ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬನ್ನೇರುಘಟ್ಟದಲ್ಲಿ ಜಾರಿಗೆ ಬರಲಿದೆ ತಿರುಪತಿ ಮಾದರಿ ವ್ಯವಸ್ಥೆ!

By Gururaj
|
Google Oneindia Kannada News

ಬೆಂಗಳೂರು, ಜುಲೈ 17 : ಬನ್ನೇರುಘಟ್ಟ ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಗಂಟೆಗಟ್ಟಲೇ ಕಾಯುವ ಕುರಿತು ಹಲವು ದೂರುಗಳನ್ನು ನೀಡಿದ್ದರು. ಈಗ ತಿರುಪತಿ ದೇವಸ್ಥಾನದ ಮಾದರಿಯಲ್ಲಿ ಬನ್ನೇರುಘಟ್ಟದಲ್ಲಿ ಟಿಕೆಟ್ ವ್ಯವಸ್ಥೆ ಜಾರಿಗೆ ತರಲಾಗುತ್ತದೆ.

ಬನ್ನೇರುಘಟ್ಟ ಉದ್ಯಾನಕ್ಕೆ ಪ್ರತಿದಿನ ಸುಮಾರು 1,500 ಪ್ರವಾಸಿಗರು ಭೇಟಿ ನೀಡುತ್ತಾರೆ. ವಾರಾಂತ್ಯದಲ್ಲಿ ಸುಮಾರು 4000 ಜನರು ಭೇಟಿ ನೀಡುತ್ತಾರೆ. ಆದರೆ, ಟಿಕೆಟ್ ಪಡೆಯಲು, ಸಫಾರಿ ಬಸ್ ಏರಲು ಅವರು ಕಾಯುವುದು ಅನಿವಾರ್ಯವಾಗಿತ್ತು.

ರಾಜ್ಯದ ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯಗಳ ಪ್ರವೇಶ ಶುಲ್ಕ ಏರಿಕೆರಾಜ್ಯದ ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯಗಳ ಪ್ರವೇಶ ಶುಲ್ಕ ಏರಿಕೆ

ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಈ ಕುರಿತು ಹಲವು ಬಾರಿ ದೂರು ನೀಡಿದ್ದರು. ಆದ್ದರಿಂದ, ಆಡಳಿತ ಮಂಡಳಿ ಕೆಲವೊಂದು ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಇದರಿಂದಾಗಿ ಜನರು ಸರತಿ ಸಾಲಿನಲ್ಲಿ ಕಾಯುವುದಕ್ಕೆ ಕಡಿವಾಣ ಬೀಳುವ ನಿರೀಕ್ಷೆಇದೆ.

Tirumala model ticket issuing in Bannerghatta park soon

ತಿರುಪತಿ ಮಾದರಿ : ತಿರುಪತಿ ದೇವಾಲಯದಲ್ಲಿ ಇಂತಿಷ್ಟು ಸಮಯಕ್ಕೆ ಟಿಕೆಟ್ ಕೌಂಟರ್ ಬಳಿ ಬರಬೇಕು ಎಂದು ಸಮಯ ನಿಗದಿ ಮಾಡಲಾಗುತ್ತದೆ. ಇದೇ ಮಾದರಿಯಲ್ಲಿ ಬನ್ನೇರುಘಟ್ಟದಲ್ಲಿ ಶೀಘ್ರದಲ್ಲಿಯೇ ವ್ಯವಸ್ಥೆ ಮಾಡಲಾಗುತ್ತದೆ.

ಬನ್ನೇರುಘಟ್ಟ : ಬೆಂಗಾಲ್ ಟೈಗರ್ v/s ವೈಟ್ ಟೈಗರ್ ಕಾದಾಟಬನ್ನೇರುಘಟ್ಟ : ಬೆಂಗಾಲ್ ಟೈಗರ್ v/s ವೈಟ್ ಟೈಗರ್ ಕಾದಾಟ

ಟಿಕೆಟ್ ಪಡೆಯುವ ಪ್ರವಾಸಿಗರಿಗೆ ಇಂತಿಷ್ಟು ಸಮಯಕ್ಕೆ ಇಲ್ಲಿಗೆ ಹಾಜರಾದರೆ ಸಫಾರಿ ವಾಹನ ಬರುತ್ತದೆ ಎಂದು ಮೊಬೈಲ್‌ಗೆ ಸಂದೇಶ ರವಾನೆ ಮಾಡಲಾಗುತ್ತದೆ. ಪ್ರವಾಸಿಗರು ಆ ಸಮಯಕ್ಕೆ ಆಗಮಿಸಿ ವಾಹನವನ್ನು ಪಡೆಯಬಹುದಾಗಿದೆ.

ಸುಮಾರು ಮೂರು ಗಂಟೆಗಳ ಕಾಲ ಕಾದು ಟಿಕೆಟ್ ಪಡೆದ ಮೇಲೆ ಕೊನೆ ಕ್ಷಣದಲ್ಲಿ ಸಫಾರಿ ರದ್ದಾಗುತ್ತಿತ್ತು. ಆದ್ದರಿಂದ, ಪ್ರವಾಸಿಗರು ಅಕ್ರೋಶ ವ್ಯಕ್ತಪಡಿಸುತ್ತಿದ್ದರು. ಇದನ್ನು ತಡೆಯಲು ತಿರುಪತಿ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ.

English summary
Tourists who will visit Bannerghatta Biological Park has to wait for hours just to book a ticket for a safari and another few hours to get into the bus. But, now officials set to introduce Tirumala model. People who buy a ticket will get a message on their mobile about the reporting time according to Tirumala model.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X