ದಕ್ಷ ಅಧಿಕಾರಿ ಟ್ರಾಫಿಕ್ ಡಿಐಜಿ ಡಿ.ರೂಪಾ ಗೆ ಪಾಕಿಸ್ತಾನದಿಂದ ಬಂತು ಕಾಲ್

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 07 : ರಾಜ್ಯದ ದಕ್ಷ ಪೊಲೀಸ್ ಅಧಿಕಾರಿ, ಮಾಜಿ ಕಾರಾಗೃಹ ಡಿಐಜಿ ಹಾಲಿ ಟ್ರಾಫಿಕ್ ಇಲಾಖೆ ಡಿಐಜಿ ಡಿ.ರೂಪ ಅವರಿಗೆ ಪಾಕಿಸ್ತಾನದಿಂದ ಕರೆಯೊಂದು ಬಂದಿದೆ.

ಹೌದು, +92 ನಿಂದ ಪ್ರಾರಂಭವಾಗುವ ಸಂಖ್ಯೆಯಿಂದ ಕರೆ ಬಂದಿದ್ದು, ಇದು ಪಾಕಿಸ್ತಾನದ ಕಂಟ್ರಿ ಕೋಡ್ ಆಗಿದೆ. ತಮಗೆ ಕರೆ ಬಂದ (+00923016545867)ಸಂಖ್ಯೆಯನ್ನು ಟ್ವಿಟರ್ ನಲ್ಲಿ ಪ್ರಕಟಿಸಿರುವ ಡಿ.ರೂಪ ಈ ರೀತಿಯ ಕರೆಗಳಿಂದ ಎಚ್ಚರದಿಂದಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಮಾನನಷ್ಟ ಮೊಕದ್ದಮೆ ಬೆನ್ನಲ್ಲೇ ಎಸಿಬಿ ತನಿಖೆಗೆ ಡಿ. ರೂಪಾ ಆಗ್ರಹ

'ಇದು ಪಾಕಿಸ್ತಾನದಿಂದ ಬಂದ ವಂಚಕ ಕರೆ, ಇಂತಹಾ ಕರೆಗಳಿಂದ ಪೊಲೀಸರು ಹೊರತಾಗಿಲ್ಲ, ದಯವಿಟ್ಟು +92 ಸಂಖ್ಯೆಯಿಂದ ಪ್ರಾರಂಭವಾಗುವ ಸಂಖ್ಯೆಯಿಂದ ಕರೆ ಬಂದರೆ ಎಚ್ಚರವಾಗಿರಿ ಎಂದು ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

Traffic DIG D Roopa gets fraudstar call from Pakistan

ತಮ್ಮ ಪೋಸ್ಟ್ ನೊಂದಿಗೆ ಈ ರೀತಿಯ ಕರೆಗಳ ವಂಚಕತನದ ಬಗ್ಗೆ ಮಾಹಿತಿ ಉಳ್ಳ ಆಂಗ್ಲ ಪತ್ರಿಕೆಯೊಂದರ ವರದಿಯನ್ನೂ ಅಟ್ಯಾಚ್ ಕೂಡ ಮಾಡಿದ್ದಾರೆ.

ಸಾಮಾನ್ಯವಾಗಿ ಇಂತಹಾ ಕರೆಗಳು ಪಾಕಿಸ್ತಾನದಿಂದ ಬರುತ್ತವೆ. ಕೆಲವೊಮ್ಮೆ ಈ ಕರೆಗಳನ್ನು ಸ್ವೀಕರಿಸಿದ ತಕ್ಷಣ ನಿಮ್ಮ ಖಾತೆಯಲ್ಲಿರುವ ಮೊಬೈಲ್ ಬ್ಯಾಲೆನ್ಸ್ ಖಾಲಿಯಾಗಿಬಿಡುತ್ತದೆ. ಅಥವಾ ಅವರೇ ಏನಾದರೂ ಕತೆ ಹೆಣೆದು ಹಣ ಕೀಳಲು ಪ್ರಯತ್ನಿಸುತ್ತಾರೆ. ಅಥವಾ ಯಾವುದಾದರೂ ಹಗರಣದೊಳಕ್ಕೆ ನಿಮ್ಮನ್ನು ಸಿಕ್ಕಿ ಹಾಕಿಸಲು ಈ ರೀತಿಯ ಕರೆಗಳು ಬರುತ್ತವೆ ಎನ್ನುತ್ತಾರೆ ಸೈಬರ್ ಕ್ರೈಮ್ ಅಧಿಕಾರಿಗಳು.

ಈ ಕರೆಗಳು ಪಾಕಿಸ್ತಾನದಿಂದಲೇ ಬರಬೇಕೆಂದೇನಿಲ್ಲ, ಕಂಪ್ಯೂಟರ್ ಮುಖಾಂತರ ಪಾಕಿಸ್ತಾನದ ಕಂಟ್ರಿ ಕೋಡ್ ಬಳಸಿ ಬೇರೆ ದೇಶಗಳಿಂದಲೂ ಕರೆ ಬರಬಹುದು, ಈ ರೀತಿಯ ಕರೆ ಬಂದಾಗ ಕರೆ ಸ್ವೀಕರಿಸದಿರುವುದು ಒಳ್ಳೆಯದು ಎನ್ನುತ್ತಾರೆ ಸೈಬರ್ ಅಧಿಕಾರಿಗಳು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
'I just got a call from +00923016545867, fraudster from Pakistan. It still continues unabated. Even police officers not spared!! Beware of numbers starting with +92' Traffic DIG D Roopa wrote on twitter.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ