ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂದಿನಿ ತುಪ್ಪದ ಘಮಲು ಕಳೆದುಕೊಂಡ ತಿರುಪತಿ ಲಡ್ಡು!

By Vanitha
|
Google Oneindia Kannada News

ಬೆಂಗಳೂರು, ಅಕ್ಟೋಬರ್, 01 : 'ಲಡ್ಡು' ಎಂದಾಕ್ಷಣ ಮಾಮುಲಿಯಾಗಿ ನಮಗೆಲ್ಲಾ ನೆನಪಾಗೋದು ವಿಶ್ವವಿಖ್ಯಾತ ತಿರುಪತಿ ಲಡ್ಡು. ಅದರಿಂದ ಹೊರಹೊಮ್ಮುತ್ತಿದ್ದ ಮರುಳು ಮರುಳಾದ ನಂದಿನಿ ತುಪ್ಪದ ಘಮಲು. ತುಪ್ಪದ ಸುವಾಸನೆಯಿಂದಲೇ ಬಾಯಲ್ಲಿ ನೀರು ತರಿಸುತ್ತಿದ್ದ ತಿರುಪತಿ ಲಡ್ಡುವಿನಲ್ಲಿ ನಂದಿನಿ ತುಪ್ಪದ ಸುವಾಸನೆ ಛೇ! ಇನ್ಮುಂದೆ ಸಿಗೋದೇ ಇಲ್ಲಾ.

ಮಹಾರಾಷ್ಟ್ರದ ಖಾಸಗಿ ಕಂಪನಿಯೊಂದು ಕೆಎಂಎಫ್ ನಂದಿನಿ ತುಪ್ಪಕ್ಕಿಂತ ಕಡಿಮೆ ದರದಲ್ಲಿ ತುಪ್ಪ ಪೂರೈಕೆಯ ಟೆಂಡರ್ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ತಿರುಪತಿ ದೇವಾಲಯದ ಕಮಿಟಿ ನಂದಿನಿ ತುಪ್ಪದ ಪೂರೈಕೆಯನ್ನು ನಿರಾಕರಿಸಿದ್ದು, ಲಡ್ಡು ತನ್ನ ಗುಣಮಟ್ಟ ಕಳೆದುಕೊಳ್ಳುವ ಎಲ್ಲಾ ಸಾಧ್ಯತೆಗಳು ಗೋಚರವಾಗುತ್ತಿದೆ.[ಕೆಎಂಎಫ್: ಹಾಲಿನ ಖರೀದಿ ದರ 1 ರಿಂದ 1.50 ರೂ ಇಳಿಕೆ]

ಕೆಎಂಎಫ್ ಪ್ರತಿ ಆರು ತಿಂಗಳಿಗೊಮ್ಮೆ ಕೆ.ಜಿ ಗೆ 380 ರೂ ದರದಲ್ಲಿ, 1400 ಟನ್ ತುಪ್ಪವನ್ನು ತಿರುಪತಿಗೆ ಪೂರೈಕೆ ಮಾಡುತ್ತಿತ್ತು. ಈ ಬಾರಿಯ ಟೆಂಡರ್ ನಲ್ಲಿ 306 ರೂಗೆ ಪೂರೈಕೆ ಮಾಡುವ ನಿರ್ಣಯ ಪ್ರಕಟಿಸಿತ್ತು. ಆದರೆ ಮಹಾರಾಷ್ಟ್ರ ಕಂಪನಿ ತನ್ನ ಟೆಂಡರ್ ನಲ್ಲಿ 276 ದರದಲ್ಲಿ ತುಪ್ಪ ಒದಗಿಸುವುದಾಗಿ ಪ್ರಕಟಿಸಿತ್ತು. ಇದನ್ನು ಒಪ್ಪಿಕೊಂಡ ದೇವಾಲಯ ಕಮಿಟಿ ಮಹಾರಾಷ್ಟ್ರದ ಕಂಪನಿ ತುಪ್ಪದ ಪೂರೈಕೆ ಸಮ್ಮತಿ ನೀಡಿದೆ.[ಕೆಎಂಎಫ್ ನಂತೆ ಬ್ರಾಂಡೆಡ್ ಮಟನ್ ಸ್ಟಾಲ್ ಸ್ಥಾಪನೆ: ಸಿದ್ದರಾಮಯ್ಯ]

ತಿರುಪತಿಗೆ [ವಾಟ್ಸಾಪ್ ವಿಶೇಷ : ತಿರುಪತಿ ಶ್ರೀನಿವಾಸ ಮೂರ್ತಿಯ ವಿಸ್ಮಯ] ತುಪ್ಪ ಪೂರೈಕೆ ಕಡಿತವಾದುದರಿಂದ ಕೆಎಂಎಫ್ ಗೆ ಯಾವುದೇ ನಷ್ಟ ಸಂಭವಿಸುವುದಿಲ್ಲ. ಅಕಸ್ಮಾತ್ 306 ದರದಲ್ಲಿ ತುಪ್ಪ ಪೂರೈಸಿದ್ದಲ್ಲಿ ಸುಮಾರು 10 ರಿಂದ 14 ಕೋಟಿ ರೂ ನಷ್ಟವಾಗುವ ಸಂಭವಿತ್ತು. ಕರ್ನಾಟಕದಲ್ಲಿ ಕೆಎಂಎಫ್ ತುಪ್ಪಕ್ಕೆ ಭಾರೀ ಬೇಡಿಕೆ ಇರುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಪಿ. ನಾಗರಾಜು ತಿಳಿಸಿದ್ದಾರೆ.

English summary
Tirupati temple rejects Karnataka Milk Federation (KMF) ghee. Temple committee has given tender to Maharashtra Ghee Company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X