ಲೋಕಾಯುಕ್ತ ನೇಮಕಕ್ಕೆ ಸಭೆ, ಮತ್ತೆ ನಾಯಕ್ ಹೆಸರು

Posted By:
Subscribe to Oneindia Kannada

ಬೆಂಗಳೂರು. ಜನವರಿ 9: ಲೋಕಾಯುಕ್ತರನ್ನು ನೇಮಕ ಮಾಡುತ್ತಾರೊ ಇಲ್ಲವೋ ಎಂಬ ಅನುಮಾನಕ್ಕೆ ಈಗ ಉತ್ತರ ಸಿಕ್ಕಿದ್ದು ಮತ್ತೆ ನ್ಯಾ. ಎಸ್.ಆರ್. ನಾಯಕ್ ಅವರ ಹೆಸರನ್ನೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ಶಿಫಾರಸು ಮಾಡಿ ಇಂದು ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

ನ್ಯಾ| ವಿಶ್ವನಾಥ ಶೆಟ್ಟಿ ನೇಮಕಕ್ಕೆ ಸಾಮಾಜಿಕ ಕಾರ್ಯಕರ್ತ ಎಸ್‌.ಆರ್‌. ಹಿರೇಮಠ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ ಮರುದಿನವೇ ಈ ಬೆಳವಣಿಗೆ ನಡೆದಿದ್ದು, ಲೋಕಾಯುಕ್ತ ಉನ್ನತ ಮಟ್ಟದ ಸಭೆಯನ್ನು ನಡೆಸಲಿದ್ದು ನ್ಯಾ. ನಾಯಕ್ ಅವರ ಹೆಸರನ್ನು ಸರಕಾರ ಶಿಫಾರಸು ಮಾಡಲಿದೆ ಎನ್ನಲಾಗಿದೆ. ನಾಯಕ್ ಅವರ ಹೆಸರು ಮತ್ತೆ ಪ್ರಸ್ತಾಪವಾದರೆ ಸರಕಾರಕ್ಕೆ ಮತ್ತೆ ಸಂಘರ್ಷ ಎದುರಾಗಲಿದೆ.[ಲೋಕಾಯುಕ್ತರ ಪದಚ್ಯುತಿ ಕಾನೂನು ಪ್ರಕ್ರಿಯೆಗಳೇನು?]

lokayukta

ಲೋಕಾಯುಕ್ತರ ಆಯ್ಕೆ ಕುರಿತು ಇಂದು( ಸೋಮವಾರ) ಮಧ್ಯಾಹ್ನ 1:30 ಕುಮಾರ ಕೃಪಾ ಅತಿಥಿ ಗೃಹದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉನ್ನತ ಮಟ್ಟದ ಸಭೆ ನಡೆಯಲಿದ್ದು ಈ ಸಭೆಯಲ್ಲಿ ನ್ಯಾ. ನಾಯಕ್ ಅವರ ಹೆಸರನ್ನು ಸಿದ್ದರಾಮಯ್ಯ ಎತ್ತಲಿದ್ದಾರೆ ಎನ್ನಲಾಗಿದ್ದು, ಈ ಹಿಂದೆ ಬಿಜೆಪಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ ರಾಜ್ಯಪಾಲರು ಎರಡು ಬಾರಿ ಶಿಫಾರಸು ಅನೂರ್ಜಿತಗೊಳಿಸಿದ್ದರು.[ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ನ್ಯಾ.ಭಾಸ್ಕರರಾವ್‌ಗೆ ಸಂಕಷ್ಟ]

ನ್ಯಾಯಮೂರ್ತಿ ಭಾಸ್ಕರ್ ರಾವ್ ರಾಜೀನಾಮೆ ಬಳಿಕ ಕಳೆದ 13 ತಿಂಗಳಿಂದ ಖಾಲಿ ಇರುವ ಲೋಕಾಯುಕ್ತ ಸ್ತಾನಕ್ಕೆ ನ್ಯಾ. ವಿಕ್ರಂಜಿತ್ ಸೇನ್ ಹೆಸರು ಕೇಳಿ ಬಂದಿತ್ತು. ನಂತರ ನಾಯಕ್ ಹೆಸರು ಕೇಳಿಬಂದು ರಾಜ್ಯಪಾಲರು ತಿರಸ್ಕರಿಸಿದ್ದರು. ಬಳಿಕ ವಿಶ್ವನಾಥ ಶೆಟ್ಟಿ ಹೆಸರು ಕೇಳಿ ಬಂದಿದ್ದು ಸಾಮಾಜಿಕ ಕಾರ್ಯಕರ್ತ ಹಿರೇಮಠ್ ಅವರು ವಿರೋಧ ವ್ಯಕ್ತ ಪಡಿಸಿದ್ದರು. ಈ ಮತ್ತೆ ನ್ಯಾ. ನಾಯಕ್ ಹೆಸರು ಕೇಳಿ ಬರುತ್ತಿದೆ. ಮತ್ತೆ ಏನೇನಾಗುತ್ತದೆಯೋ ನೋಡಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Today(Monday) is the meeting of lokayukta selecton at 1.30 in kumarakrupa guesthours in bengaluru. Ones again The name of Justice S.R.Nayak has been doing the rounds for the post of the Karnataka Lokayukta.
Please Wait while comments are loading...