ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದು, ನಾಳೆ ಮೆಟ್ರೋ ಸಮಯದಲ್ಲಿ ಬದಲಾವಣೆ

|
Google Oneindia Kannada News

Recommended Video

ಬೆಂಗಳೂರಿನ ಜನತೆಗೆ ನಮ್ಮ ಮೆಟ್ರೋ ಕೊಟ್ಟಿದೆ ಒಂದು ಮುಖ್ಯ ಮಾಹಿತಿ | Oneindia Kannada

ಬೆಂಗಳೂರು, ಮಾರ್ಚ್ 10: ನಮ್ಮ ಮೆಟ್ರೋ ಹಳಿ ನಿರ್ವಹಣೆ ಕಾಮಗಾರಿಗಾಗಿ ಮಾ.10ರಂದು 45 ನಿಮಿಷ ಮುಂಚಿತವಾಗಿ ಸೇವೆ ಸ್ಥಗಿತಗೊಳ್ಳಲಿದೆ.

ಮಾ.22ಕ್ಕೆ ಮೆಟ್ರೋ ರೈಲು ಸಿಬ್ಬಂದಿ ಮುಷ್ಕರ ಖಚಿತ ಮಾ.22ಕ್ಕೆ ಮೆಟ್ರೋ ರೈಲು ಸಿಬ್ಬಂದಿ ಮುಷ್ಕರ ಖಚಿತ

ಮಾ.11ರಂದು ಎರಡೂವರೆ ಗಂಟೆ ತಡವಾಗಿ ಸೇವೆ ಆರಂಭವಾಗಲಿದೆ. ಇತ್ತೀಚೆಗೆ ಯಲಚೇನಹಳ್ಳಿ ನಿಲ್ದಾಣದ ಹಳಿ ಕ್ರಾಸ್ ಓವರ್ ಬಳಿ ಆತಂಕ ಸೃಷ್ಟಿಯಾಗಿತ್ತು. ಈ ಭಾಗದಲ್ಲಿ ಒಂದು ದಿನ ಮೆಟ್ರೋ ಸೇವೆ ಸ್ಥಗಿತಗೊಳಿಸಿ ಕ್ರಾಸ್ ಓವರ್ ಬದಲಿಸಲಾಗಿತ್ತು, ಬಿರುಕು ಕಾಣಿಸಿಕೊಂಡ ನಂತರ ಕೆಲ ದಿನಗಳವರೆಗೆ ಇಡೀ ಮಾರ್ಗದಲ್ಲಿ ಹಳಿಯನ್ನು ಪರಿಶೀಲಿಸಲಾಗಿದೆ. ಈಗ ಮತ್ತೊಮ್ಮೆ ಹಳಿಯ ಪರಿಶೀಲನೆ ನಡೆಸಿ ಅಗತ್ಯವಿದ್ದರೆ ಕಾಮಗಾರಿ ನಡೆಸಲಾಗುತ್ತದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

Track maintenance: Metro service close early today

ಇದಕ್ಕಾಗಿ ಮೆಟ್ರೋ ಸಂಚಾರವನ್ನು ಶನಿವಾರ ರಾತ್ರಿ 11ರ ಬದಲು 10.15ಕ್ಕೆ ಸ್ಥಗಿತಗೊಳಿಸಲಾಗುತ್ತದೆ. ಭಾನುವಾರ ಬೆಳಗ್ಗೆ 8 ಗಂಟೆ ಬದಲು 10.30ಗಂಟೆಗೆ ಸೇವೆ ಆರಂಬಿಸಲಾಗುತ್ತದೆ. ನಾಗಸಂದ್ರ, ಯಲಚೇನಹಳ್ಳಿ , ಬೈಯಪ್ಪನಹಳ್ಳಿ, ಮೈಸೂರು ರಸ್ತೆ ಟರ್ಮಿನಲ್ ನಿಲ್ದಾಣಗಳಲ್ಲಿ ಶನಿವಾರ ರಾತ್ರಿ 10.15ಕ್ಕೆ ಕೊನೆಯ ರೈಲು ಹೊರಡಲಿದೆ. ಇದೇ ನಿಲ್ದಾಣಗಳಿಂದ ಭಾನುವಾರ ಬೆಳಗ್ಗೆ 10.30ಕ್ಕೆ ಮೊದಲ ರೈಲು ಪ್ರಾರಂಭವಾಗಲಿದೆ.

English summary
Due to track maintenance work BMRCL has made some changes in Metro service on March 10 and 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X