ಇಂದು ರಾಜ್ಯದಾತ್ಯಂತ ಆಚರಣೆಗೊಳ್ಳಲಿದೆ ವಿವಾದದ ಟಿಪ್ಪು ಜಯಂತಿ!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 10: ಹಲವು ವಿವಾದಗಳ ನಡುವಲ್ಲೂ ನ.10 ಟಿಪ್ಪು ಜಯಂತಿ ಆಚರಿಸುವ ತನ್ನ ನಡೆಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಇಂದು(ನ.10) ರಾಜ್ಯದಾದ್ಯಂತ ಟಿಪ್ಪು ಸುಲ್ತಾನ್ ಜನ್ಮದಿನದ ಆಚರಣೆ ನಡೆಯಲಿದೆ.

ಟಿಪ್ಪು ಜಯಂತಿ: ಕೊಡಗಿನಲ್ಲಿ ಖಾಕಿ ಸರ್ಪಗಾವಲು!

ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ಸಂಜೆ ಟಿಪ್ಪು ಜಯಂತಿಯ ಕಾರ್ಯಕ್ರಮಗಳು ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಉಮಾಶ್ರೀ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು.

ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಸಚಿವರ ಹೆಸರಿಲ್ಲ!

Tippu Jayanti will be celebrating on Nov 10th in Vidhana Soudha

In Pics : ಟಿಪ್ಪು ಸುಲ್ತಾನ್ ಯಾರಂತ ಗೊತ್ತಾ ಪುಟ್ಟಾ?

ಬಿಜೆಪಿಯ ಹಲವರಿಗೂ ಆಹ್ವಾನವಿದೆಯಾದರೂ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಬಿಲ್ ಕುಲ್ ಭಾಗವಹಿಸೋದಿಲ್ಲ ಎಂದು ಬಿಜೆಪಿ ನಾಯಕರು ಖಡಕ್ಕಾಗಿ ಹೇಳಿದ್ದಾರೆ.

ಟಿಪ್ಪು ಜಯಂತಿ: ಬಿಗಿ ಭದ್ರತೆ ಕೈಗೊಳ್ಳುವಂತೆ ರಾಮಲಿಂಗಾ ರೆಡ್ಡಿ ಸೂಚನೆ

ಇದರೊಂದಿಗೆ ಟಿಪ್ಪು ವಿರೋಧಿಗಳು ಮತ್ತು ಕೆಲ ಬಲಪಂಥೀಯರು ಈ ದಿನವನ್ನು 'ಕರಾಳ ದಿನ'ವನ್ನಾಗಿ ಆಚರಿಸಲು ನಿರ್ಧರಿಸಿದ್ದಾರೆ. ಆದ್ದರಿಂದ ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

ಟಿಪ್ಪು ಜಯಂತಿ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ

ಟಿಪ್ಪು ಒಬ್ಬ ದೇಶದ್ರೋಹಿ, ಆತ ಹಿಂದು ಮತ್ತು ಕ್ರೈಸ್ತರ ಮಾರಣಹೋಮ ನಡೆಸಿದವನು ಎಂಬುದು ಹಲವರ ವಾದ. ಆದರೆ ಕಾಂಗ್ರೆಸ್ ಪ್ರಕಾರ ಟಿಪ್ಪು ಒಬ್ಬ ಅಪ್ರತಿಮ ದೇಶಪ್ರೇಮಿ ಮತ್ತು ಸ್ವಾತಂತ್ರ್ಯಹೋರಾಟಗಾರ. ಅದಕ್ಕೆಂದೇ ಟಿಪ್ಪು ಜಯಂತಿ ಆಚರಿಸಲು ಮುಂದಾಗಿರುವುದಾಗಿ ಸರ್ಕಾರ ಹೇಳಿದ್ದರೂ, ಅಲ್ಪಸಂಖ್ಯಾತರ ಓಲೈಕೆಗಾಗಿ ಸರ್ಕಾರ ದೇಶದ್ರೋಹಿಯ ವೈಭವೀಕರಣ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ದೂರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Eventhough many people oppose celebration of Tippu Jayanti (Tipu sultan birthday) in Karnataka, Karnataka government will celebrate his birthday on Nov 10, evening 6:30 in Vidhana Soudha

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ