ಬೇಸಿಗೆ ಹೊಡೆತದಿಂದ ತಪ್ಪಿಸಿಕೊಳ್ಳಲು ಸುಲಭ ಟಿಪ್ಸ್ ಗಳು

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 18: ಬೇಸಿಗೆಯ ಹೊಡೆತಕ್ಕೆ ಮೈ ಚರ್ಮ ಕಪ್ಪಾಗುತ್ತಿದೆ. ರಸ್ತೆಗೆ ಬಂದರೆ ಸ್ವಲ್ಪ ಹೊತ್ತಿಗೆ ಸುಸ್ತಾಗಿ ಎಲ್ಲಾದರೂ ನೆರಳಿರುವ ಜಾಗದಲ್ಲಿ ಕೂರೋಣ ಅನಿಸುತ್ತದೆ. ಎಷ್ಟು ನೀರು ಕುಡಿದರೂ ಸಾಕಾಗುತ್ತಿಲ್ಲ. ಮಜ್ಜಿಗೆ, ತಂಪು ಪಾನೀಯ, ಐಸ್ ಕ್ರೀಂ ಎಲ್ಲವೂ ಕೆಲ ನಿಮಿಷದ ತಾತ್ಕಾಲಿಕ ಶಮನವೇ ವಿನಾ ಅವುಗಳಿಂದ ಹೆಚ್ಚಿನ ಪ್ರಯೋಜನ ಆಗುತ್ತಿಲ್ಲ.

ಕರ್ನಾಟಕದ ಯಾವ ಜಿಲ್ಲೆ, ದೇಶದ ಯಾವುದೇ ರಾಜ್ಯದಲ್ಲೂ ಬಿಸಿಲಿನ ತಾಪವೇ ಮುಖ್ಯ ಸುದ್ದಿಯಾಗುತ್ತಿದೆ. ಬಿಸಿಲ ಶಾಖ ಮತ್ತೂ ಹೆಚ್ಚಾಗಿ, ದೇಹದ ಮೇಲೆ ಪರಿಣಾಮ ಬೀರಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ಇಂಥ ಸಂದರ್ಭದಲ್ಲಿ ಕೆಲವು ಸಲಹೆಗಳನ್ನು ಇಲ್ಲಿ ಕೊಡಲಾಗಿದೆ. ಪಾಲಿಸಿದರೆ ಅಷ್ಟರ ಮಟ್ಟಿಗೆ ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಬಹುದು.[ಭೀಕರ ಬಿಸಿಲು : ಇತರ ನಗರಗಳೊಂದಿಗೆ ಕಲಬುರಗಿ ಪೈಪೋಟಿ]

Tips to minimise the impact during the heat wave

* ಮಧ್ಯಾಹ್ನ 12ರಿಂದ 3ರವರೆಗೆ ಮನೆಯಿಂದ ಆಚೆ ಹೋಗದಿರುವುದು ಉತ್ತಮ.
* ಬಾಯಾರಿಕೆ ಆಗದಿದ್ದರೂ ಪರವಾಗಿಲ್ಲ, ಆಗಾಗ ನೀರು ಕುಡಿಯಿರಿ. ಸನ್ ಗ್ಲಾಸ್ ಹಾಕಿಕೊಳ್ಳಿ. ಛತ್ರಿ, ಟೋಪಿ, ಶೂ ಅಥವಾ ಚಪ್ಪಲಿ ಹಾಕಿಕೊಳ್ಳಿ

Tips to minimise the impact during the heat wave

* ತಿಳಿ ಬಣ್ಣದ, ಹಗುರವಾದ, ದೊಗಲೆಯಾದ ಹತ್ತಿ ಬಟ್ಟೆಗಳನ್ನೇ ಧರಿಸಿ. ಮಧ್ಯಾಹ್ನ 12ರಿಂದ 3 ಸೂರ್ಯನಿಗೆ ಮೈಯೊಡ್ಡಿ ಶ್ರಮದ ಕೆಲಸ ಮಾಡಬೇಡಿ

* ಪ್ರಯಾಣದ ಸಂದರ್ಭದಲ್ಲಿ ನೀರು ತೆಗೆದುಕೊಂಡು ಹೋಗಿ

* ಮದ್ಯಪಾನ, ಕಾಫಿ-ಟೀ ಸೇವನೆ ಹಾಗೂ ಕಾರ್ಬೊನೇಟಡ್ ತಪ್ಪು ಪಾನೀಯ ಸುತಾರಾಂ ಬೇಡ[ಬಿಸಿಲ ಹೊಡೆತದಿಂದ ತಪ್ಪಿಸಿಕೊಳ್ಳುವುದು ಹೇಗೆ?]

Tips to minimise the impact during the heat wave

* ಹೆಚ್ಚು ಪ್ರೋಟೀನ್ ಯಿರುವ ಆಹಾರ ಸೇವಿಸಬೇಡಿ. ತಂಗಳು ಆಹಾರ ಪದಾರ್ಥ ತಿನ್ನಬೇಡಿ

* ಪಾರ್ಕಿಂಗ್ ಮಾಡಿದ ವಾಹನದೊಳಗೆ ಮಕ್ಕಳನ್ಣಾಗಲೀ ಸಾಕು ಪ್ರಾಣಿಗಳನ್ಣಾಗಲೀ ಬಿಡಬೇಡಿ

* ಸ್ವಲ್ಪ ಅಸ್ವಸ್ಥತೆ ಕಂಡುಬಂದರೂ, ಸುಸ್ತೆನಿಸಿದರೂ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ

* ಒಆರ್ ಎಸ್, ಲಸ್ಸಿ, ಅನ್ನದ ಗಂಜಿ, ನಿಂಬೆಹಣ್ಣಿನ ಪಾನಕ, ಮಜ್ಜಿಗೆ.. ಹೀಗೆ ದೇಹಕ್ಕೆ ನೀರಿನಂಶ ಪೂರೈಸುವ ಪಾನೀಯವನ್ನು ಕುಡಿಯಿರಿ

Tips to minimise the impact during the heat wave

* ಮನೆಯಲ್ಲಿ ಸಾಕಿರುವ ಪ್ರಾಣಿಗಳನ್ನು ನೆರಳಿನಲ್ಲೇ ಕಟ್ಟಿ ಹಾಕಿ, ಅವುಗಳಿಗೆ ಅಗತ್ಯಪ್ರಮಾಣದ ನೀರು ಪೂರೈಸಿ

* ಮನೆಯನ್ನು ತಂಪಾಗಿ ಇರುವಂತೆ ನೋಡಿಕೊಳ್ಳಿ. ಕರ್ಟನ್ ಬಳಸಿ, ಸೂರ್ಯನ ಕಿರಣಗಳು ನೇರ ತಗುಲದಂತೆ ವ್ಯವಸ್ಥೆ ಮಾಡಿ. ರಾತ್ರಿ ವೇಳೆ ಕಿಟಕಿ ಬಾಗಿಲನ್ನು ತೆರೆದಿಡಿ.

Tips to minimise the impact during the heat wave

* ಫ್ಯಾನ್ ಬಳಸಿ. ಆಗಾಗ ತಣ್ಣೀರಿನಲ್ಲಿ ಸ್ನಾನ ಮಾಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Heat Wave conditions can result in physiological strain, which could even result in death. To minimise the impact during the heat wave and to prevent serious ailment or death because of heat stroke, you can take the following measures.
Please Wait while comments are loading...