ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹ : ಚಾಲಕರ ವಿರೋಧ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 10 : ಟೋಲ್ ಸಂಗ್ರಹ ವಿಷಯದಲ್ಲಿ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ವಾಹನ ಚಾಲಕರು ಮತ್ತು ಟೋಲ್ ಸಂಗ್ರಹಕರ ನಡುವೆ ಭಾರೀ ಜಟಾಪಟಿ ನಡೆದಿದೆ.

ನವೆಂಬರ್ 11ರ ಮಧ್ಯರಾತ್ರಿಯವರೆಗೆ ಯಾವುದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಗ್ರಹಿಸುವಂತಿಲ್ಲ, ವಾಹನ ಚಾಲಕರು ಟೋಲ್ ಕಟ್ಟುವಂತಿಲ್ಲ ಎಂದು ಕೇಂದ್ರ ಭೂ ಮತ್ತು ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿತ್ತು.

Toll collected on Nice road : Vehicle owners protest

500 ರು. ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ನವೆಂಬರ್ 8ರ ಮಧ್ಯರಾತ್ರಿಯಿಂದಲೇ ರದ್ದು ಪಡಿಸಿರುವುದರಿಂದ, ಈ ಕಾರಣದಿಂದಾಗಿ ದೇಶಾದ್ಯಂತ ಉಂಟಾಗಿರುವ ತಾತ್ಕಾಲಿಕ ಹಣದ ಬಿಕ್ಕಟ್ಟು ಉಂಟಾಗಿರುವುದರಿಂದ ಟೋಲ್ ಸಂಗ್ರಹಿಸಬಾರದೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಆದೇಶಿಸಿದ್ದರು.

ಆದರೆ, ಈ ಆದೇಶ ನೈಸ್ ರಸ್ತೆಯ ಟೋಲ್ ಸಂಗ್ರಹಕರಿಗೆ ಬಿದ್ದಂತಿಲ್ಲ. ಟೋಲ್ ಸಂಗ್ರಹಿಸುವಂತಿಲ್ಲ ಎಂದು ವಾಹನ ಚಾಲಕರು ಎಷ್ಟು ತಿಳಿವಳಿಕೆ ಹೇಳಲು ಯತ್ನಿಸಿದರೂ ಅಲ್ಲಿನ ನಿರ್ವಾಹಕರಿಗೆ ಮನವರಿಕೆಯಾಗಿಲ್ಲ. ಆದ್ದರಿಂದ ಅಲ್ಲಿ ವಾಹನ ಚಾಲಕರು ಮತ್ತು ನಿರ್ವಾಹಕರ ನಡುವೆ ವಾಗ್ವಾದ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಿಸಬಾರದು ಎಂದು ಹೇಳಿದ್ದಾರೆಯೇ ಹೊರತು ಬೇರೆ ಟೋಲ್ ಗಳಲ್ಲಿ ಸಂಗ್ರಹಿಸಬಾರದು ಎಂದು ಎಲ್ಲೂ ಹೇಳಿಲ್ಲ ಎಂಬುದು ಅವರ ವಾದ. ಈ ಗೊಂದಲಕ್ಕೆ ಪರಿಹಾರ ನೀಡುವವರು ಯಾರು?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Though central govt has given instruction not to collect toll fee on national highways till November 11 midnight, in view of chaos created because of ban on Rs 500 and Rs 1000 notes, Nice company is collecting toll fee from drivers. Vehicle owners protested against it.
Please Wait while comments are loading...