೂ ಸ್ಮಿತ್ ಪಡೆ]

ಈ ಕೆಳಕಂಡ ರಸ್ತೆಗಳಲ್ಲಿ ಮಾ.4ರಿಂದ ಮಾ.8ರ ವರೆಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 5ರ ವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಹಾಗೂ ವಾಹನ ನಿಲುಗಡೆಗೆ ಪರ್ಯಾಯ ಸ್ಥಳಗಳು ಎಲ್ಲಿ ಮುಂದೆ ಓದಿ.

ವಾಹನ ನಿಷೇಧಿಸಲಾಗಿರುವ ಸ್ಥಳಗಳು

ವಾಹನ ನಿಷೇಧಿಸಲಾಗಿರುವ ಸ್ಥಳಗಳು

* ಕ್ವೀನ್ಸ್ ರಸ್ತೆ: ಸಿಟಿಒ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ಎರಡು ಕಡೆ
* ಎಂಜಿ ರಸ್ತೆ : ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ
* ಲಿಂಕ್ ರಸ್ತೆ: ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆಯವರೆಗೆ
* ರಾಜಭವನ ರಸ್ತೆ: ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆ
* ಕ್ರೀಡಾಂಗಣದ ಕಾಂಪೌಂಡಿಗೆ ಹೊಂದಿಕೊಂಡಂತೆ ರಸ್ತೆಯ ಎರಡೂ ಕಡೆ
* ಕಬ್ಬನ್ ರಸ್ತೆ: ಬಿ.ಆರ್.ವಿ ವೃತ್ತದಿಂದ ಡಿಕನ್ಸನ್ ರಸ್ತೆ ಜಂಕ್ಷನ್‌ವರೆಗೆ.
* ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ ಎಸ್ ಬಿಐ ವೃತ್ತದಿಂದ ಆಶಿರ್ವಾದಂ ವೃತ್ತದ ವರೆಗೆ.
* ಮ್ಯೂಸಿಯಂ ರಸ್ತೆಯಲ್ಲಿ , ಎಂಜಿ ರಸ್ತೆಯಿಂದ ಸೆಂಟ್ ಮಾರ್ಕ್ಸ್ ರಸ್ತೆ ವರೆಗೆ ಹಾಗೂ ರೆಸಿಡೆನ್ಸಿ ವರೆಗೆ.
*ಕಸ್ತೂರಬಾ ರಸ್ತೆಯಲ್ಲಿ, ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದ ವರೆಗೆ ಹಾಗೂ ಮಲ್ಯ ರಸ್ತೆಯಲ್ಲಿ ಸಿದ್ಧಲಿಂಗಯ್ಯ ವೃತ್ತದಿಂದ ಆರ್ ಆರ್ ಎಂಆರ್ ವೃತ್ತದ ವರೆಗೆ.
* ಕಬ್ಬನ್ ಪಾರ್ಕ್ ಒಳಾಂಗಣದ ಪ್ರೆಸ್ ಕ್ಲಬ್ ಮುಂಭಾಗ, ಬಾಲಭವನ ಪೌಂಟೇನ್ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ಕಡ್ಡಾಯವಾಗಿ ನಿಷೇಧಿಸಿಲಾಗಿದೆ.
* ವಿಠ್ಠಲ ಮಲ್ಯ ರಸ್ತೆ: ಸಿದ್ದಲಿಂಗಯ್ಯ ವೃತ್ತದಿಂದ ಬಿಷಪ್ ಕಾಟನ್ ಬಾಲಕಿಯರ ಶಾಲೆವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿರುವ ಸ್ಥಳಗಳು

ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿರುವ ಸ್ಥಳಗಳು

* ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ.
* ಸೆಂಟ್ ಜೋಸೆಫ್ ಯುರೋಪಿಯನ್ ಶಲಾ ಮೈದಾನ.
* ಸೆಂಟ್ ಮಾರ್ಕ್ಸ್ ಕ್ಯಾಥಡ್ರಿಲ್ ಚರ್ಚ್, ಕ್ವಿನ್ಸ್ ವೃತ್ತದ ಬಳಿ.
* ಬೌರಿಂಗ್ ಇನ್ಸ್ ಟ್ಯೂಟ್ ಆವರಣ.
* ಬಿ ಆರ್ ವಿ ಪರೇಡ್ ಮೈದಾನ.
* ಶಿವಾಜಿ ನಗರ ಬಸ್ ನಿಲ್ದಾಣದ 1ನೇ ಮಹಡಿ ವಾಹನ ನಿಲುಗಡೆ ಸ್ಥಳ

ಚಿನ್ನಸ್ವಾಮಿ ಕ್ರೀಡಾಂಗಣ ಪ್ರವೇಶ/ನಿರ್ಗಮನ

ಚಿನ್ನಸ್ವಾಮಿ ಕ್ರೀಡಾಂಗಣ ಪ್ರವೇಶ/ನಿರ್ಗಮನ

* ಗೇಟ್ ಸಂಖ್ಯೆ 1ರಿಂದ ಗೇಟ್ ನಂ 6 ಕಬ್ಬನ್ ರಸ್ತೆ ಪಾದಚಾರಿ ಹಾಗೂ ವೀಕ್ಷಕರಿಗೆ ಹೋಗಲು ಅವಕಾಶ ಕಲ್ಪಿಸಿದೆ.
* ಗೇಟ್ ನಂ 7ರಿಂದ ಗೇಟ್ ಸಂಖ್ಯೆ 11ರ ವರೆಗೆ ಲಿಂಕ್ ರಸ್ತೆ ಅನಿಲ್‌ಕುಂಬ್ಳೆ ವೃತ್ತದಿಂದ ಪಾದಚಾರಿ ಮಾರ್ಗದಲ್ಲಿ ಹೋಗಬಹುದು.
* ಗೇಟ್ ನಂ 12 : 12ರಿಂದ 21ರ ವರೆಗೆ ಕ್ವೀನ್ಸ್ ರಸ್ತೆ ಮೂಲಕ ಪ್ರವೇಶ ಕಲ್ಪಿಸಲಾಗಿದೆ.

ಪ್ರೇಕ್ಷಕರಿಗೆ ಬಿಎಂಟಿಸಿ ಬಸ್

ಪ್ರೇಕ್ಷಕರಿಗೆ ಬಿಎಂಟಿಸಿ ಬಸ್

ಕ್ರಿಕೆಟ್ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಬಿಎಂಟಿಸಿ ಬಸ್ ಹಾಗೂ ಮೆಟ್ರೋ ಬಳಸಲು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಹಾಗೂ ಪಂದ್ಯ ಮುಗಿದ ಬಳಿಕ ನಗರದ ಎಲ್ಲಾ ಭಾಗಗಳಿಗೆ ಬಿಎಂಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

English summary
The Bengaluru polic have imposed restrictions on roads in and around M Chinnaswamy Stadium for India vs Australia 2nd Test match held on March 04.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X