ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಡದಿ: ಟೊಯೋಟಾ ಎರಡು ಘಟಕ ಲಾಕೌಟ್

By Mahesh
|
Google Oneindia Kannada News

ರಾಮನಗರ, ಮಾ.17: ಬಿಡದಿಯಲ್ಲಿರುವ ಟೊಯೋಟಾ ಕಿರ್ಲೊಸ್ಕರ್ ಮೋಟರ್ಸ್ ನ ಎರಡು ಘಟಕ ಗಳನ್ನು ಲಾಕೌಟ್ ಎಂದು ಸಂಸ್ಥೆ ಘೋಷಿಸಿದೆ. ವೇತನ ಪರಿಷ್ಕರಣೆ ವಿಚಾರದಲ್ಲಿ ಆಡಳಿತ ಮಂಡಳಿ ಮತ್ತು ನೌಕರರ ನಡುವೆ ಭಾನುವಾರ ನಡೆದ ಮಾತುಕತೆ ಮುರಿದು ಬಿದ್ದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟರ್ ಸಂಸ್ಥೆ ಪ್ರಕಟಿಸಿದೆ.

ಟೊಯೋಟಾ ಕಿರ್ಲೋಸ್ಕರ್ ನ ಎರಡು ಘಟಕಗಳು ಬಿಡದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು, ಪ್ರತಿ ವರ್ಷ ಸುಮಾರು 3,10,000 ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಕಾರ್ಮಿಕ ಮುಷ್ಕರದಿಂದ ಕಳೆದ 25 ದಿನಗಳಿಂದ ಉತ್ಪಾದನೆ ನಿಲ್ಲಿಸಲಾಗಿದೆ.ವೇತನ ಪರಿಷ್ಕರಣೆಗಾಗಿ ಕಳೆದ 10 ತಿಂಗಳಿನಿಂದ ಕಾರ್ಮಿಕರು ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ, ಈಗ ಲಾಕೌಟ್ ನಿಂದಾಗಿ ಸುಮಾರು 5 ಸಾವಿರಕ್ಕೂ ಅಧಿಕ ಕಾರ್ಮಿಕರ ಬದುಕು ಅತಂತ್ರವಾಗಿದೆ.

ಪ್ರಸಕ್ತ ಹಣಕಾಸು ವರ್ಷ(FY 14)ದಲ್ಲಿ ವೇತನ ಪರಿಷ್ಕರಣೆ ಬಗ್ಗೆ ಹತ್ತು ತಿಂಗಳಿನಿಂದ ನೌಕರರು ಮತ್ತು ಆಡಳಿತ ಮಂಡಳಿ ನಡುವೆ ಮಾತುಕತೆ ನಡೆಯುತ್ತಿತ್ತು. ಎರಡೂ ಪಕ್ಷಗಳ ನಡುವೆ ಈ ಬಗ್ಗೆ ಯಾವುದೇ ರೀತಿಯ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ. ಕಾರ್ಮಿಕ ಇಲಾಖೆ ಕೂಡ ಏಳು ತ್ರಿಪಕ್ಷೀಯ ಮಾತುಕತೆ ನಡೆಸಿದರೂ ಯಶಸ್ವಿಯಾಗಲಿಲ್ಲ. ಹೀಗಾಗಿ ಲಾಕೌಟ್ ‌ಗೆ ನಿರ್ಧರಿಸಲಾಗಿದೆ ಎಂದು ಆಡಳಿತ ಮಂಡಳಿ ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

Toyota declares lockout at Bidadi as labour trouble lingers

ಬಿಡದಿ ಘಟಕದ ಬಗ್ಗೆ ಒಂದಿಷ್ಟು:
* 1997ರ ಅಕ್ಟೋಬರ್ ‌ನಲ್ಲಿ ಘಟಕ ಸ್ಥಾಪನೆ
* ಜಪಾನಿನ ಟಯೋಟಾ ಮತ್ತು ಪುಣೆ ಮೂಲದ ಕಿರ್ಲೊಸ್ಕರ್ ಸಂಸ್ಥೆ ನಡುವೆ 89:11 ಮಾದರಿಯಲ್ಲಿ 2 ಘಟಕಗಳ ಆರಂಭ
* 6,400 ಮಂದಿಗೆ ಉದ್ಯೋಗ, 432 ಎಕರೆ ಭೂಮಿ ವಿಸ್ತೀರ್ಣದ ಘಟಕ
* ಮೊದಲ ಕಾರು ಉತ್ಪಾದನೆಯಾದ ವರ್ಷ- 1999 ಡಿಸೆಂಬರ್
* 432 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಿರುವ 2 ಘಟಕಗಳು
* ಎರಡು ಘಟಕಗಳಿಂದ ಫಾರ್ಚುನರ್, ಇನ್ನೋವಾ, ಕರೋಲಾ ಆಲ್ಟೀಸ್, ಇಟಿಯೋಸ್, ಇಟಿಯೋಸ್ ಲಿವಾ, ಕ್ಯಾಮ್ರಿ ಮುಂತಾದ ಕಾರುಗಳು ಉತ್ಪಾದನೆ ಮಾಡಲಾಗುತ್ತಿತ್ತು.
* ಪ್ರಾಡೋ, ಲ್ಯಾಂಡ್ ಕ್ರೂಸರ್, ಹೈಬ್ರೀಡ್ ಸೆಡಾನ್ ಪಿರ್ಯಸ್ ಮುಂತಾದ ಎಸ್ ಯುವಿಗಳನ್ನು ಕೂಡಾ ಕಂಪನಿ ಮಾರಾಟ ಮಾಡುತ್ತಿತ್ತು.

ಮುಂದೇನು?: ಲಾಕೌಟ್ ಘೋಷಣೆ ಮಾಡಲಾಗಿದ್ದರೂ, ಸೌಹಾರ್ದಯುತವಾಗಿ ಮಾತುಕತೆ ಮಾಡಿ ಪರಿಸ್ಥಿತಿ ತಿಳಿಗೊಳಿಸಲು ನೌಕರರ ವರ್ಗ ಯತ್ನಿಸುತ್ತಿದೆ. ನೌಕರರ ಒಂದು ವರ್ಗ ಉತ್ಪಾದನೆ ತಡೆಯಲು ಸಿದ್ಧವಿದೆ ಎಂದು ಆಡಳಿತ ಮಂಡಳಿ ಹೇಳಿದೆ. ಸದ್ಯ ನಷ್ಟವಿಲ್ಲದೆ ಕಂಪನಿ ನಡೆಯುತ್ತಿದೆ. ಹೀಗಾಗಿ ವೇತನ ಪರಿಷ್ಕರಣೆ ಸಾಧ್ಯತೆ ಬಗ್ಗೆ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ನೌಕರರು ಒಪ್ಪದಿದ್ದರೂ ಇಲ್ಲಿನ ಘಟಕವನ್ನು ತಮಿಳುನಾಡಿಗೆ ಶಿಫ್ಟ್ ಮಾಡುವ ಸಾಧ್ಯತೆಯೂ ಇದೆ. ಅನೇಕರು ನೌಕರರು ಕಂಪನಿ ಆವರಣದಲ್ಲಿ ಕುಟುಂಬ ಸದಸ್ಯರ ಸಮೇತ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. (ಪಿಟಿಐ)

English summary
Toyota Kirloskar Motor declared lockout at its two manufacturing plants at Bidadi near Bangalore, following the failure of talks between the management and the union over wage negotiations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X