ಕೆರೆ ಸಂರಕ್ಷಣೆಗೆ ವಿದ್ಯಾರ್ಥಿಗಳಿಂದ ವಿಚಾರ ಮಂಡನೆ

Written By:
Subscribe to Oneindia Kannada

ಬೆಂಗಳೂರು. ಸೆಪ್ಟಂಬರ್ 02: ಬೆಂಗಳೂರಿನ ಸರ್ಜಾಪುರ ರಸ್ತೆಯ ಸೌಳು ಕೆರೆ ಜಾಗೃತಿ ಅಭಿಮಾನದ ಮೊದಲ ಹಂತಕ್ಕೆ ಶನಿವಾರ ಸೆಪ್ಟೆಂಬರ್ 3 ರಂದು ಚಾಲನೆ ಸಿಗಲಿದೆ. ಬೆಂಗಳೂರಿನ 20 ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ವಿವಿಧ ವಿಚಾರಗಳನ್ನು ಮಂಡಿಸಲಿದ್ದಾರೆ.

ಯುನೈಟೆಡ್ ವೇ ಬೆಂಗಳೂರು ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು ಸರ್ಕಾರದಿಂದ 1 ರಿಂದ 12 ಶ್ರೇಣಿ ಮಾನ್ಯತೆ ಪಡೆದಿರುವ ಪ್ರಮುಖ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.[ಹಿಂದೆ ಕೆರೆ ಪ್ರದೇಶ ಗುಳಂ, ಈಗ ಕೆರೆ ಒತ್ತುವರಿ ವರದಿಯೇ ಗುಳುಂ?]

lake

ಸದ್ಯದ ವೈಜ್ಞಾನಿಕ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ವಿಚಾರ ಮಂಡನೆ ಮಾಡಲಿದ್ದಾರೆ. ಕರೆ ಸಂರಕ್ಷಣೆ ಪರಿಸರ ಸಂರಕ್ಷಣೆ ಕುರಿತಾದ ವಿಚಾರಗಳನ್ನು ಮಂಡನೆ ಮಾಡಲಿದ್ದಾರೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಅಂತಾರಾಷ್ಟ್ರೀಯ ಮಟ್ಟದ ತೀರ್ಪುಗಾರರು ಲೆಕ್ಕ ಹಾಕಲಿದ್ದಾರೆ.
ವಿದ್ಯುತ್ ಶಕ್ತಿ, ನವಿಕರಿಸಲ್ಪಡುವ ಸಂಪನ್ಮೂಲಗಳು, ವಾಹನ ವ್ಯವಸ್ಥೆ ಸುಧಾರಣೆ, ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ಅನೇಕ ವಿಚಾರಗಳನ್ನು ವಿದ್ಯಾರ್ಥಿಗಳು ಮಂಡನೆ ಮಾಡಲಿದ್ದಾರೆ.[ಬೆಂಗಳೂರಿಗೆ ಮುಂದೇನು ಕಾದಿದೆಯೋ ಭಗವಂತಾ!]

ವಿಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಪರಿಸರ ತಜ್ಞೆ ಡಾ. ಹರಿಣಿ ನಾಗೇಂದ್ರ, ರಾಮನ್ ವಿಜ್ಞಾನ ಸಂಸ್ಥೆಯ ಭೌತ ವಿಜ್ಞಾನಿ ಡಾ. ಲಕ್ಷ್ಮೀ ಸರಿಪಲ್ಲಿ, ವಿಜ್ಞಾನಿ ಕೆ ವಿ ಗುರುರಾಜ, SABIC ಸಂಶೋಧನಾ ನಿರ್ದೇಶಕ ಡಾ ಸುಧೀಂದ್ರ ಕುಲಕರ್ಣಿ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.[ಬೆಳ್ಳಂದೂರು ಕೆರೆ ಮತ್ತೆ ನೊರೆ ಉಗುಳಲು ಯಾರು ಕಾರಣ?]

ಯುನೈಟೆಡ್ ವೇ ಬೆಂಗಳೂರು, ಬಿಬಿಎಂಪಿ ಕೆರೆ ಉಳಿವಿಗೆ ಕೆಲಸ ಮಾಡುತ್ತಿವೆ. ಮಹದೇವಪುರ ಎನ್ ವಿರಾನ್ ಮೆಂಟ್ ಪ್ರೊಟೆಕ್ಷನ್ ಆಂಡ್ ಡೆವಿಲಪ್ ಮೆಂಟ್ ಟ್ರಸ್ಟ್ ಆಯೋಜಿಸಿರುವ ಕಾರ್ಯಕ್ರಮಕ್ಕೆ Genpact, Maxim Integrated, Four Fountains Spa ಇನ್ಫೋಸಿಸ್ ಫೌಂಡೇಶನ್ ಮತ್ತು ಯುನೈಟೆಡ್ ವೇ ಬೆಂಗಳೂರು ಸಹಕಾರ ನೀಡಲಿವೆ.

ದಿನಾಂಕ: 3 ಸೆಪ್ಟೆಂಬರ್
ಸಮಯ: ಬೆಳಗ್ಗೆ 9.30-6.30
ಉಚಿತ ಪ್ರವೇಶ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On Saturday, September 3rd, 2016, over 20 schools from Bangalore will participate in the first edition of the Soul Kere Science Fair. The participating students are from grades 1 to 12 of the government, international and state schools in the neighbourhood. The children will conduct live experiments that explore the environment and the ecology around them, specifically in the context of the venue -- Soul Kere.
Please Wait while comments are loading...