ಬಿಎಂಟಿಸಿ ಬಸ್ಸುಗಳ ಪ್ರಯಾಣ ದರ ಹೆಚ್ಚಳ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 28 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹವಾನಿಯಂತ್ರಿತ ಮತ್ತು ಸಾಮಾನ್ಯ ಬಸ್ಸುಗಳ ದರವನ್ನು ಹೆಚ್ಚಳ ಮಾಡಿದೆ. ರಾಷ್ಟ್ರೀಯ ಹೆದ್ದಾರಿ ದೇವನಹಳ್ಳಿ ಟೋಲ್ ಮಾರ್ಗವಾಗಿ ಸಂಚಾರ ನಡೆಸುವ ಬಸ್ಸುಗಳಲ್ಲಿ ಪ್ರಯಾಣಿಸುವ ಜನರಿಗೆ ದರ ಹೆಚ್ಚಳದ ಬಿಸಿ ತಟ್ಟಿದೆ.

ನವಯುಗ ಟೋಲ್ ಸಂಸ್ಥೆಯವರು ಟೋಲ್ ದರ ಹೆಚ್ಚಿಸಿದ್ದಾರೆ. ಹಿಂದೆ ಸಾಮಾನ್ಯ ಬಸ್ಸುಗಳಿಗೆ 2 ರೂ. ಮತ್ತು ಹವಾನಿಯಂತ್ರಿತ ಬಸ್ಸುಗಳಿಗೆ 10 ರೂ. ಟೋಲ್ ದರವಿತ್ತು. ಇದನ್ನು ಹೆಚ್ಚಳ ಮಾಡಲಾಗಿದ್ದು, ಪ್ರಸ್ತುತ ಸಾಮಾನ್ಯ ಬಸ್ಸುಗಳು 4 ರೂ., ಮತ್ತು ಹವಾನಿಯಂತ್ರಿತ ಬಸ್ಸುಗಳು 11 ರೂ. ಟೋಲ್ ಪಾವತಿ ಮಾಡಬೇಕು. [ವೊಲ್ವೋ ಬಸ್ ಪ್ರಯಾಣ ದರ ಹೆಚ್ಚಳ?]

bmtc

ಬಿಎಂಟಿಸಿ ಟೋಲ್ ದರ ಹೆಚ್ಚಳವನ್ನು ಪ್ರಯಾಣಿಕರ ಮೇಲೆ ಹೇರಿದ್ದು, ಟಿಕೆಟ್ ದರ ಹೆಚ್ಚಳ ಮಾಡಿದೆ. ಬುಧವಾರದಿಂದಲೇ ನೂತನ ದರ ಜಾರಿಗೆ ಬಂದಿದೆ. ದೇವನಹಳ್ಳಿ ಟೋಲ್ ಮಾರ್ಗವಾಗಿ ಪ್ರತಿನಿತ್ಯ 130 ಸಾಮಾನ್ಯ ಬಸ್ ಮತ್ತು 70 ಹವಾನಿಯಂತ್ರಿತ ಬಸ್ಸುಗಳು ಸಂಚಾರ ನಡೆಸುತ್ತವೆ. ಈ ಬಸ್ಸುಗಳಿಗೆ ದರ ಹೆಚ್ಚಳ ಬಿಸಿ ತಟ್ಟಿದೆ. [ಬೆಂಗಳೂರು ಸಾರ್ವಜನಿಕ ಸಾರಿಗೆ ಎಲ್ಲ ಮಾಹಿತಿ ಅಂಗೈನಲ್ಲಿ]

ಪ್ರಯಾಣ ದರ ಎಷ್ಟು? : ಕೆಂಪೇಗೌಡ ಬಸ್ ನಿಲ್ದಾಣದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ಹವಾನಿಯಂತ್ರಿತ ಬಸ್ಸುಗಳ ದರ 220 ರೂ. (ಟೋಲ್ ದರ ಸೇರಿಸಿ) ಆಗಿತ್ತು. ಸಾಮಾನ್ಯ ಬಸ್ಸುಗಳ ಪ್ರಯಾಣ ದರ ಟೋಲ್ ಸೇರಿ 30 ರೂ. ಆಗಿತ್ತು. ಪರಿಷ್ಕೃತ ದರದ ಅನ್ವಯ ಹವಾನಿಯಂತ್ರಿತ ಬಸ್ಸುಗಳ ದರ 221 ರೂ. ಮತ್ತು ಸಾಮಾನ್ಯ ಬಸ್ಸುಗಳ ದರ 34 ರೂ. ಆಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore Metropolitan Transport Corporation (BMTC) hiked bus fare after Navayuga Devanahalli Tollway Pvt Ltd (NDTL) hiked toll charges on Kempegowda International Airport road.
Please Wait while comments are loading...