ಬೆಂಗಳೂರಿನಲ್ಲಿ ಟೈಟಾನ್ ನಿಂದ 6 ಹೊಸ ಮಳಿಗೆ ಆರಂಭ

Posted By:
Subscribe to Oneindia Kannada

ಬೆಂಗಳೂರು, ಜೂನ್ 17: ಟೈಟಾನ್ ಕಂಪನಿ ಲಿಮಿಟೆಡ್ ನ ಮುಂಚೂಣಿ ಕೈಗಡಿಯಾರ ರೀಟೇಲರ್ ವರ್ಲ್ಡ್ ಆಫ್ ಟೈಟಾನ್, ಬೆಂಗಳೂರಿನಲ್ಲಿ 6 ಹೊಸ ಮಳಿಗೆಗಳಿಗೆ ಚಾಲನೆ ನೀಡಿ ಸಂಭ್ರಮಿಸಿದೆ. ಮಾರತಹಳ್ಳಿ, ಮಲ್ಲೇಶ್ವರಂ, ಆರ್ ಟಿ ನಗರ, ಜಯನಗರ, ಕೋರಮಂಗಲ ಮತ್ತು ಎಚ್‍ಆರ್ ಬಿಆರ್ ಲೇಔಟ್ ಗಳಲ್ಲಿ ಹೊಸ ಮಳಿಗೆ ಆರಂಭಗೊಂಡಿದೆ.

750 ರಿಂದ 3,500 ಚದರ ಅಡಿ ಜಾಗದಲ್ಲಿ ವ್ಯಾಪಿಸಿರುವ ಮಳಿಗೆ ಟೈಟಾನ್‍ನ ಪರಿಷ್ಕೃತ ರೀಟೇಲ್ ಗುರುತನ್ನು ಪ್ರತಿಬಿಂಬಿಸಲಿದ್ದು, ಶಾಪಿಂಗ್ ಅನುಭವವನ್ನು ಬಲಗೊಳಿಸಲು ನಿರ್ಧರಿಸಿದೆ ಮತ್ತು ಅನುಭವವನ್ನು ಸುಲಭ, ಪರಿಣಾಮಕಾರಿ ಹಾಗೂ ಆಧುನಿಕವಾಗಿಸಲಿದೆ. ಟೈಟಾನ್, ನೆಬುಲ, ಕ್ಸೈಲಸ್, ಫಾಸ್ಟ್ ಟ್ರ್ಯಾಕ್,ಸೋನಾಟ, ಜೂಪ್ ನೊಂದಿಗೆ ಟೈಟಾನ್ ಐಪ್ಲಸ್ ಮತ್ತು ಟೈಟಾನ್ ಸರಣಿಯ ಬಿಡಿಭಾಗಗಳನ್ನು ಮಳಿಗೆ ಹೊಂದಿರಲಿದೆ. [ಟೈಟಾನ್ ಐ ಪ್ಲಸ್: ಹೊಸ ಬ್ರ್ಯಾಂಡ್ ಐಡೆಂಡಿಟಿ ಅನಾವರಣ]

ಮಲ್ಲೇಶ್ವರಂ ಮಳಿಗೆಗೆ ಚಾಲನೆ ನೀಡಿ ಮಾತನಾಡಿದ ಟೈಟಾನ್ ಕಂಪನಿ ಲಿಮಿಟೆಡ್ ನ ದಕ್ಷಿಣ ಸ್ಥಳೀಯ ವಹಿವಾಟು ಮುಖ್ಯಸ್ಥ ಬಿಜು ಅಲೆಗ್ಸಾಂಡರ್, ಇಂದಿನ ಸಂಭ್ರಮ ನಮಗೆ ಟೈಟಾನ್‍ನಲ್ಲಿ ಅತ್ಯಂತ ಮಹತ್ವದ್ದು. ನಮ್ಮ ರೀಟೇಲ್ ನೆಟ್‍ವರ್ಕ್ ಅನ್ನು ವಿಸ್ತರಿಸುತ್ತಿರುವುದು ಮಾತ್ರವಲ್ಲ, ನಾವು ನಮ್ಮ ಗ್ರಾಹಕರಿಗೆ ಒಂದು ವಿಶಿಷ್ಟ ಗ್ರಾಹಕ ಅನುಭವ ನೀಡುತ್ತಿದ್ದೇವೆ. ನಮ್ಮ ಉತ್ಪನ್ನ ಮತ್ತು ಸೇವೆಯನ್ನು ಅತ್ಯಂತ ಪರಿಣಾಮಕಾರಿ ಮಾರ್ಗದಲ್ಲಿ ಪ್ರದರ್ಶಿಸುತ್ತಿದ್ದೇವೆ. [ಪೊಲೀಸರ ಕಣ್ಣಿಗೆ 'ಸನ್ ಗ್ಲಾಸ್' ಹಾಕಿದ ಟೈಟಾನ್ ಐ]

Titan offers renewed retail experience with six new stores in Bangalore

ಶಾಪಿಂಗ್ ಗೆ ಸಾಕಷ್ಟು ಜಾಗ, 1200ಕ್ಕು ಅಧಿಕ ಉತ್ಪನ್ನಗಳು, ಹಲವಾರು ಅಂತಾರಾಷ್ಟ್ರೀಯ ಬ್ರಾಂಡ್ ನೊಂದಿಗೆ ಮಳಿಗೆ ಸಾಟಿಯಿಲ್ಲದ ಶಾಪಿಂಗ್ ಅನುಭವ ನೀಡುತ್ತದೆ. [ಟೈಟಾನ್ ನಿಂದ ಫೈಬರ್ ಸರಣಿ ಹೊಸ ಗಡಿಯಾರ]

ಟೈಟಾನ್, ಕ್ಸೈಲಸ್, ಟಾಮಿ ಹಿಲ್ಫಿಂಗರ್, ಫಾಸ್ಟ್ ಟ್ರ್ಯಾಕ್, ಟೈಟಾನ್ ಸರಕುಗಳು, ಮತ್ತು ಸೋನಾಟ, ಇಂಟರ್ ನ್ಯಾಷನಲ್ ಬ್ರಾಂಡ್ ಗಳನ್ನು ಈ ಮಳಿಗೆ ಹೊಂದಿದೆ. ಈ ಮಳಿಗೆ ಟೈಟಾನ್‍ನ ಫ್ರೆಂಚ್ ಸುಗಂಧ ಸ್ಕಿನ್‍ನ ಉತ್ಪನ್ನಗಳನ್ನು ಹೊಂದಿದೆ. ಟೈಟಾನ್ ಐಪ್ಲಸ್ ಟೈಟಾನ್, ಎನಿಗ್ಮಾ, ಆಂಡ್ರೆನೊ, ಡ್ಯಾಶ್ ಫ್ರೇಮ್ ಗಳನ್ನು, ಟೈಟಾನ್ ಗ್ಲೇರ್ಸ್ ಮತ್ತು ಫಾಸ್ಟ್ ಟ್ರ್ಯಾಕ್ ಸನ್ ಗ್ಲಾಸ್ ಗಳನ್ನು ಹೊಂದಿದೆ. ಜೊತೆಗೆ ಅಂತಾರಾಷ್ಟ್ರೀಯ ಬ್ರಾಂಡ್ ಗಳಾದ ರೇಬಾನ್, ವೋಗ್, ಟ್ಯಾಗ್ ಊವರ್ ಮೊದಲಾದವುಗಳನ್ನು ಹೊಂದಿದೆ.

ಟೈಟಾನ್ ರೀಟೆಲ್ ನೆಟ್‍ವರ್ಕ್ ಕುರಿತು: 445ಕ್ಕೂ ಅಧಿಕ ಎಕ್ಸ್‍ಕ್ಲ್ಯೂಸಿವ್ ಮಳಿಗೆಯನ್ನು 180ಕ್ಕೂ ಅಧಿಕ ನಗರಗಳಲ್ಲಿ ಹೊಂದಿದ್ದು, ಟೈಟಾನ್ ಭಾರತದ ಬೃಹತ್ ವಾಚ್ ರೀಟೆಲರ್. ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ, ಆಫ್ರಿಕ ಸೇರಿದಂತೆ 32 ದೇಶಗಳಲ್ಲಿ ಅಸ್ತಿತ್ವ ಹೊಂದಿದೆ. 700ಕ್ಕು ಅಧಿಕ ಅಧಿಕೃತ ಸೇವಾ ಕೇಂದ್ರಗಳನ್ನು ಹೊಂದಿದೆ. 2011-12ರಲ್ಲಿ 50 ಲಕ್ಷ ಗ್ರಾಹಕರ ಗಡಿ ತಲುಪಿತ್ತು. ಸಾಕಷ್ಟು ಗ್ರಾಹಕ ಸಂಬಂಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೊಂದಿದ್ದು, 40 ಲಕ್ಷ ಸಕ್ರಿಯ ಗ್ರಾಹಕರನ್ನು ಹೊಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Titan offers renewed retail experience with six new stores in Bengaluru.Customers can avail range of products from showrooms in Koramangala, Marathahalli, Malleswaram, RT Nagar, Jayanagar,HRBR Layout.
Please Wait while comments are loading...